Advertisement

ಗಣಪತಿ ಸ್ವಾಮೀಜಿ ವಜ್ರೋತ್ಸವದಲ್ಲಿ ಗಣ್ಯರಿಗೆ ಸನ್ಮಾನ

12:56 PM May 23, 2017 | |

ಮೈಸೂರು: ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 75ನೇ ಜನ್ಮ ದಿನೋತ್ಸವದ ಅಂಗವಾಗಿ ನಡೆಯುತ್ತಿರುವ ವಜ್ರೋತ್ಸವದ ಪ್ರಯುಕ್ತ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ನಾನಾ ಕ್ಷೇತ್ರಗಳ ಗಣ್ಯರಿಗೆ ಸನ್ಮಾನ ಸಮಾರಂಭ ನಡೆಯಿತು. ನಂಜನಗೂಡು ರಸ್ತೆಯಲ್ಲಿರುವ ಗಣಪತಿ ಆಶ್ರಮದಲ್ಲಿ ಬೆಳಗ್ಗೆ ಶ್ರೀಗಳ ಸಮ್ಮುಖದಲ್ಲಿ ನಡೆದ ಧಾರ್ಮಿಕ ಕೈಂಕರ್ಯದಲ್ಲಿ ಶ್ರೀಚಕ್ರ ಪೂಜೆ ಮತ್ತು ರುದ್ರಹೋಮ ನೆರವೇರಿಸಲಾಯಿತು.

Advertisement

ನಂತರ ನಡೆದ ಸಮಾರಂಭದಲ್ಲಿ ಕೇರಳದ ಮಲ್ಲಿಯೂರ್‌ ಪರಮೇಶ್ವರನ್‌ ನಂಬೂದರಿ, ಇಂಧೋರ್‌ನ ಪ್ರದೀಪ್‌ ತಾರನೇಕರ್‌ ಅವರುಗಳಿಗೆ ದತ್ತಪೀಠ ಪ್ರಶಸ್ತಿ ನೀಡಲಾಯಿತು. ಅಂತೆಯೇ ಕುಂಭಕೋಣಂನ ವೇಣುಗೋಪಾಲ್‌ ಘನಪಾಠಿ(ಋಗ್ವೇದ), ರಾಜಮಂಡ್ರಿ ದತ್ತಾತ್ರೇಯ ಘನಪಾಠಿ(ಯಜುರ್ವೇದ), ಪರಬಾನಿ ಕೃಷ್ಣ ಮಧುಕರ್‌ ಪಲುಸ್ಕರ್‌(ಸಾಮವೇದ),

ತಿರುಪತಿ ಶ್ರೀಕೃಷ್ಣ ಮಧುಕರ್‌ ಪಲುಸ್ಕರ್‌(ಸಾಮವೇದ), ಬೆಂಗಳೂರಿನ ವಿ. ಪ್ರವೀಣ್‌(ಮೃದಂಗ), ಚೆನ್ನೈನ ಪಿ. ಉನ್ನಿಕೃಷ್ಣನ್‌(ಕರ್ನಾಟಕ ಸಂಗೀತ), ಹುಬ್ಬಳ್ಳಿಯ ಜಯತೀರ್ಥ ಮೇವುಂಡಿ(ಹಿಂದೂಸ್ಥಾನಿ ಸಂಗೀತ), ಕೊಚ್ಚಿಯ ಉದ್ಯೋಗಮಂಡಲಂ ವಿಜಯಕುಮಾರ್‌(ಭಕ್ತಿಗೀತೆ), ಕನ್ನಡ ಸಾಹಿತ್ಯದಲ್ಲಿ ಡಾ.ಸಿ.ಪಿ.ಕೃಷ್ಣಕುಮಾರ್‌ಗೆ ಆಸ್ಥಾನ್‌ ವಿದ್ವಾನ್‌ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತಿರುಚ್ಚಿಯ ಎಸ್‌.ಶಿವಪ್ರಕಾಶಂಗೆ ಶುಕ್ರವನ ಪ್ರದಾನ ಮಾಡಲಾಯಿತು.

ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಸೇರಿದಂತೆ ಇನ್ನಿತರ ಗಣ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next