Advertisement

ಮಹಾತ್ಮ, ವಾಜಪೇಯಿಗೆ ಗೌರವ ನಮನ

12:02 PM Jun 01, 2019 | Sriram |

ನವದೆಹಲಿ: ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸುವುದಕ್ಕೂ ಮೊದಲು ಗುರುವಾರ ಬೆಳಗ್ಗೆ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಮಾಧಿಗೆ ಗೌರವ ನಮನ ಸಲ್ಲಿಸಿದ್ದಾರೆ. ಅಲ್ಲದೆ, ಇಂಡಿಯಾ ಗೇಟ್‌ನಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೂ ತೆರಳಿ ಗೌರವ ನಮನ ಸಲ್ಲಿಸಿದ್ದಾರೆ. ಬೆಳಗ್ಗೆ ಏಳು ಗಂಟೆಗೇ ರಾಜ್‌ಘಾಟ್‌ಗೆ ಅವರು ತೆರಳಿದ್ದರು. ನಂತರ ಅಲ್ಲಿಂದ ವಾಜಪೇಯಿಯವರ ಸದೈವ ಅಟಲ್ ಸಮಾಧಿಗೆ ತೆರಳಿ ಗೌರವ ನಮನ ಸಲ್ಲಿಸಿದರು. ಈ ವರ್ಷ ಮಹಾತ್ಮ ಗಾಂಧಿ 150ನೇ ಜಯಂತಿಯನ್ನು ಆಚರಿಸುತ್ತಿದ್ದೇವೆ. ಬಾಪುರವರ ಚಿಂತನೆಗಳು ನಮ್ಮನ್ನು ಇನ್ನಷ್ಟು ಸ್ಫೂರ್ತಿಗೊಳಿಸಲಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ವಾಜಪೇಯಿಯವರನ್ನೂ ನೆನಪಿಸಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next