Advertisement

ಡಾ.ವಿವೇಕ ಮೂರ್ತಿ ಅವರನ್ನು ಸಾಹಿತ್ಯ ಸಮ್ಮೇಳನದಲ್ಲಿ ಗೌರವಿಸಿ: ದಿನೇಶ ಗೂಳಿಗೌಡ

10:15 PM Aug 07, 2023 | Team Udayavani |

ಮಂಡ್ಯ: ಜಿಲ್ಲೆಯ ಸುಪುತ್ರ, ಅಮೇರಿಕ ಅಧ್ಯಕ್ಷರ ವೈದ್ಯಕೀಯ ಸಲಹೆಗಾರ ಡಾ.ವಿವೇಕ ಮೂರ್ತಿ ಅವರನ್ನು ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಬೇಕು ಎಂದು ಶಾಸಕ ದಿನೇಶ ಗೂಳಿಗೌಡ ಒತ್ತಾಯಿಸಿದರು.

Advertisement

ಸೋಮವಾರ ನಗರದಲ್ಲಿ ಆಯೋಜಿಸಿದ್ದ 87ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮೂರು ಮಹತ್ವಪೂರ್ಣ ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಸಮ್ಮೇಳನ ಎಂಬುದು ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯುವ ಹಬ್ಬವಾಗಿದೆ. ವಿಶ್ವದಲ್ಲಿರುವ ಎಲ್ಲ ಕನ್ನಡಿಗರೂ ಹೆಮ್ಮೆಯಿಂದ ಭಾಗವಹಿಸಿ, ಕನ್ನಡ, ನಾಡು, ನುಡಿ, ಸಾಹಿತ್ಯದ ಬಗ್ಗೆ ತಿಳಿದು, ಅರಿತು ಖುಷಿಪಡುವ ಒಂದು ಸಮಾರಂಭವಾಗಿದೆ. 87ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನವು ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಸಮ್ಮೇಳನವನ್ನು ಯಶಸ್ವಿಯಾಗಿ, ಸದಾ ನೆನಪಿರುವಂತೆ ಮಾಡುವುದು ನಮ್ಮ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕಿದೆ ಎಂದರು.

ಜಾಗತಿಕ ಮಟ್ಟದದ ಅತ್ಯುನ್ನತ ಹುದ್ದೆಗೆ ಏರಿದ ಮಂಡ್ಯ ಮೂಲದ ಹೆಮ್ಮೆಯ ಸುಪುತ್ರ ಡಾ.ವಿವೇಕ ಮೂರ್ತಿ ಅವರಾಗಿದ್ದಾರೆ. ಅವರನ್ನು ಕರೆಸಿ ಗೌರವಿವಿಸುವುದು ಮಂಡ್ಯ ಜಿಲ್ಲೆಗೆ, ಕನ್ನಡ ನಾಡಿಗೆ ಹೆಮ್ಮೆಯಾಗಲಿದೆ ಎಂದರು.

ಗೌರವಾಧ್ಯಕ್ಷರ ನೇಮಕ
ಅಲ್ಲದೆ, ಸಮ್ಮೇಳನ ಸಮರ್ಪಕವಾಗಿ ನಡೆಯಲು, ಅದ್ಭುತ ಸಂಘಟಕರಾದ, ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗಬಲ್ಲ, ಧಾರ್ಮಿಕ, ಸಾಮಾಜಿ, ಶೈಕ್ಷಣಿಕ ಹಾಗೂ ಹಲವಾರು ಕ್ಷೇತ್ರಗಳಿಗೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿರುವ ಪರಮಪೂಜ್ಯ ಆದಿ ಚುಂಚನಗಿರಿ ಪೀಠಾಧ್ಯಕ್ಷರಾದ ಪರಮಪೂಜ್ಯ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳನ್ನು ಸಮ್ಮೇಳನದ ಗೌರವ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಶಾಸಕ ದಿನೇಶ್‌ ಗೂಳಿಗೌಡ ಅವರು ಸಲಹೆ ನೀಡಿದರು.

