Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಸಂಸ್ಥಾನದ ಒಡೆಯರ್, ಜೋಧ್‌ಪುರ ಸಂಸ್ಥಾನ ಹಾಗೂ ಹೈದ್ರಾಬಾದ್ ಲಾನ್ಸರ್ ಜೊತೆಗೂಡಿ ಇಸ್ರೇಲ್‌ನ ಹೈಫಾದಲ್ಲಿ ನಡೆದ ಮಹಾಯುದ್ಧದಲ್ಲಿ ಆಟೋಮಾನ್ ಟರ್ಕರ ವಿರುದ್ಧ ಜಯಗಳಿಸಿದ ಶತಮಾನೋತ್ಸವದ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಲಾಗಿದೆ.
Related Articles
Advertisement
ಅದೇ ರೀತಿಯಲ್ಲಿ ಮೈಸೂರಿನಲ್ಲೂ ಯುದ್ಧ ಸ್ಮಾರಕ ನಿರ್ಮಿಸುವಂತೆ ಹೈಫಾ ಯುದ್ಧದ ವಿಶೇಷತೆಯ ಮಾಹಿತಿಯನ್ನು ಸರ್ಕಾರಕ್ಕೆ ನೀಡಲಾಗುವುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಹೈಫಾ ಶತಮಾನೋತ್ಸವ ಆಚರಣಾ ಸಮಿತಿ ಕಾರ್ಯದರ್ಶಿ ಹರೀಶ್ ಶೆಣೈ, ವಿಶ್ವನಾಥ್ ಉಪಸ್ಥಿತರಿದ್ದರು.
ಅರಮನೆಯಲ್ಲಿ ದಸರಾ ಸಿದ್ಧತೆಗಳು ಪ್ರತಿವರ್ಷದಂತೆಯೇ ನಡೆದಿದೆ. ಅ.10ರಂದು ನವರಾತ್ರಿ ಪ್ರಾರಂಭವಾಗಿ ಆ.19ರಂದು ವಿಜಯದಶಮಿ ಮೆರವಣಿಗೆಯೊಂದಿಗೆ ಮುಕ್ತಾಯಗೊಳ್ಳಲಿದ್ದು, ಪದ್ಧತಿ ಪ್ರಕಾರವೇ ದಸರಾ ಆಚರಣೆ ನಡೆಯಲಿದೆ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಅರಮನೆಯ ದಸರಾ ಆಚರಣೆ ಪದ್ಧತಿ ಪ್ರಕಾರವೇ ನಡೆಯಲಿದ್ದು, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಅಂಬಾರಿ ವಿವಾದದ ಬಗ್ಗೆ ನನಗೆ ಮಾಹಿತಿ ಇಲ್ಲ. ಆ ವಿಚಾರವನ್ನು ಅಮ್ಮ ನೋಡಿಕೊಳ್ಳುತ್ತಾರೆ ಎಂದರು.
ತಮ್ಮ ಪತ್ನಿ ತ್ರಿಷಿಕಾ ಕುಮಾರಿ ಅವರಿಗೆ ಅರಣ್ಯ, ಆದಿವಾಸಿಗಳ ಬಗ್ಗೆ ವಿಶೇಷ ಆಸಕ್ತಿ. ಹೀಗಾಗಿ ಗಿರಿಜನರ ಜೀವನ ಪದ್ಧತಿ ಕುರಿತು ಅಧ್ಯಯನ ನಡೆಸಲು ಆಸಕ್ತಿವಹಿಸಿದ್ದಾರೆ. ಪಿಎಚ್.ಡಿಗೆ ಇನ್ನೂ ಹೆಸರು ನೋಂದಣಿ ಮಾಡಿಸಿಲ್ಲ ಎಂದು ತಿಳಿಸಿದರು.
ರಾಜಕೀಯದಲ್ಲಿ ನನಗೆ ಆಸಕ್ತಿ ಇಲ್ಲ. ಸದ್ಯ ಧಾರ್ಮಿಕ, ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಯಾವ ರಾಜಕೀಯ ಪಕ್ಷದ ನಾಯಕರೂ ನನ್ನೊಂದಿಗೆ ಮಾತನಾಡಿಲ್ಲ. ನಾನೂ ಯಾವ ರಾಜಕೀಯ ನಾಯಕರೊಂದಿಗೆ ಮಾತನಾಡಿಲ್ಲ.-ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್