Advertisement

ಗುರಿಕಾರರಿಗೆ ಗೌರವಾರ್ಪಣೆ, ಪ್ರತಿಭಾ ಪುರಸ್ಕಾರ

07:20 AM Sep 12, 2017 | Team Udayavani |

ಪಡುಬಿದ್ರಿ: ಗುರಿಕಾರರಿಗೆ ಗೌರವಾರ್ಪಣೆ ಸದ್ವಿಚಾರ. ಸದ್ವಿಚಾರವು ಯಾವಾಗಲೂ ಉತ್ತಮ ಫಲ ನೀಡು ತ್ತದೆ. ಶಿಕ್ಷಣ ಕ್ಷೇತ್ರದ ಸಾಧಕರು ಮತ್ತು ಗುರಿಕಾರರಿಗೆ ಗೌರವಾರ್ಪಣೆಗಳಿಗೆ ಸದಾ ನಮ್ಮ ಸಹಕಾರವಿದೆ. ಮುಂದೆ ಮಹಾಜನ ಸಂಘದ ವತಿಯಿಂದಲೇ ಸುಮಾರು 25 ಲಕ್ಷ ರೂ. ವಿದ್ಯಾರ್ಥಿ ವೇತನವನ್ನು ವಿತರಿಸುವ ಕಾರ್ಯಕ್ರಮವಾಗಬೇಕಿದೆ ಎಂದು ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ, ನಾಡೋಜ ಡಾ| ಜಿ. ಶಂಕರ್‌ ಹೇಳಿದರು.

Advertisement

ಅವರು ಉಚ್ಚಿಲದ ಮಹಾಲಕ್ಷಿ$¾à ಸಭಾಭವನದಲ್ಲಿ ದ.ಕ. ಮೊಗವೀರ ಮಹಾಜನ ಸಂಘದ ವತಿಯಿಂದ ರವಿವಾರ ಆಯೋಜಿಸಲಾದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ, ಮೊಗವೀರ ಸಮಾಜದ ಗುರಿಕಾರರಿಗೆ ಗೌರವ ಸಮರ್ಪಿಸಿ ಮಾತನಾಡಿದರು.

ಅವಕಾಶ ಬಳಸಿಕೊಳ್ಳಿ 
ಮುಖ್ಯ ಅತಿಥಿಯಾಗಿದ್ದ ಮಣೂರು ಗೀತಾನಂದ ಟ್ರಸ್ಟ್‌ ಪ್ರವರ್ತಕ ಆನಂದ ಸಿ. ಕುಂದರ್‌ ಮತ್ತು ಅಧ್ಯಕ್ಷತೆ ವಹಿಸಿದ್ದ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಗಂಗಾಧರ ಎಚ್‌. ಅವರು ಮಾತನಾಡಿ, ವಿದ್ಯಾರ್ಥಿಗಳು ಲಭ್ಯ ಅವಕಾಶಗಳನ್ನು ಬಳಸಿಕೊಳ್ಳಬೇಕು. ಎಲ್ಲ ವಿಷಯಗಳಿಗೂ ಇಂಟರ್‌ನೆಟ್‌ ಮೊರೆ ಹೋಗದೆ ಓದುವ ಅಭ್ಯಾಸ ವನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು.

ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ಬೈಕಂಪಾಡಿ ಸುಪ್ರಸಾದ್‌ ಅವರು ಅನಿಸಿಕೆಗಳನ್ನು ಹಂಚಿಕೊಂಡರು.
192 ವಿದ್ಯಾರ್ಥಿಗಳಿಗೆ ಸುಮಾರು 2 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ಪುರಸ್ಕಾರ ವಿತರಿಸಲಾಯಿತು. 162 ಗ್ರಾಮ ಸಭೆಗಳ ಗುರಿಕಾರರನ್ನು ಗುರುತಿಸಿ ಸಮ್ಮಾನಿಸಲಾಯಿತು ಹಾಗೂ ಕಾಪು ನಾಲ್ಕು ಪಟ್ಣ ಮಹಿಳಾ ಒಕ್ಕೂಟಗಳಿಗೆ ಕೊಡ ಮಾಡಿದ ಸಮವಸ್ತ್ರಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.

ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ತಿಮ್ಮ ಮರಕಾಲ, ದ.ಕ. ಮೊಗವೀರ ಹಿತಸಾಧನಾ ವೇದಿಕೆ ಉಚ್ಚಿಲ ಅಧ್ಯಕ್ಷ ಸರ್ವೋತ್ತಮ ಕುಂದರ್‌, ದ.ಕ. ಮೊಗವೀರ ಮಹಿಳಾ ಸಂಘ ಅಧ್ಯಕ್ಷೆ ಸರಳಾ ಕಾಂಚನ್‌, ದ.ಕ. ಮೊಗವೀರ ಯುವ ವೇದಿಕೆ ಅಧ್ಯಕ್ಷ ಲೀಲಾಧರ್‌ ತಣ್ಣೀರುಬಾವಿ, ಕಾಪು ನಾಲ್ಕು ಪಟ್ಣ ಮೊಗವೀರ ಸಭಾದ ಅಧ್ಯಕ್ಷ ವೈ. ಗಂಗಾಧರ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

Advertisement

ವಿಶ್ವನಾಥ ಕೂರಾಡಿ ಸ್ವಾಗತಿಸಿ, ದಿನೇಶ್‌ ಆರ್‌. ಕೋಟ್ಯಾನ್‌ ವಂದಿಸಿ ದರು. ರಮೇಶ್‌ ಕರ್ಕೇರ ಉಗ್ಗೆಲ್‌ಬೆಟ್ಟು ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next