Advertisement

ಗ್ರಾಮೀಣ ಭಾಗದ ಹೈನುಗಾರರ ಆಶಾಕಿರಣ

08:21 PM Feb 12, 2020 | Sriram |

ಗ್ರಾಮೀಣ ಭಾಗದ ಹೈನುಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಿಂದ ರೂಪು ತಳೆದ ಬಿದ್ಕಲ್‌ಕಟ್ಟೆ ಹಾಲು ಉತ್ಪಾದಕರ ಸಂಘ ನಡೆದು ಬಂದ ಹಾದಿ ಎಲ್ಲರಿಗೂ ಮಾದರಿ.

Advertisement

ಬಿದ್ಕಲ್‌ಕಟ್ಟೆ: ಗ್ರಾಮೀಣ ಭಾಗದ ಹೈನುಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಿಂದ ರೂಪು ತಳೆದ ಬಿದ್ಕಲ್‌ಕಟ್ಟೆ ಹಾಲು ಉತ್ಪಾದಕರ ಸಂಘ ನಡೆದು ಬಂದ ಹಾದಿ ಮಾದರಿಯಾದದ್ದು. ಹೈನುಗಾರಿಕೆಯ ಮೂಲಕ ಆರ್ಥಿಕಾಭಿವೃದ್ಧಿಗೆ ಕಾರಣವಾಗಿ ಜನರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದೊಂದಿಗೆ ಹುಟ್ಟಿಕೊಂಡದ್ದು ಈ ಸಂಘವು ಮಾದರಿ ಸಂಘವಾಗಿ ಬೆಳೆದು ನಿಂತಿದೆ.

ಇಲ್ಲಿನ ಪಂಚಾಯತ್‌ನ ಹಳೆಯ ಕಟ್ಟಡದಲ್ಲಿ ಸಂಘದ ಅಧ್ಯಕ್ಷ ದಿ| ಹಾರ್ದಳ್ಳಿ ಅಂತಯ್ಯ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಆರಂಭಗೊಂಡಿದ್ದು. 46 ವರ್ಷ ತುಂಬಿದೆ. ಗ್ರಾಮೀಣ ಭಾಗದ ಮೊದಲ ಹಾಲು ಉತ್ಪಾದಕರ ಸಂಘ ಎಂಬ ಹೆಗ್ಗಳಿಕೆ ಇದರದ್ದು.

1974 ರಲ್ಲಿ ಆರಂಭ
ಹಾಲಾಡಿ, ಶಂಕರನಾರಾಯಣ, ಹಳ್ಳಾಡಿ , ಮೊಳಹಳ್ಳಿ ಸೇರಿದಂತೆ ಅತ್ಯಂತ ದೊಡ್ಡ ವ್ಯಾಪ್ತಿಯನ್ನು ಒಳಗೊಂಡಿರುವ ಈ ಸಂಘವು 1974 ಮಾ.5ರಂದು ಪ್ರಾರಂಭವಾಯಿತು. ಅಂದು ಸಂಘದಲ್ಲಿ 75 ಮಂದಿ ಸದಸ್ಯರಿದ್ದರು. 150 ಲೀ. ಹಾಲು ಸಂಗ್ರಹವಾಗುತ್ತಿತ್ತು.

ಆ ಕಾಲದಲ್ಲಿ ಗ್ರಾಮೀಣ ಭಾಗದಿಂದ ಮೈಲು ದೂರ ಕ್ರಮಿಸಿ ಹಾಲು ತೆಗೆದುಕೊಂಡು ಹೋಗುತ್ತಿರುವುದನ್ನು ಕಂಡ ಗ್ರಾಮಸ್ಥರು ಹೈನುಗಾರಿಕೆಗೆ ಪ್ರೋತ್ಸಾಹ ನೀಡಿ, ಗುಣಮಟ್ಟದ ಹಾಲು ಸಂಗ್ರಹಿಸಬೇಕು ಎನ್ನುವ ಉದ್ದೇಶದಿಂದ ಸಂಘ ಸ್ಥಾಪಿಸಿದರು.

Advertisement

1100 ಲೀ. ಹಾಲು ಸಂಗ್ರಹ
ಕಸಂಘವು ರಜತೋತ್ಸವ
ಆಚರಿಸುವ ಸಂದರ್ಭ 2001 ರಲ್ಲಿ ನೂತನ ಕ್ಷೀರ ಜ್ಯೋತಿ ಕಟ್ಟಡದ ಕನಸು ನನಸಾಗಿಸಿತು. ಪ್ರಸ್ತುತ ಸುಮಾರು 315 ಸದಸ್ಯರನ್ನು ಸಂಘ ಒಳಗೊಂಡಿದ್ದು ನಿತ್ಯ ಸುಮಾರು 1100 ಲೀ. ಹಾಲು ಸಂಗ್ರಹವಾಗುತ್ತಿದೆ. ಸ್ಥಳೀಯರಾದ ವನಜಾ ಪೂಜಾರಿ ನಿತ್ಯ 90 ಲೀ. ಹಾಲು ಹಾಕುತ್ತಿದ್ದು ಸಂಘದ ಸಾಧಕ ಹೈನುಗಾರರಾಗಿದ್ದಾರೆ. ಇವರು ಉತ್ತಮ ಹೈನುಗಾರಿಕೆಗೆ ತಾಲೂಕು ಮಟ್ಟದ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.

