ಹಾಸನ: ಈ ಹಿಂದಿನ ವರ್ಷದ ಬಜೆಟ್‌ನಲ್ಲಿ ಹಾಸನ ಜಿಲ್ಲೆ ಅಭಿವೃದ್ಧಿಗೆ ಯಾವೊಂದು ಹೊಸ ಘೋಷಣೆ ಆಗಿರಲಿಲ್ಲ. ಘೋಷಣೆಯಾಗಿದ್ದ ತೆಂಗು ನಾರಿನ ಉದ್ದಿಮೆಗೆ ಪ್ರೋತ್ಸಾಹದಂತಹ ಸಣ್ಣ ಯೋಜನೆಗಳೂ ಅನುಷ್ಠಾನವಾಗಲಿಲ್ಲ. ಆದರೆ ಈ ವರ್ಷದ ರಾಜಕೀಯ ಬೆಳವಣಿಗೆ ಗಮನಿಸಿದರೆ ಜಿಲ್ಲೆಯನ್ನು ಮುಖ್ಯಮಂತ್ರಿಯವರು ಕಡೆಗಣಿಸುವುದಿಲ್ಲ ಎಂಬ ಆಶಾಭಾವ ಮೂಡಿದೆ.
ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ 2 ವರ್ಷಗಳ ಬಜೆಟ್‌ನಲ್ಲಿ ಜಿಲ್ಲೆಗೆ ಭರಪೂರ ಘೋಷಣೆಗಳಾಗಿದ್ದವು. ಆ ಪೈಕಿ ಬಹು ಪಾಲು ಯೋಜನೆ ಅನುಷ್ಠಾನವಾಗುತ್ತಿವೆ. ಆದರೆ, ಬಿಜೆಪಿ ಸರ್ಕಾರ ಬಂದ ನಂತರ ಜಿಲ್ಲೆಯನ್ನು ಕಡೆ ಗಣಿ ಸುತ್ತಿದೆ ಎಂಬ ಭಾವನೆ ಮೂಡಿತ್ತು. ಆದರೆ ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಯೊಂದಿಗೆ ಜೆಡಿಎಸ್ ಮೃಧು ಧೋರಣೆ ತಾಳಿದೆ. ಹೀಗಾಗಿ ಬಿಜೆಪಿ ಸರ್ಕಾರ ಜಿಲ್ಲೆಯ ಅಭಿವೃದ್ಧಿ ಮೇಲೆ ರಾಜಕೀಯ ದ್ವೇಷ ಸಾಧನೆ ಮಾಡುತ್ತದೆ ಎಂಬ ಅಪವಾದ ಈ ಬಜೆಟ್‌ನಲ್ಲಿ ನಿವಾರಣೆ ಯಾಗುವ ಸಾಧ್ಯತೆಯಿದೆ.
ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಸಿಎಂ ನಿವಾ ಸದ ಬಳಿ ಜಿಲ್ಲೆಯ ಜೆಡಿಎಸ್ ಶಾಸಕರು ಮತ್ತು ಸಂಸದರು ಧರಣಿ ನಡೆಸಲು ಮುಂದಾಗಿದ್ದರು. ಈ ವೇಳೆ ಸಿಎಂ ಬಿಎಸ್‌ವೈ ನೀಡಿದ ಭರವಸೆ ಯಿಂದ ಜೆಡಿಎಸ್ ಮುಖಂಡರು ಸಮಾ ಧಾನಗೊಂಡಿದ್ದು ಒತ್ತಾ ಯಕ್ಕೆ ಮನ್ನಣೆ ಸಿಗಬಹು ದೆಂದು ನಿರೀಕ್ಷೆಯನ್ನಿಟ್ಟು ಕೊಂಡಿದ್ದಾರೆ
ಜೀವ ವೈವಿಧ್ಯ ಪಾರ್ಕ್ ಅಭಿವೃದ್ಧಿಗೊಳಿಸಿ
ಹಾಸನ ಹೊರ ವಲಯದ ಗೆಂಡೆಕಟ್ಟೆ ಅರಣ್ಯಧಾಮವನ್ನು ಜೀವ ವೈವಿಧ್ಯ ಉದ್ಯಾನವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ರಾಜ್ಯದ ಜೀವ ವೈವಿಧ್ಯ ಅಭಿವೃಧಿœ ಮಂಡಳಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯೂ ಯೋಜನೆ ರೂಪಿಸಿ ಅನುದಾನಕ್ಕೆ ಕಾಯುತ್ತಿದೆ. ಹೀಗಾಗಿ ಬಜೆಟ್‌ನಲ್ಲಿ ಗೆಂಡೆಕಟ್ಟೆ ಅರಣ್ಯಧಾಮವನ್ನು ಜೀವ ವೈವಿಧ್ಯ ಉದ್ಯಾನವನ್ನಾಗಿ ಅಭಿವೃದ್ಧಿಪಡಿಸಲು ಬಜೆಟ್‌ನಲ್ಲಿ ಅನುದಾನ ಘೋಷಣೆ ಸಾಧ್ಯತೆ ಇದೆ.
ವಿಮಾನನಿಲ್ದಾಣ ನಿರ್ಮಾಣ
ಜೆಡಿಎಸ್ ಮುಖಂಡರ ನಿರೀಕ್ಷೆಗೆ ಪೂರಕವಾಗಿ ಹಾಸನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಬಿಎಸ್‌ವೈ ವಿಧಾನಸಭೆಯಲ್ಲಿ ಘೋಷಣೆ ಮಾಡಿದ್ದರು. ಅದಕ್ಕೆ ಪೂರಕವಾಗಿ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದೆ. ಹೀಗಾಗಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅನುದಾನ ಘೋಷಣೆ ನಿರೀಕ್ಷೆಯಿದೆ.
ಎನ್.ನಂಜುಂಡೇಗೌಡ