Advertisement

ಆದರ್ಶ ಶಿಕ್ಷಕರಿಗೆ ಸನ್ಮಾನ

08:37 AM Jan 05, 2019 | Team Udayavani |

ಬಸವಕಲ್ಯಾಣ: ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ನಾಗರಾಜ ಹೇಳಿದರು.

Advertisement

ತಾಲೂಕು ಪರಿಶಿಷ್ಟ ಜಾತಿ ಮತ್ತು ಪಂಗಡದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಹಳೆಯ ತಹಶೀಲ್‌ ಕಚೇರಿ ಸಮುದಾಯ ಭವನದಲ್ಲಿ ನಡೆದ ಶೈಕ್ಷಣಿಕ ಕಾರ್ಯಾಗಾರ ಮತ್ತು ಸಾವಿತ್ರಿಬಾಯಿ ಫುಲೆ ಜಯಂತಿಯಲ್ಲಿ ಅವರು ಮಾತನಾಡಿ, ಕಳೆದ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹಿನ್ನೆಡೆಯಾಗಿದೆ. ಆದ್ದರಿಂದ ಈ ವರ್ಷ ಫಲಿತಾಂಶದಲ್ಲಿ ಸುಧಾರಣೆಯಾಗಬೇಕು ಎಂದು ಸಲಹೆ ನೀಡಿದರು. 

ನಗರಸಭೆ ಅಧ್ಯಕ್ಷ ಅಜರಅಲಿ ನವರಂಗ, ತಾಪಂ ಅಧ್ಯಕ್ಷೆ ಯಶೋಧಾ ರಾಠೊಡ, ರವಿ ಗಾಯಕವಾಡ, ಹುಲಸೂರು
ತಾಲೂಕು ಕ್ಷೇತ್ರ ಶಿಕ್ಷಣಾ ಧಿಕಾರಿ ಸಂಜುಕುಮಾರ ಕಾಂಗೆ, ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಅಂಬಣ್ಣ ಘಾಂಗ್ರೆ, ಜಿಲ್ಲಾ ಉಪಾಧ್ಯಕ್ಷ ರಮೇಶ ಉಮಾಪುರೆ, ಮಲ್ಲಿಕಾರ್ಜುನ ಮೇತ್ರೆ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ.ಎಸ್‌. ಬಿರಾದಾರ್‌, ಯುವರಾಜ ಭೆಂಡೆ, ವಾಮನ ಮೈಸಲಗೆ, ಅಶೋಕ ರಾಯಪಳ್ಳೆ, ದಿನಕರ ಮೇತ್ರೆ, ರಜೀತ್‌ ವಿಶ್ವನಾಥ ಕಾಂಬಳೆ, ದಿಲೀಪ ಸಾಗಾವೆ, ಪ್ರೇಮಸಿಂಗ್‌ ರಾಠೊಡ ಇತರರು ಇದ್ದರು. ಸೂರ್ಯಕಾಂತ ಭೋಸ್ಲೆ ನಿರೂಪಿಸಿದರು. ಶಿವಕುಮಾರ ವಾಡ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next