2019 ಡಿ.1ರಂದು 10 ಲಕ್ಷ ರೂ. ವೆಚ್ಚದಲ್ಲಿ 5 ಸಾವಿರ ಲೀ. ಸಾಮರ್ಥ್ಯದ ಶೀತಲೀಕೃತ ಘಟಕವನ್ನು ಇಲ್ಲಿ ಸ್ಥಾಪಿಸಲಾಗಿದೆ. ಇಲ್ಲಿಗೆ ಹಾರ್ದಳ್ಳಿ ಮಂಡಳ್ಳಿ, ಮೊಳಹಳ್ಳಿ, ಯಡಾಡಿ ಮತ್ಯಾಡಿ, ಕೈಲ್‌ಕೆರೆ, ಹುಣ್ಸೆಮಕ್ಕಿ ಕಾಳಾವರ ಭಾಗದ ಡೈರಿಯ ಹಾಲು ಇಲ್ಲಿಗೆ ಬಂದು ಬಳಿಕ ಒಕ್ಕೂಟಕ್ಕೆ ಸರಬರಾಜಾಗುತ್ತದೆ. ಇದರೊಂದಿಗೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ, ಬಿಸಿ ನೀರಿನಿಂದ ಹಾಲಿನ ಪಾತ್ರೆ ತೊಳೆಯುವ ವ್ಯವಸ್ಥೆ , ಡ್ರೈನೇಜ್‌ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಸಾಮಾಜಿಕ ಕಾರ್ಯಕ್ರಮಗಳು
2012ರಲ್ಲಿ ನವೀಕೃತ ನೂತನ ವಿಸ್ತರಣ ಕಟ್ಟಡ ಹಾಗೂ ಸ್ವಯಂ ಚಾಲಿತ ಹಾಲು ಸಂಗ್ರಹಣ ಘಟಕ ಅಳವಡಿಸಲಾಗಿದೆ. ಇದರೊಂದಿಗೆ ಮಿಶ್ರತಳಿ ಕರುಗಳ ಪ್ರದರ್ಶನ, ವಿದ್ಯಾರ್ಥಿ ವೇತನ ನೀಡಿಕೆ, ಸದಸ್ಯರಿಗೆ ಸೌಲಭ್ಯಗಳ ವಿತರಣೆಯಂತಹ ಕಾರ್ಯಕ್ರಮಗಳನ್ನೂ ಸಂಘ ಹಮ್ಮಿಕೊಂಡಿದೆ.

ಗ್ರಾಮೀಣ ಭಾಗದ ಹೈನುಗಾರರು ಹಾಗೂ ಆಡಳಿತ ಮಂಡಳಿಯ ಸಹಕಾರದಿಂದ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದೇವೆ. ಸಂಘದ ಸದಸ್ಯರಿಗೆ ಅನುಭವಿ ಪಶುವೈದ್ಯರಿಂದ ನಿರಂತರ ತರಬೇತಿ ನೀಡುತ್ತಾ ಬಂದಿದ್ದೇವೆ.
-ನಾರಾಯಣ ಶೆಟ್ಟಿ ಮಾಡುಮನೆ,
ಅಧ್ಯಕ್ಷರು , ಬಿದ್ಕಲ್‌ಕಟ್ಟೆ
ಹಾ.ಉ.ಸ.ಸಂಘ

ಅಧ್ಯಕ್ಷರು:
ಅಂತಯ್ಯ ಶೆಟ್ಟಿ, ಆನಂದ ಕುಂದ ಹೆಗ್ಡೆ, ಭುಜಂಗ ಶೆಟ್ಟಿ, ಶಿವರಾಮ ಶೆಟ್ಟಿ, ಜಗಜೀವನದಾಸ ಶೆಟ್ಟಿ, ರಘುರಾಮ ಶೆರಟ್ಟಿ, ಕೃಷ್ಣಯ್ಯ ಶೆಟ್ಟಿ, ಎಂ. ವಿರೂಪಾಕ್ಷಯ್ಯ, ನಿತ್ಯಾನಂದ ಬಿ.ಕೆ., ನಾರಾಯಣ ಶೆಟ್ಟಿ (ಹಾಲಿ)
ಕಾರ್ಯದರ್ಶಿಗಳು:
ಸದಾನಂದ ಶೆಟ್ಟಿ, ರಮೇಶ್‌ ಗಾಣಿಗ, ಸುಬ್ರಾಯ ಗಾಣಿಗ, ರಾಜಗೋಪಾಲ ಆಚಾರಿ, ಸರಿತಾ, ಗಣೇಶ್‌ ಕುಲಾಲ್‌ (ಹಾಲಿ)

 ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next