Advertisement

ಹೊಪ್ಪತ್ತಿಗ್‌, ಬಪ್ಪತ್ತಿಗ್‌ ಕುಂದಾಪ್ರ ಭಾಷಿ ಮಾತಾಡ್ಕ್

10:46 PM Jul 31, 2019 | sudhir |

ಕುಂದಾಪುರ: ಹ್ವಾಯ್‌… ಎಂತ ಮಾರ್ರೆ… ಹ್ಯಾಂಗಿದ್ರಿ… ಇವತ್‌ ಮರವಂತೆ ಜಾತ್ರೆ ಗೌಜಿ ಅಂಬ್ರಲ. ಚಂದ್‌ ಗ್ವಾಂಪಿ ಯಕ್ಷಗಾನ ಇತ್ತಂಬ್ರಲ. ನೀವು ಬತ್ರಿಯಾ.. ನಂಗ್‌ ಹೊಕ್‌ ಮರ್ರೆà… ಹೀಗೆ ಆರಂಭವಾಗುವ ಸಂಭಾಷಣೆ ಎಂದರೆ ಅದು ಕುಂದಗನ್ನಡದ ಮಾತೇ ಸರಿ. ಅಕ್ಷರಕ್ಷರಕ್ಕೂ, ಸ್ವರದ ಏರಿಳಿತಕ್ಕೂ, ಪ್ರತಿ ತುಂಡಕ್ಷರಕ್ಕೂ ಒತ್ತಕ್ಷರಕ್ಕೂ ಬಿಡಿ ಅಕ್ಷರಕ್ಕೂ ಅರೆ ಅಕ್ಷರಕ್ಕೂ, ಪ್ರತಿ ಶಬ್ದಕ್ಕೂ ನಿಗೂಢವಾದ ಅಥವಾ ಗಾಢವಾದ ಅರ್ಥವನ್ನು ಕೊಡುವ, ಭಾಷೆ ಅರಿಯದವನನ್ನು ಕಕ್ಕಾಬಿಕ್ಕಿ ಮಾಡುವ ಸಾಮರ್ಥ್ಯ ಇರುವ, ಕೇವಲ ಹ್ವಾಯ್‌ ಎಂಬ ಪದದಿಂದಲೇ ಕುಂದಾಪುರದವರು ಎಂದು ಗುರುತಿಸಲ್ಪಡುವ ಭಾಷೆ ಇದ್ದರೆ ಅದು ಕುಂದಾಪ್ರ ಕನ್ನಡ.

Advertisement

ಭಾಷೆಯಲ್ಲ ಸಂಸ್ಕೃತಿ
ಭಾಷೆಯೊಂದರ ಜತೆಗೆ ಜನಾಂಗ ವೊಂದು ಬದುಕು ಕಟ್ಟಿಕೊಳ್ಳುವುದು ಇದೆ. ಸಮುದಾಯವೊಂದು ವಿಕಸನ ವಾಗುವುದು ಇದೆ. ಅಂತೆಯೇ ಪ್ರದೇಶವೊಂದು ಗುರುತಿಸಿಕೊಳ್ಳುವುದೂ ಇದೆ. ತುಳು ಭಾಷೆ ಸಮಸ್ತ ತುಳುನಾಡನ್ನು ಪ್ರತಿನಿಧಿಸಿದರೆ, ಕೊಡವ ಭಾಷೆ ಮಡಿಕೇರಿಗೆ, ಕೊಂಕಣಿ ಬಾಷೆ ಒಂದು ರಾಜ್ಯ ಹಾಗೂ ಸಮುದಾಯಕ್ಕೆ ವಿಸ್ತರಿಸಿದೆ. ಕೇವಲ ಕುಂದಾಪುರ ತಾಲೂಕಿನ ವ್ಯಾಪ್ತಿಯೊಳಗೆ ಸೀಮಿತವಾಗಿದ್ದ ಕನ್ನಡದ ಇನ್ನೊಂದು ಸ್ವರೂಪವೇ ಕುಂದಾಪ್ರ ಕನ್ನಡ ಭಾಷೆ. ಅಂತಹ ಭಾಷೆಯನ್ನು ಅನುದಿನವು ನೆನೆವ ಜನ ಪ್ರಪಂಚದ ನಾನಾ ಕಡೆ ಇದ್ದಾರೆ. ಅದನ್ನೇ ಉಸಿರಾಗಿಸಿಕೊಂಡ ಲಕ್ಷಾಂತರ ಜನರಿದ್ದಾರೆ. ಅದನ್ನೇ ಸಂಸ್ಕೃತಿಯಾಗಿಸಿದ ಲಕ್ಷೋಪಲಕ್ಷ ಮಂದಿಯಿದ್ದಾರೆ. ಅದನ್ನೇ ಬದುಕಾಗಿಸಿದ ಸಹಸ್ರಾರು ಕುಟುಂಬಗಳಿವೆ. ಕುಂದಾಪುರದ ಮಣ್ಣಿನಲ್ಲಿ ಹುಟ್ಟಿ ಹತ್ತೆಂಟು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿದ್ದಾರೆ.