Advertisement

ಸಮ್ಮೇಳನದ ನೆನಪಿಗೆ ಹೊಸ ಸಕ್ಕರೆ ಕಾರ್ಖಾನೆ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ನೆರವೇರಿಸಬೇಕು ಎಂದು ಶಾಸಕ ದಿನೇಶ್‌ ಗೂಳಿಗೌಡ ಅವರು ಒತ್ತಾಯಿಸಿದರು.

ಕಾಂಗ್ರೆಸ್‌ನ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಮೈಶುಗರ್‌ ಸಕ್ಕರೆ ಕಾಖಾನೆಯನ್ನು ಪುನರ್ನಿರ್ಮಾಣ ಮಾಡುವುದಾಗಿ ಘೋಷಿಸಲಾಗಿತ್ತು. ಸಮ್ಮೇಳನದ ಸಂದರ್ಭದಲ್ಲಿ ಶಂಕುಸ್ಥಾಪನೆಯಾದರೆ, ಶಾಶ್ವತ ಮೂಲ ಸೌಕರ್ಯ ನಿರ್ಮಾಣ ಮಾಡಿದಂತಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಶಾಸಕ ದಿನೇಶ್‌ ಗೂಳಿಗೌಡ ಅವರು ಸಲಹೆ ನೀಡಿದರು.

ವಿವೇಕ ಮೂರ್ತಿ ಯಾರು..?
ಡಾ.ವಿವೇಕ ಮೂರ್ತಿ ಅವರು ಮೈಸೂರು ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕದ ವೈದ್ಯಕೀಯ ಕ್ಷೇತ್ರದ ಅತ್ಯುನ್ನತ ಹುದ್ದೆಗೆ ಏರಿದ ಮೊದಲ ಭಾರತೀಯ ಮೂಲದವರಾಗಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬಿಡನ್‌ ಸರ್ಕಾರದಲ್ಲಿ ಯುನೈಟೆಡ್‌ ಸ್ಟೇಟ್ಸ್‌(ಯುಎಸ್‌ಎ) ಪಬ್ಲಿಕ್‌ ಹೆಲ್ತ್‌ ಕಮೀಷನ್ಡ್‌ ಕಾಪ್ಸ್‌ನಲ್ಲಿ ಅವರು ಸದ್ಯ ವೈಸ್‌ ಅಡ್ಮಿರಲ್‌ ಆಗಿದ್ದಾರೆ.

ಈ ಹಿಂದೆ ಅವರು 2013 ರಲ್ಲಿ ಅವರು ಬರಾಕ್‌ ಒಬಾಮಾ ಸರ್ಕಾರದಲ್ಲಿ ಅಮೆರಿಕದ 19 ನೇ ಸರ್ಜನ್‌ ಜನರಲ್‌ ಆಗಿದ್ದರು. 2020 ರಲ್ಲಿ ಅವರು ಜೋ ಬಿಡೆನ್‌ ಅವರ ಕೋವಿಡ್‌ ಸಲಹಾ ಸಮಿತಿಯ ಮೂವರು ಅಧ್ಯಕ್ಷರಲ್ಲಿ ಒಬ್ಬರಾದರು. ಸದ್ಯದಲ್ಲಿಯೇ ಅವರು ಮತ್ತೆ ಅಮೆರಿಕ ಸರ್ಜನ್‌ ಜನರಲ್‌ ಸ್ಥಾನಕ್ಕೆ ಏರಲಿದ್ದಾರೆ ಎಂದು ಅಮೆರಿಕದ ಪತ್ರಿಕೆಗಳು ವರದಿ ಮಾಡುತ್ತಿವೆ. ಅಮೆರಿಕ ಅವರನ್ನು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯಲ್ಲಿ ಯುಎಸ್‌ ಪ್ರತಿನಿಧಿಯಾಗಿ ನಾಮ ನಿರ್ದೇಶನ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next