Advertisement

Honnavara: ವಿಚಾರಣೆ ವೇಳೆ ವಿಷ ಸೇವಿಸಿದ ಆರೋಪಿ ; ಚಿಕಿತ್ಸೆ ಫಲಿಸದೆ ಸಾವು

12:29 PM Jun 25, 2023 | Team Udayavani |

ಹೊನ್ನಾವರ: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದ್ದ ವೇಳೆ ವಿಷ ಸೇವಿಸಿದ ಒರ್ವ ಆರೋಪಿ ಮೃತಪಟ್ಟ ಘಟನೆ ಹೊನ್ನಾವರ ಪೋಲಿಸ್ ಠಾಣೆಯಲ್ಲಿ ಸಂಭವಿಸಿದೆ.

Advertisement

ಪಟ್ಟಣದ ಸಾಲೆಹಿತ್ತಲ್ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮೂಲದ ಇಬ್ಬರು ಚಿನ್ನ ಹೊಳಪು ಮಾಡುತ್ತಿರುವ ಬಗ್ಗೆ ವಿಚಾರಣೆಗೆ ಕರೆ ತರಲಾಗಿತ್ತು.

ಬಂಧಿತರಲ್ಲಿ ಒಬ್ಬರಾದ ದಿಲೀಪ ಮಂಡೇಲ್ ವಿಚಾರಣೆ ವೇಳೆ ಚಿನ್ನಕ್ಕೆ ಹೊಳಪು ನೀಡುವ ಕಾರ್ಯ ತೋರಿಸುತ್ತಿರುವಾಗ ಸೆನೈಡ್ ಬಗೆಯ ವಿಷವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.  ಈತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಈ ಕುರಿತು ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶಿಸಲಾಗಿದೆ. ಸಿಪಿಐ ಮಂಜುನಾಥ, ಇ.ಓ ಕೈಂ ಪಿಎಸೈ ಮಂಜೇಶ್ವರ ಚಂದಾವರ, ಸಿಬ್ಬಂದಿಗಳಾದ ಸಂತೋಷ, ರಮೇಶ ಲಂಬಾಣಿ, ಮಹಾವೀರ ಅಮಾನತಾದ ಸಿಬ್ಬಂದಿಗಳು.

ಶನಿವಾರ ರಾತ್ರಿಯೇ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ ಆರಂಭದಲ್ಲಿ ವಿಚಾರಣೆ ನಡೆಸಿ ನಂತರ ಮಂಗಳೂರು ವಲಯದ ಐ ಜಿ ಚಂದ್ರಗುಪ್ತ ಸುದೀರ್ಘ ಅವರ ಎರಡು ಗಂಟೆಯ ವಿಚಾರಣೆಯ ಬಳಿಕ ಈ ಆದೇಶ ಜಾರಿಯಾಗಿದೆ.

Advertisement

ಮೃತದೇಹವನ್ನು ಖಾಸಗಿ ಆಸ್ಪತ್ರೆಯಲ್ಲಿ ಇಡಲಾಗಿದ್ದು, ರವಿವಾರ ಮ್ಯಾಜಿಸ್ಟೇಟ್ ಸಮ್ಮುಖದಲ್ಲಿ ಕುಟುಂಬದ ಅನುಮತಿ ಮೇರೆಗೆ ಮರಣೊತ್ತರ ಪರೀಕ್ಷೆ ನಡೆಯಲಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕು ಆಯೋಗ, ಸಿ.ಐ.ಡಿ ಅಧಿಕಾರಿಗಳು ಪ್ರಕರಣದ ವಿಚಾರಣೆಗೆ ಆಗಮಿಸುವ ಸಾಧ್ಯತೆ ಇದ್ದು, ತನಿಖೆಯ ಬಳಿಕ ಪ್ರಕರಣದ ಸತ್ಯಾಸತ್ಯತೆ ಬೆಳಕಿಗೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next