Advertisement

ಅತಿಥಿ ಉಪನ್ಯಾಸಕರ ಗೌರವ ಧನ ಬಿಡುಗಡೆ 

12:30 AM Jan 27, 2019 | Team Udayavani |

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಮಾಸಿಕ ಗೌರವಧನ ನೀಡಲು ಸರ್ಕಾರ 22.33 ಕೋಟಿ ರೂ.ಅನುದಾನ ಬಿಡುಗಡೆ ಮಾಡಿದೆ.

Advertisement

ನೇಮಕಾತಿ, ಮರು ಹಂಚಿಕೆ, ವರ್ಗಾವಣೆ ಮತ್ತು ನಿಯೋಜನೆಯಿಂದ ಪೂರ್ಣಕಾಲಿಕ ಉಪನ್ಯಾಸಕರು ತಮ್ಮ ಕಾಲೇಜಿನಲ್ಲಿ ವರದಿ ಮಾಡಿಕೊಂಡ ನಂತರ ಬಿಡುಗಡೆ ಹೊಂದಿರುವ ಅತಿಥಿ ಉಪನ್ಯಾಸಕರಿಗೆ ಕರ್ತವ್ಯ ನಿರ್ವಹಿಸಿದ ಅವಧಿಗೆ ಮಾತ್ರ ಗೌರವಧನ ಪಾವತಿಸಬೇಕು. ಅತಿಥಿ ಉಪನ್ಯಾಸಕರಿಗೆ ವಿದ್ಯಾರ್ಥಿಗಳ ಅನುಪಾತದಂತೆ ಕಾರ್ಯಭಾರ ಹಂಚಿಕೆ ಮಾಡಿ,ಅದರಂತೆ ಗೌರವಧನ ಪಾವತಿಸಬೇಕು. ಗೌರವಧನವನ್ನು ಹೆಚ್ಚುವರಿಯಾಗಿ ನೀಡುವಂತಿಲ್ಲ. ಹೆಚ್ಚು ಸಂಭಾವನೆ ನೀಡಿದಲ್ಲಿ ಪ್ರಾಂಶುಪಾಲರು ಮತ್ತು ವಿಭಾಗದ ಮುಖ್ಯಸ್ಥರೇ ನೇರ ಜವಾಬ್ದಾರರಾಗಿರುತ್ತಾರೆ ಎಂದು ಕಾಲೇಜು ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.

ನೆಟ್‌, ಸ್ಲೆಟ್‌ ಅಥವಾ ಪಿಎಚ್‌ಡಿ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರಿಗೆ ಮಾಸಿಕ 13 ಸಾವಿರ ಹಾಗೂ ಸ್ನಾತಕೋತ್ತರ ಪದವಿ ಪಡೆದ ಅತಿಥಿ ಉಪನ್ಯಾಸಕರಿಗೆ ಮಾಸಿಕ 11 ಸಾವಿರ ರೂ. ಗೌರವಧನ ನೀಡಬೇಕು. ಇದಕ್ಕಾಗಿ 22.33 ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿದೆ. ಅತಿಥಿ ಉಪನ್ಯಾಸಕರಿಗೆ ಬಿಡುಗಡೆಯಾಗಿರುವ ಅನುದಾನವನ್ನು ಸಂಬಂಧಪಟ್ಟವರಿಗೆ ವಿತರಿಸದೆ ತಮ್ಮಲ್ಲೇ ಉಳಿಸಿಕೊಂಡಿರುವ ಬಗ್ಗೆ ದೂರು ಬಂದರೆ ಪ್ರಾಂಶುಪಾಲರು ಹಾಗೂ ವಿಭಾಗದ ಮುಖ್ಯಸ್ಥರ ವಿರುದಟಛಿ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಇಲಾಖೆ ಸೂಚಿಸಿದೆ.

ಕಳೆದ ಸೆಪ್ಟೆಂಬರ್‌ನಿಂದ ಅತಿಥಿ ಉಪನ್ಯಾಸಕರಿಗೆ ವೇತನ ನೀಡಿರಲಿಲ್ಲ. ವೇತನಕ್ಕಾಗಿ ಒತ್ತಾಯಿಸಿ ಉಪನ್ಯಾಸಕರು ಹಲವಾರು ಬಾರಿ ರಾಜ್ಯದ ವಿವಿಧೆಡೆ ಪ್ರತಿಭಟನೆ ಸಹ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next