Advertisement

ರಜತ ಕಿರೀಟಿ ತೋಟಿ ಗಣಪತಿ ಸಾಗರೋಲ್ಲಂಘನ

03:12 PM Jul 04, 2019 | Naveen |

ಹೊನ್ನಾವರ: ವೈವಿಧ್ಯಮಯ ಸೊಬಗಿನ ನೃತ್ಯ, ಸುಂದರ ವೇಷ-ಭೂಷಣ ಮತ್ತು ಯಕ್ಷಗಾನದ ಹಿರಿಯ ದಿಗ್ಗಜರ ಶೈಲಿಯ ಸಮರಸವಾದ ಜನಪ್ರಿಯ ಯಕ್ಷಗಾನ ಕಲಾವಿದ ತೋಟಿ ಗಣಪತಿ ಹೆಗಡೆ ಅಮೆರಿಕ ಹವ್ಯಕ ಸಂಘಟನೆ ಆಶ್ರಯದಲ್ಲಿ ಜು.5-6 ರಂದು ಮತ್ತು 13ರಂದು ವೈವಿಧ್ಯಮಯ ಯಕ್ಷಗಾನ ಪ್ರದರ್ಶನ ನೀಡಲು ಸಾಗರೋಲ್ಲಂಘನ ಗೈದಿದ್ದಾರೆ.

Advertisement

ಮಾರುತಿ ಪಾತ್ರಕ್ಕೆ ಪ್ರಸಿದ್ಧರಾದ ತೋಟಿಯವರಿಗೆ ಕಳೆದ ವರ್ಷ ಅಭಿಮಾನಿಗಳು ರಜತ ಕಿರೀಟ ನೀಡಿ, ಸನ್ಮಾನಿಸಿದ್ದಾರೆ. ಹಿಮ್ಮೇಳದಲ್ಲಿ ಭಾಗವತ ಅನಂತ ಹೆಗಡೆ ದಂತಳಿಕೆ ಯಲ್ಲಾಪುರ, ಮೃದಂಗ ವಾದಕರಾಗಿ ಶಂಕರ ಭಾಗವತ ಯಲ್ಲಾಪುರ, ಸಾಗರದ ಸಂಜಯ ಬೆಳಿಯೂರು ಈ ನಾಲ್ವರ ತಂಡ ಪ್ರಯಾಣ ಬೆಳೆಸಿದ್ದು ಉಳಿದ ಪಾತ್ರಕ್ಕೆ ಅಮೆರಿಕಾದ ಯಕ್ಷಗಾನ ಪ್ರಿಯರು ಜೊತೆಯಾಗಲಿದ್ದಾರೆ.

ಜು.5-6 ರಂದು ನಾದನಾಟ್ಯ ವೈಭವ ಮತ್ತು ಕಾರ್ತವೀರ್ಯಾರ್ಜುನ ಪ್ರದರ್ಶನವಿದೆ. ಯಕ್ಷಮಿತ್ರ ಟೊರೆಂಟೋದ 10ನೇ ವಾರ್ಷಿಕೋತ್ಸವದ ಅಂಗವಾಗಿ ಗದಾಯುದ್ಧ ಪ್ರದರ್ಶನ 13ರಂದು ಶೃಂಗೇರಿ ವಿದ್ಯಾಭಾರತೀ ಸಭಾಂಗಣ ಬ್ರಾಯ್ದನ್‌ ಡ್ರೈವ್‌ ಎಟೋಬೊಕೋದಲ್ಲಿ ನಡೆಯಲಿದೆ. ಕರ್ನಾಟಕದ ಸಾಂಪ್ರದಾಯಿಕ ಶೈಲಿಯಲ್ಲಿ ಮುದ್ರಣವಾದ ಕರಪತ್ರ ಆಮಂತ್ರಣಗಳು ಯಕ್ಷಗಾನದ ಹಿರಿಮೆ ಭೂಗೋಲದ ಅಡಿಭಾಗದಲ್ಲಿ ವಿಜೃಂಭಿಸುವುದನ್ನು ನೋಡುವುದಕ್ಕೆ ಅಲ್ಲಿಯ ಕಲಾಪ್ರೇಮಿಗಳಿಗೆ ಕರೆನೀಡಿದೆ. ಪ್ರೇಕ್ಷಕರಿಗೆ ಭೋಜನ ವ್ಯವಸ್ಥೆ ಸಹಿತ 20ಅಮೆರಿಕನ್‌ ಡಾಲರ್‌ (1360 ರೂ.), ಹಿರಿಯ ನಾಗರಿಕರಿಗೆ ಶೇ. 3ಡಿಸ್ಕೌಂಟ್, ಕಾದಿರಿಸಿದ ಆಸನಗಳಿಗೆ 12ಅಮೆರಿಕನ್‌ ಡಾಲರ್‌ (816 ರೂ.), ಪ್ರವೇಶ ದರ ನಿಗದಿಯಾಗಿದ್ದು 12ವರ್ಷದ ಒಳಗಿನವರಿಗೆ ಉಚಿತ ಪ್ರವೇಶ ಎಂದು ಪ್ರಕಟಿಸಲಾಗಿದೆ.

ತೋಟಿ ವೃತ್ತಿ ಕಲಾವಿದರಾಗಿ ಹವ್ಯಾಸಿ ಕಲಾವಿದರ ಜೊತೆ ಮಾತ್ರವಲ್ಲ ಯಕ್ಷಗಾನ ಲೋಕದ ಎಲ್ಲ ಕಲಾವಿದರ ಜೊತೆ ವೇಷ ಮಾಡಿದವರು. ಎಲ್ಲರೊಂದಿಗೆ ಹೊಂದಿಕೊಳ್ಳುವ ಗಣಪತಿ ಹೆಗಡೆ ಪರಮ ದೈವಭಕ್ತರು. ಯಕ್ಷಗಾನವೇ ಅವರ ಜೀವಾಳ. ಅವರು ಕಲೆಗೆ ತಮ್ಮನ್ನು ಸಮರ್ಪಿಸಿಕೊಂಡಿರುವುದರಿಂದ ಅಭಿಮಾನಿಗಳಿಗೆ ವಿಶೇಷ ಪ್ರೀತಿ. ಹಲವಾರು ಬಾರಿ ವಿದೇಶ ಪ್ರವೇಶ ಮಾಡಿರುವ ತೋಟಿಯವರು ಪ್ರಥಮ ಬಾರಿ ಅಮೆರಿಕಾಕ್ಕೆ ಹೋಗಿದ್ದಾರೆ. ಇವರು ಮುಗ್ವಾ ಸುಬ್ರಹ್ಮಣ್ಯ ಕ್ಷೇತ್ರದವರು.

Advertisement

Udayavani is now on Telegram. Click here to join our channel and stay updated with the latest news.

Next