ನಮ್ಮದೆಂಬ ಹೆಮ್ಮೆ
ಕುಂದಗನ್ನಡದ ಕಂಪು ಜಗದಗಲ ಹಬ್ಬಿರಲು ಅದನ್ನು ಮೂರ್ತಸ್ವರೂಪದಿಂದ ಪೊರೆಯುವ ಕಾರ್ಯವಾಗಬೇಕು, ಅದನ್ನು ನಮ್ಮದು ಎಂಬ ಹೆಮ್ಮೆಯಿಂದ ಮೆರೆಸುವ ಕಾರ್ಯವಾಗಬೇಕು ಎಂಬ ನಿಟ್ಟಿನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನ ಆಚರಿಸಲು ಜನರೆಲ್ಲ ಮುಂದಾಗಿದ್ದಾರೆ. ಕುಂದಾಪ್ರ ಕನ್ನಡವೆನ್ನುವುದು ಕೇವಲ ಹಾಸ್ಯದ ಸರಕಲ್ಲ, ಹಾಸ್ಯಕ್ಕಷ್ಟೇ ಸೀಮಿತವಲ್ಲ. ಇದರಲ್ಲಿ ಅಗಾಧವಾದ ಸಾಹಿತ್ಯವಿದೆ, ಅಪಾರವಾದ ಜ್ಞಾನಭಂಡಾರವಿದೆ. ಸಾಂಸ್ಕೃತಿಕ ಮೌಲ್ಯವಿದೆ. ಇತಿಹಾಸವನನ್ನು ಸಾರುವ ಪಠ್ಯವಿದೆ.

ಪರಂಪರೆಯನ್ನು ಒತ್ತಿ ಹೇಳುವ ಸಂಪತ್ತಿದೆ. ಇಂದು ಸಾಮಾಜಿಕ ಜಾಲತಾಣದಲ್ಲಿ, ಆಧುನಿಕ ಮನರಂಜನೆಗಳಲ್ಲಿ ಕುಂದಾಪ್ರ ಕನ್ನಡ ಕೇವಲ ಹಾಸ್ಯದ ಸರಕಾಗಿ ಉಳಿದಿಲ್ಲ. ಪ್ರತ್ಯೇಕವಾಗಿ ಗುರುತಿಸಲ್ಪಡುತ್ತಿದೆ. ಈ ಹಿನ್ನೆಲೆಯಲ್ಲಿ ಕುಂದಾಪ್ರ ಕನ್ನಡ ಮಾತನಾಡಲು ಮುಜುಗರ ಪಡಬೇಕಿಲ್ಲ. ಅದನ್ನು ಇನ್ನಷ್ಟು ಸಮರ್ಥವಾಗಿ ಹೆಮ್ಮೆಯಿಂದ ಮಾತನಾಡುವ ಅಭಿಮಾನದ ಭಾಷೆಯಾಗಿಸೋಣ ಎನ್ನುವುದೇ ಈ ದಿನದ ಆಚರಣೆಯ ಹಿಂದಿನ ಆಶಯ.

