ಮಹಾನಗರ: ಶಂಸುಲ್ ಉಲಮಾ ಪಬ್ಲಿಕೇಶನ್‌ನ ಎಂ.ಆರ್. ಬುಕ್‌ಸ್ಟಾಲ್ ಮಂಗಳೂರು ಇದರ ಅಧೀನದಲ್ಲಿ 14 ವರ್ಷಗಳಿಂದ ಮಂಗ ಳೂರಿನ ಸ್ಟೇಟ್ ಬ್ಯಾಂಕಿನಲ್ಲಿರುವ ಪಿಯೊನೀರ್ ಕಾಂಪ್ಲೆಕ್ಸ್‌ನಲ್ಲಿ ಮದ್ರಸ ಪ್ರಾರಂಭೋತ್ಸವದ ಭಾಗವಾಗಿ ಜೂ. 14ರಂದು ಮದ್ರಸಾ ಪುಸ್ತಕ ಮೇಳ ಜರಗಿತು.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಪುಸ್ತಕ ಮೇಳಕ್ಕೆ ಚಾಲನೆ ನೀಡಿ ಮುಂದಿನ ವರ್ಷದಿಂದ ಮದ್ರಸ ಅಧ್ಯಾಪಕರಿಗೂ ಗೌರವ ವೇತನ ನೀಡುವ ಬಗ್ಗೆ ಪ್ರಯತ್ನಿಸಲಾಗುತ್ತಿದೆ ಎಂದರು. ಎಂ.ಆರ್. ಆಯೋಜಿಸಿದ ಪುಸ್ತಕ ಮೇಳ ಮದ್ರಸ ಅಧ್ಯಾಪಕರಿಗೂ ಮ್ಯಾನೇಜಿಂಗ್ ಕಮಿಟಿ ಪದಾಧಿಕಾರಿಗಳಿಗೂ ಮದ್ರಸ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಉಪಯುಕ್ತವಾಗಿದೆ ಎಂದರು.
ಸಮಸ್ತ ಕರ್ನಾಟಕ ಮುಶಾವರದ ಕುಕ್ಕಿಲ ದಾರಿಮಿ, ಎಸ್.ವೈ.ಎಸ್. ಜಿಲ್ಲಾ ನೇತಾರ ಇಬ್ರಾಹಿಂ ಬಾಖವಿ, ಜಂಇಯ್ಯತುಲ್ ಮುಅಲ್ಲಿಮೀನ್ ಜಿಲ್ಲಾ ಅಧ್ಯಕ್ಷ ಕೆ.ಎಲ್. ಉಮರ್ ದಾರಿಮಿ ಪಟ್ಟೋರಿ, ಎಸ್.ಕೆ.ಎಸ್.ಎಸ್.ಎಫ್. ಜಿಲ್ಲಾ ನೇತಾರ ಅಶ್ರಫ್ ಮಾರಾಟಿಮೂಲೆ, ಜಿಲ್ಲಾ ಎಸ್.ಬಿ.ವಿ.ಯ ಕಾರ್ಯದರ್ಶಿ ಅಲ್ಮಾಝ್ ಮಾಲಿಕ್, ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್‌ನ ಉಪಾಧ್ಯಕ್ಷ ಎ.ಎಚ್ ನೌಶಾದ್ ಹಾಜಿ ಸೂರಲ್ಪಾಡಿ, ರಿಯಾಝುದ್ದೀನ್ ಹಾಜಿ, ಸುನ್ನೀ ಸಂದೇಶ ಪತ್ರಿಕೆಯ ನಿರ್ದೇಶಕ ಸಿತಾರ್ ಮಜೀದ್ ಹಾಜಿ, ಡಿಲೆಕ್ಸ್ ಅಹ್ಮದ್ ಹಾಜಿ, ಬಿ.ಎಸ್. ಹುಸೈನ್ ಹಾಜಿ, ಹಮೀದ್ ಹಾಜಿ , ಪಾವೂರು ಗ್ರಾಮ ಪಂಚಾಯತಿನ ನಿಸಾರ್ ಮಲಾರ್, ರವಿಚಂದ್ರ ಗಟ್ಟಿ ಉಳ್ಳಾಲ, ಗೋಪಾಲ್ ಶೆಟ್ಟಿ ಕದ್ರಿ, ಪ್ರವೀಣ್ , ಅಬ್ದುಲ್ಲಾ ಹಾಜಿ ಸುರಿಬೈಲು, ಮುಹಮ್ಮದ್ ಹಾಜಿ ಪೆರುವಾಯಿ, ಇಕ್ಬಾಲ್ ಹಾಜಿ, ಮುಸ್ತಾಫಾ ಫೈಝಿ ಪರ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು.
ವ್ಯವಸ್ಥಾಪಕ ಮುಸ್ತಫಾ ಫೈಝಿ ಸ್ವಾಗತಿಸಿದರು. ಪ್ರೊ| ರಫೀಖ್ ಅಜ್ಜಾವರ ವಂದಿಸಿದರು. ಪುಸ್ತಕ ಮೇಳದಲ್ಲಿ ಧಾರ್ಮಿಕ ಗ್ರಂಥಗಳು, ಕುರ್‌ಆನ್ ಗ್ರಂಥಗಳು, ಮದ್ರಸ ವಿದ್ಯಾರ್ಥಿಗಳ 1ರಿಂದ +2 ತರಗತಿ ವರೆಗಿನ ಪಠ್ಯ ಪುಸ್ತಕಗಳು, ಅರಬಿಕ್ ಮಾರ್ಜಿನ್ ಇರುವ ನೋಟ್ ಪುಸ್ತಕಗಳು, ಶಾಲಾ ಮದ್ರಸ ಉಪಯುಕ್ತ ಸಾಮಗ್ರಿಗಳು ಪುಸ್ತಕ ಮೇಳದಲ್ಲಿ ಲಭ್ಯವಿವೆ.