ಬೆನ್ನು ತಟ್ಟುತ್ತಾರೆ, ಶಹಬ್ಟಾಸ್ ಎನ್ನುತ್ತಾರೆ. ಕಾರಣವಿಷ್ಟೇ
ಬದುಕಿನಲ್ಲಿ ಭರವಸೆಯೇ ಇಲ್ಲದಿದ್ದರೆ ನಾವು ಬದುಕುವುದಾದರೂ ಹೇಗೆ ತಾನೇ ಸಾಧ್ಯ.
Advertisement
ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಹಂಬಲ ಎಲ್ಲರಿಗೂ ಇರುತ್ತದೆ. ಆದರೆ ಸಾಧಿಸುವ ಮಂದಿ ಕೆಲವೇ ಕೆಲವು. ಕಾರಣ ನಮಗೆ ನಮ್ಮ ಮೇಲೆ, ನಾಳೆಯ ಬಗ್ಗೆ ಭರವಸೆಯೇ ಇಲ್ಲ. ಹೀಗಿರುವಾಗ ಸಾಧಿಸುವುದಾದರೂ ಹೇಗೆ?
Related Articles
ಜೀವನದಲ್ಲಿ ಏನು ಮಾಡುವುದಕ್ಕೆ ನಮ್ಮಿಂದ ಸಾಧ್ಯವಿಲ್ಲವೋ ಅದರ ಬಗ್ಗೆ ಯೋಚನೆ ಮಾಡುವುದಕ್ಕಿಂತ ನಮ್ಮಿಂದ ಏನು ಮಾಡಲು ಸಾಧ್ಯವಿದೆಯೋ ಅದರ ಬಗ್ಗೆ ಯೋಚನೆ ಮಾಡಬೇಕು. ಆಗ ಬದುಕಿನ ಹಾದಿ ಸರಳವಾಗುವುದು, ಭರವಸೆಯ ದಾರಿ ತೆರೆದುಕೊಳ್ಳುವುದು.
Advertisement
ಯಶಸ್ಸಿನ ಸೂತ್ರಪರೀಕ್ಷೆಯಲ್ಲಿ ಫೇಲಾದೆ, ಸಂದರ್ಶನದಲ್ಲಿ ಕೆಲಸ ಸಿಗಲಿಲ್ಲ, ಬಿಸ್‌ನೆಸ್‌ನಲ್ಲಿ ನಷ್ಟವಾಯ್ತು… ಹೀಗೆ ಬದುಕಿನಲ್ಲಿ ಎದುರಾಗುವ ಸಣ್ಣಸಣ್ಣ ಸೋಲಿಗೂ ಅಂಜಿ ನಾವು ಕರ್ತವ್ಯದಿಂದ ಹಿಂದೆ ಸರಿಯುತ್ತೇವೆ. ಕಾರಣ ಭರವಸೆ ಎಂಬುದು ನಮ್ಮೊಳಗೆ ಇಲ್ಲದೇ ಇರುವುದು. ನಾಳೆಯ ಬಗ್ಗೆ ಭರವಸೆ ಇಟ್ಟುಕೊಂಡು ಯಾವುದೇ ಕಾರ್ಯ ಮಾಡಿದರೂ ಬದುಕಿನಲ್ಲಿ ನಾವು ಯಶಸ್ವಿಯಾಗಲು ಸಾಧ್ಯವಿದೆ. ಭರವಸೆಯ ಹೂವು ಅರಳಲಿ
ಯಾವುದೇ ಕೆಲಸ ಮಾಡದೆ ಸುಮ್ಮನಿರುವುದು ನೆಮ್ಮದಿ ಎಂದುಕೊಳ್ಳುವವರು ತುಂಬಾ ಮಂದಿ ಇದ್ದಾರೆ. ಆದರೆ ಇದು ಭವಿಷ್ಯಕ್ಕೆ ಮಾರಕವಾಗುವುದು. ಸುಮ್ಮನೆ ಕುಳಿತರೆ ಆರೋಗ್ಯ ಸಮಸ್ಯೆ ಮಾತ್ರವಲ್ಲ ಮಾನಸಿಕ ಸಮಸ್ಯೆಯೂ ಕಾಡಲಾರಂಭಿಸುತ್ತದೆ. ಹೀಗಾಗಿ ಇವತ್ತು ಕಷ್ಟಪಟ್ಟು ದುಡಿದರೆ ನಾಳೆ ನೆಮ್ಮದಿಯಾಗಿರಬಹುದು ಎಂಬ ಭರವಸೆ ನಮ್ಮ ಮನದೊಳಗೆ ಹುಟ್ಟಿದರೆ ಸಾಕು ಅದುವೇ ನಮ್ಮ ಮುಂದಿನ ಬದುಕನ್ನು ಸುಂದರವಾಗಿಸುತ್ತದೆ. ಭರವಸೆಯ ದೀಪ ಹಚ್ಚೋಣ
ಸದ್ಗುರು ಜಗ್ಗಿ ವಾಸುದೇವ್ ಹೇಳುವಂತೆ “ಬದುಕಿನಲ್ಲಿ ಸಮಸ್ಯೆಗಳಿಗೆ ಕೊರತೆ ಇರುವುದಿಲ್ಲ. ಅದಕ್ಕೆ ಪರಿಹಾರವನ್ನು
ಕಂಡುಕೊಳ್ಳಬೇಕು. ಯಾಕೆಂದರೆ ನಾವು ಯಾರೂ ಯಂತ್ರಗಳಲ್ಲ’. ಯಂತ್ರಗಳಾದರೆ ಸಮಸ್ಯೆಗಳನ್ನು ಪರಿಹರಿಸಲು ಎಂಜಿನಿಯರ್
ಅನ್ನೇ ಕರೆತರಬೇಕು. ಆದರೆ ನಮ್ಮ ಬದುಕಿನ ಕಷ್ಟಗಳನ್ನು ಪರಿಹರಿಸಲು ಭರವಸೆಯ ಬೆಳಕೊಂದನ್ನು ನಾವೇ ಉರಿಸಬೇಕು. ಸವಾಲುಗಳನ್ನು ಎದುರಿಸೋಣ
ಬದುಕಿನಲ್ಲಿ ಸವಾಲುಗಳನ್ನು ಎದುರಿಸಬೇಕು. ಅದು ನಮಗೆ ಬದುಕುವುದನ್ನು ಹೇಳಿಕೊಡುತ್ತದೆ, ಗೆಲ್ಲುವುದನ್ನು ತೋರಿಸುತ್ತದೆ, ಕಷ್ಟವನ್ನು ಪರಿಚಯಿಸುತ್ತದೆ, ಇನ್ನೊಬ್ಬರಿಗೆ ಮಾರ್ಗದರ್ಶಿಯಾಗಲು ಪ್ರೇರೇಪಿಸುತ್ತದೆ ಎನ್ನುತ್ತಾರೆ ಸ್ವಾಮಿ ವಿವೇಕಾನಂದ. ಜೀವನದಲ್ಲಿ ಸವಾಲುಗಳಿಗೆ ಹೆದರಿ ಕುಳಿತರೆ ನಮ್ಮ ಸುಂದರ ಬದುಕು ನಷ್ಟವಾಗಿ ಹೋಗುವುದು. •ವಿದ್ಯಾ ಕೆ. ಇರ್ವತ್ತೂರು