Advertisement

ಮಮತಾಗೆ ಗೌರವ ಡಾಕ್ಟರೇಟ್‌ ವಿರುದ್ಧ ಹೈಕೋರ್ಟಿಗೆ ಪಿಎಲ್‌ಐ

03:44 PM Jan 09, 2018 | Team Udayavani |

ಕೋಲ್ಕತ : ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಇದೇ ಜನವರಿ 11ರಂದು ಗೌರವ ಡಾಕ್ಟರೇಟ್‌ ಪದವಿಯನ್ನು ಕೊಡುವ ಕಲ್ಕತ್ತ ವಿಶ್ವವಿದ್ಯಾಲಯದ ನಿರ್ಧಾರವನ್ನು ಪ್ರಶ್ನಿಸಿ ಕಲ್ಕತ್ತಾ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ.

Advertisement

ಹೈಕೋರ್ಟಿಗೆ ಪಿಐಎಲ್‌ ಸಲ್ಲಿಸಿದವರು ಅಬು ತಲೇಬ್‌ ಮತ್ತು ರನುಜ್‌ ಗೋಪಾಲ್‌ ಮುಖರ್ಜಿ. ಈ ಅರ್ಜಿಯನ್ನು ಹೈಕೋರ್ಟ್‌  ಜ.10ರಂದು ವಿಚಾರಣೆಗೆ ಎತ್ತಿಕೊಳ್ಳಲಿದೆ.

ಸರಕಾರದ ಹಣದಿಂದ ನಡೆಯುವ ಕಲ್ಕತ್ತಾ ಯುನಿವರ್ಸಿಟಿಯು ಕಾರ್ಯಾಂಗದ ಅತ್ಯುನ್ನತ ಅಧಿಕಾರಿಗೆ ಗೌರವ ಡಾಕ್ಟರೇಟ್‌ ಪದವಿಯನ್ನು ಕೊಡುವುದರಿಂದ ಆ ಪದವಿಯು ವಿಶ್ವಾಸಾರ್ಹತೆಯ ನಷ್ಟಕ್ಕೆ ಗುರಿಯಾಗಲಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next