Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ನಡೆದಿರುವ ಹನುಮಧ್ವಜ ಗಲಾಟೆ ಕಾಂಗ್ರೆಸ್ ಪಕ್ಷದ ಪಿತೂರಿ. ಗ್ರಾ.ಪಂ.ನಲ್ಲಿ ಅನುಮತಿ ಪಡೆದೇ ಧ್ವಜಸ್ತಂಭ ನಿರ್ಮಿಸಲಾಗಿತ್ತು. ಆದರೂ ಕಾಂಗ್ರೆಸ್ ಪಿತೂರಿಯಿಂದ ಗಲಾಟೆ ನಡೆದಿದೆ. ಬೆಳಗಾವಿಯ ಎಂ.ಕೆ. ಹುಬ್ಬಳ್ಳಿಯಲ್ಲೂ ಭಗವಾಧ್ವಜ ವಿಷಯದಲ್ಲಿ ಗಲಾಟೆ ನಡೆದಿದೆ. ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾಕ ಸಮುದಾಯದ ಓಲೈಕೆಯಿಂದಾಗಿ ಇಂಥ ಘಟನೆಗಳು ನಡೆಯುತ್ತಿವೆ. ಇದರಿಂದಾಗಿ ನಾವು ಭಾರತದಲ್ಲಿ ಇದ್ದೇವಾ ಅಥವಾ ಬೇರೆ ದೇಶದಲ್ಲಿದ್ದೇವಾ ಎಂಬ ಅನುಮಾನ ಮೂಡುವಂತಾಗಿದೆ ಎಂದರು.
ರಾಮನ ಅಸ್ತಿತ್ವವನ್ನೇ ಪ್ರಶ್ನಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಇಂಥ ಸ್ಥಿತಿಯಲ್ಲಿ ರಾಜ್ಯದಲ್ಲಿ ನೂರು ರಾಮ ಮಂದಿರಗಳ ಪುನಃಶ್ಚೇತನ ಮಾಡುವ ತೀರ್ಮಾನ ಮಾಡಲಾಗಿದೆ ಎಂಬ ಸರಕಾರದ ಹೇಳಿಕೆ ಸ್ವಾಗತಾರ್ಹ. ಭಗವಾನ ರಾಮನನ್ನು ಕಾಂಗ್ರೆಸ್ ಪಕ್ಷದವರು ಅಪ್ಪಿಕೊಂಡಿರುವುದು ಸಂತಸ ಎಂದರು.