Advertisement

ಕ್ವಾರಂಟೈನ್‌ನಲ್ಲಿದ್ದ 21 ತಬ್ಲೀಘಿಗಳು ಡಿಸ್ಚಾರ್ಜ್‌

06:46 PM May 25, 2020 | Naveen |

ಹೊಳಲ್ಕೆರೆ: ಪಟ್ಟಣದ ಕಿತ್ತೂರುರಾಣಿ ಚೆನ್ನಮ್ಮ ವಸತಿನಿಲಯದಲ್ಲಿ ಕ್ವಾರಂಟೈನ್‌ ಮಾಡಲಾಗಿದ್ದ 21 ತಬ್ಲೀಘಿಗಳನ್ನು ಶುಕ್ರವಾರ ಡಿಸ್ಚಾರ್ಜ್‌ ಮಾಡಲಾಯಿತು. ಸೂರತ್‌ ತಬ್ಲೀಘಿ ಜಮಾತ್ ಧರ್ಮಸಭೆಯಲ್ಲಿ ಭಾಗವಹಿಸಿ ಮರಳಿದ್ದ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ 21 ತಬ್ಲೀಘಿಗಳನ್ನು ಪಟ್ಟಣದ ವಸತಿ ನಿಲಯದಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಗಂಟಲು ದ್ರವದ ವರದಿಯಲ್ಲಿ ವೈರಸ್‌ ಸೋಂಕು ಪತ್ತೆಯಾಗದ ಹಿನ್ನೆಲೆಯಲ್ಲಿ 14 ದಿನಗಳ ಕ್ವಾರಂಟೈನ್‌ ಬಳಿಕ 21 ಜನರನ್ನು ಬಿಡುಗಡೆಗೊಳಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್‌ ಕೆ. ನಾಗರಾಜ್‌, ಸಾರ್ವಜನಿಕರ ವಿರೋಧವಿದ್ದರೂ ಜಿಲ್ಲಾಡಳಿತದ ಆದೇಶದಂತೆ ತಬ್ಲೀಘಿ ಗಳನ್ನು ಉತ್ತಮವಾದ ಸೌಲಭ್ಯ ಕಲ್ಪಿಸಿ ಕ್ವಾರಂಟೈನ್‌ ಮಾಡಲಾಗಿತ್ತು. ಅವರೆಲ್ಲರೂ ಆರೋಗ್ಯಪೂರ್ಣರಾಗಿದ್ದಾರೆ ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ| ಜಯಸಿಂಹ ಮಾತನಾಡಿ, ಕ್ವಾರಂಟೈನ್‌ ನಂತರವೂ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು.ಇನ್ನಷ್ಟು ದಿನಗಳ ಕಾಲ ಹೋಂ ಕ್ವಾರಂಟೈನ್‌ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಪಪಂ ಮಾಜಿ ಸದಸ್ಯ ಹಬೀಬುರ್‌ ರೆಹಮಾನ್‌ ಮಾತನಾಡಿ, ಕ್ವಾರಂಟೈನ್‌ನಲ್ಲಿದ್ದವರಿಗೆ ಉತ್ತಮ ಸೌಲಭ್ಯ ಒದಗಿಸಿ ಚೆನ್ನಾಗಿ ನೋಡಿಕೊಂಡಿದ್ದಾರೆ. ಆದ್ದರಿಂದ ಈ ಸೇವೆಯನ್ನು ತಬ್ಲೀಘಿಗಳು ಸ್ಮರಿಸಿಕೊಳ್ಳಬೇಕೆಂದರು. ಪಪಂ ಮುಖ್ಯಾಧಿಕಾರಿ ಎ. ವಾಸಿಂ, ಡಾ| ಉಷಾ, ಡಾ| ಆನಂದ್‌, ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಶೇಖರ್‌, ಪಿಎಸ್‌ಐ ಡಿ.ಸಿ. ಸ್ವಾತಿ, ಮುತವಲ್ಲಿ ಅಲ್ತಾಫ್‌ ಬೇಗ್‌, ಇನಾಯತ್‌ ಉಲ್ಲಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next