ಇಂದೇ ಏಕೆ
ಆಸಾಡಿ ಅಮಾವಾಸ್ಯೆ ಅಂದರೆ ಕರ್ಕಾಟಕ ಅಮಾವಾಸ್ಯೆ ಇಲ್ಲಿನ ಜನರ ಪಾಲಿಗೆ ಶ್ರೇಷ್ಠ ದಿನ. ಇಲ್ಲಿಂದ ವಿವಿಧ ಹಬ್ಬಗಳು ಆರಂಭಗೊಳ್ಳುವುದು. ಹಾಗಾಗಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಅಂದೇ ಪ್ರತಿ ವರ್ಷ ನಡೆಯಲಿದೆ. ಈ ವರ್ಷ ಆರಂಭ. ಈ ಹಿನ್ನೆಲೆಯಲ್ಲಿ ಉಡುಪಿ, ಕುಂದಾಪುರದ ನಾನಾ ಭಾಗ, ಉಜಿರೆ, ಬಹ್ರೈನ್‌, ಮಂಗಳೂರು, ಬೆಂಗಳೂರು, ಬೈಂದೂರು ಹೀಗೆ ಕುಂದಾಪ್ರ ಭಾಷೆ ಮಾತನಾಡುವ ಜನರು ಎಲ್ಲೆಲ್ಲಿ ಇದ್ದಾರೋ ಅಲ್ಲೆಲ್ಲ ಕಾರ್ಯಕ್ರಮಗಳು ನಡೆಯಲಿವೆ. ಕುಂದಾಪ್ರ ಕನ್ನಡದ ಸೊಗಡನ್ನು ಬಿತ್ತುವ, ಸೊಬಗನ್ನು ಹೆಚ್ಚಿಸುವ, ಅಂದವನ್ನು ಸಾರುವ ಕಾರ್ಯಕ್ರಮ ವೈವಿಧ್ಯಗಳಿವೆ.

Advertisement

ಇತಿಹಾಸ
ಕುಂದಾಪ್ರ ಎನ್ನುವುದು ಬಸರೂರು (ವಸುಪುರ) ಕ್ಕಿಂತಲೂ ಪೂರ್ವದಲ್ಲಿ ದೊಡ್ಡ ರೇವು ಪಟ್ಟಣ ಆಗಿತ್ತು ಎನ್ನುವುದಕ್ಕೆ ಇತಿಹಾಸವಿದೆ. ಪೋರ್ಚುಗೀಸರ ಕಾಲದಲ್ಲಿ ವಸುಪುರವೂ ಬƒಹತ್‌ ಆಗಿ ಬೆಳೆಯಿತು. ಪಟ್ಟಣ ಆಗಿದ್ದ ಕಾರಣಕ್ಕೆ ಈ ಪರಿಸರದ ಜನತೆಯ ವಿಶಿಷ್ಟ ಶೆ„ಲಿಯ ಭಾಷೆಯ ವಿದೇಶೀಯರೋ ಸ್ವದೇಶೀಯರೋ ಕುಂದಾಪ್ರ ಕನ್ನಡ ಎಂದು ಕರೆದಿರಬಹುದು. ಭಟ್ಕಳದ ಇಳಿಯಿಂದ ಸ್ವರ್ಣಾ ಹೊಳೆಯ ತನಕ, ಅರಬ್ಬಿ ಕಡಲ ಬದಿಯಿಂದ ಸಹ್ಯಾದ್ರಿಯ ತುದಿಯ ತನಕ ಹೀಗೆ ಹಬ್ಬಿ ಹರಡಿರುವ ಕುಂದಾಪ್ರ ಕನ್ನಡಕ್ಕೆ ವಿಶಾಲವಾದ ವ್ಯಾಪ್ತಿ ಇದೆ. ಯಾವುದೇ ಜಾತಿ, ಧರ್ಮ, ಸಂಘಟನೆ, ಪಕ್ಷ, ಸಂಸ್ಥೆಗೆ ಸೀಮಿತ ಪಡದೇ ಅಂತಾರಾಷ್ಟ್ರ ಮಟ್ಟದಲ್ಲಿ ಆಚರಿಸಲ್ಪಡುವ ಇತರ ದಿನಾಚರಣೆಗಳ ಮಾದರಿಯಲ್ಲೇ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ನಡೆಯಲಿದೆ.

