ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್, ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ರಾಜಭವನದಲ್ಲಿ ಭೇಟಿಯಾಗಿ ಮಾತುಕತೆ ನಡಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಂಗನಾ “ಈ ಸ್ಥಳದ ರಕ್ಷಕರು ಆಗಿರುವ ರಾಜ್ಯಪಾಲರನ್ನು ಭೇಟಿಯಾಗಿದ್ದೇನೆ. ನನಗೆ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಮತ್ತು ನನಗಾದ ಅನ್ಯಾಯವನ್ನು ಸಂಪೂರ್ಣವಾಗಿ ಹೇಳಿದ್ದೇನೆ. ರಾಜ್ಯಪಾಲರು ನನ್ನನ್ನು ಮಗಳಂತೆ ಕಂಡರು. ಮಾತ್ರವಲ್ಲದೆ ನನ್ನ ಮಾತುಗಳನ್ನು ಗಮನವಿಟ್ಟು ಕೇಳಿದರು.
ನನಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಿದೆ. ಆ ಮೂಲಕ ಯುವತಿಯರು ಸೇರಿದಂತೆ ಎಲ್ಲಾ ನಾಗರಿಕರ ನಂಬಿಕೆಯನ್ನು ವ್ಯವಸ್ಥೆಯಲ್ಲಿ ಮರಳಿ ಸ್ಥಾಪಿಸಿದಂತಾಗುತ್ತದೆ ಎಂದರು.
Related Articles
ಬಳಿಕ ರಾಜಭವನದಿಂದು ಹಿಂದಿರುಗಿದ ಕಂಗನಾ ಹಿಮಾಚಲ ಪ್ರದೇಶಕ್ಕೆ ಪ್ರಯಾಣಿಸುವುದಾಗಿ ತಿಳಿಸಿದ್ದಾರೆ. ರಾಜಭವನಕ್ಕೆ ತೆರಳುವ ಮುನ್ನ ಕೂಡ ಕಂಗನಾಗೆ ಪ್ರತಿಭಟನೆಗಳು ಎದುರಾಗಿದ್ದವು. ಅದಾಗ್ಯೂ ರಾಜ್ಯಪಾಲರನ್ನು ಭೇಟಿಯಾದ ನಿಖರ ಕಾರಣಗಳು ತಿಳಿದುಬಂದಿಲ್ಲವಾಗಿದ್ದು, ಕಂಗನಾ ಜೊತೆ ಸಹೋದರಿ ಮತ್ತು ಮ್ಯಾನೇಜರ್ ಆಗಿರುವ ರಂಗೋಲಿ ಚಾಂಡೇಲ್ ಕೂಡ ರಾಜ್ಯಪಾಲರ ಭೇಟಿಯಾಗಿದ್ದರು.
ಇದಕ್ಕೂ ಮುನ್ನ ಕಂಗನಾ ಮುಂಬೈಯನ್ನು ಮಿನಿ ಪಾಕ್ ಆಕ್ರಮಿತ ಕಾಶ್ಮೀರ ಎಂದೇ ಕರೆದಿದ್ದರು. ಇದು ಶಿವಸೇನಾ ಮತ್ತು ಕಂಗನಾ ನಡುವಿನ ಸಮರ ತಾರಕಕ್ಕೇರಲು ಕಾರಣವಾಗಿತ್ತು. ಇದರ ಬೆನ್ನಲ್ಲೇ ಮುಂಬೈನಲ್ಲಿರುವ ಕಂಗನಾ ಕಚೇರಿಯನ್ನು ಮುಂಬೈ ಮಹಾನಗರ ಪಾಲಿಕೆ ನೆಲಸಮ ಮಾಡಲು ಮುಂದಾಗಿತ್ತು.