30ಕ್ಕೂ ಹೆಚ್ಚು ಕಡೆಗಳಲ್ಲಿ ವಿಶ್ವ ಕುಂದಾಪ್ರ ದಿನಾಚರಣೆ
ಅಭಿಮತ ಟೀಮ್‌ ಮತ್ತು ಜನಸೇವಾ ಟ್ರಸ್ಟ್‌ ಮೂಡುಗಿಳಿಯಾರು ಆಯೋಜನೆಯಲ್ಲಿ ಕೋಟ ಕಾರ್ತಟ್ಟು ಕಮಲಾ ನಾಯರಿ ಮನೆ ಮತ್ತು ಕೋಟ ಕಡಲು ಬಳಿ ಕಾರ್ಯಕ್ರಮ, ಕಲಾಕ್ಷೇತ್ರ ಕುಂದಾಪುರ ವತಿಯಿಂದ ಜೂನಿಯರ್‌ ಕಾಲೇಜು ಸಬಾಂಗಣದಲ್ಲಿ, ಸಾಸ್ತಾನ ಫ್ರೆಂಡ್ಸ್‌ ದುಬೆ„, ಕುಂದಾಪ್ರ ಭಾಷಿಯರ್‌ ಕುಟುಂಬ, ಬಂಟರ ಸಂಘದ ಸಭಾಭವನ ಬೆಂಗ್ಳೂರ್‌, ಪ್ರಸಾದ್‌ ನೇತ್ರಾಲಯ ಉಡುಪಿ, ಜೂನಿಯರ್‌ ಕಾಲೇಜು ಸಭಾಂಗಣದಲ್ಲಿ ಕುಂದಪ್ರಭ ಸಂಸ್ಥೆ ವತಿಯಿಂದ ಒಗಟು ಮತ್ತು ಹಾಡು, ಉಜಿರೆ ಎಸ್‌. ಡಿ. ಎಂ. ಪ. ಪೂ. ಕಾಲೇಜಿನಲ್ಲಿ ವಿಚಾರ ಸಂಕಿರಣ., ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಜ್ರಿಹರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೇರಳಕಟ್ಟೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಂಚನೂರು, ಡಾ|ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪ್ರದಲ್ಲಿ, ಗ್ರಾಮ ಪಂಚಾಯತಿ ಆಜ್ರಿಹರ, ನೀಲಾವರ ಸುರೇಂದ್ರ ಅಡಿಗ ರ ಮನೆ, ಸುಜ್ಞಾನ,ಮಣೂರು, ಕೋಟದಲ್ಲಿ ಕುಂದಾಪ್ರ ಕನ್ನಡ ದಿನದ ನೆನಪಿಗೆ ಒಂದು ಜಂಬು ನೇರಳೆ ಗಿಡ ನೆಡುವ ಕಾರ್ಯಕ್ರಮ, ಕುವೆಂಪು ಶತಮಾನೋತ್ಸವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತೆಕ್ಕಟ್ಟೆಯಲ್ಲಿ, ಮಿತ್ರ ಸಂಗಮ ಬೀಜಾಡಿಯಲ್ಲಿ, ಗ್ರಾಮ ಪಂಚಾಯತ್‌ ಬಿಲ್ಲಾಡಿ, ಯಡ್ತಾಡಿ ಗ್ರಾಮ ಪಂಚಾಯತ್‌, ವರದರಾಜ್‌ ಶೆಟ್ಟಿ ಕಾಲೇಜು ಕೋಟೇಶ್ವರದಲ್ಲಿ, ಬಾಂಧವ್ಯ ಬ್ಲಿಡ್‌ ಕರ್ನಾಟಕ ರಕ್ತದಾನ ಕೆ.ಎಂ.ಸಿ ಮಣಿಪಾಲ, ಜೆಸಿಐ ಕೋಟ ಹಾಗೂ ವಿವಿಧ ಸಂಘ ಸಂಸ್ಥೆಗಳು ಕೋಟ ಇದರ ಸಹಬಾಗಿತ್ವದಲ್ಲಿ ಕಾರಂತಥೀಮ್‌ ಪಾರ್ಕ್‌ ಕೋಟದಲ್ಲಿ, ವಿಠಲವಾಡಿ ಫ್ರೆಂಡ್ಸ್‌ ಕುಂದಾಪುರ ಆಶ್ರಯದಲ್ಲಿ ಸಾಗೋಳಿ ಮಾಡಿ ಕಾರ್ಯಕ್ರಮ, ಕುಂದಗನ್ನಡ ಬಳಗ ಡೊಂಬಿವೇಲಿ ಮುಂಬಯಿಯಲ್ಲಿ, ಭಂಡಾರ್ಕರ್ಸ್‌ ಕಾಲೇಜು ಕುಂದಾಪುರದಲ್ಲಿ, ಕಲಾನರ್ತನ ನƒತ್ಯ ತಂಡ ಜನ್ನಾಡಿ-ಫೇವರೇಟ್‌ ಹಾಲ್‌ ಜನ್ನಾಡಿ-ಬಿದ್ಕಲಕಟ್ಟೆಯಲ್ಲಿ, ಚಂದನ ಯುವಕ ಮಂಡಲ ಮತ್ತು ಕರುನಾಡ ಗೆಳೆಯರು ಕೋಟೇಶ್ವರದಲ್ಲಿ, ಸ್ವಾಗತ್‌ ಫ್ರೆಂಡ್ಸ್‌ ಮಾರ್ಕೊಡು, ಹೆಚ್‌.ಎಂ.ಟಿ.ಫ್ರೆಂಡ್ಸ್‌ ಕೋಣಿ ಸ್ಥಳ ಅಂಗನವಾಡಿ ಕೇಂದ್ರ ಕೋಣಿ ಎಚ್‌ಎಂಟಿ, ಕೆಟಿ ರೇಡಿಯೋ ಪ್ರೋಗ್ರಾಮ್ಸ್‌ ಕುಂದಾಪುರ, ಯಕ್ಷ ದೀಪ ಕಲಾ ಟ್ರಸ್ಟ್‌ ನಿಂದ ತೆಕ್ಕಟ್ಟೆ ಹಯಗ್ರೀವ ಸಭಾಂಗಣದಲ್ಲಿ ಕುಂದಾಪ್ರ ಕನ್ನಡ ಯಕ್ಷಗಾನ ನರಹರಿ ಹೊಯ್ಕೆŒ„, ಕೆನರಾ ಕಿಡ್ಸ್‌, ಕೋಟೇಶ್ವರ, ಬೈಂದೂರಿನ ಅಂಬಿಕಾ ಇಂಟರ್‌ ನ್ಯಾಷನಲ್‌ ಹೋಟೆಲ್‌ನಲ್ಲಿ ಕೂಕಣಿ ಸ್ನೇಹ ಸಮ್ಮಿಲನ ಸೇರಿದಂತೆ ವಿವಿಧೆಡೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next