Advertisement

ಕುಗ್ರಾಮದಲ್ಲಿ 22ರಂದು ಜನಪದ ದೀಪಾರಾಧನೆ 

03:52 PM Dec 12, 2018 | |

ಹೊನ್ನಾವರ: ಜಾನಪದ ವಿಶ್ವಪ್ರತಿಷ್ಠಾನ, ಜಾಗೃತಿ ಸಂಘ ಕುಂಟಕಣಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಚವೆ, ಚನಗಾರ ಆಶ್ರಯದಲ್ಲಿ ಡಿ.22 ರಂದು ಡಾ| ಎನ್‌. ಆರ್‌. ನಾಯಕ ಆರಂಭಿಸಿದ ಜಾನಪದ ದೀಪಾರಾಧನೆ ಡೆಲ್ಲಿ ಜೆಎನ್‌ಯು ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಡಾ| ಪುರುಷೋತ್ತಮ ಬಿಳಿಮಲೆ ಉಪಸ್ಥಿತಿಯಲ್ಲಿ ನಡೆಯಲಿದೆ.

Advertisement

ಅಂದು ಸಂಜೆ 3:30ಕ್ಕೆ ಡಾ| ಬಿಳಿಮಲೆ ಉದ್ಘಾಟಿಸಿ, ಪುಸ್ತಕಗಳನ್ನು ಬಿಡುಗಡೆ ಮಾಡುವರು. ಡಾ| ಎನ್‌. ಆರ್‌. ನಾಯಕರ ಕನಸು ಕವನ, ಶಾಂತಿ ನಾಯಕರ ಜಾನಪದ ಕಿರುಬರಹ ದಂಡೆ, ಅಕ್ಷತಾ ಕೃಷ್ಣಮೂರ್ತಿ ಇವರ ಕೇದಿಗೆಯ ಕಂಪು ಕೃತಿಗಳು ಬಿಡುಗಡೆಯಾಗಲಿವೆ. ಕೃತಿಗಳ ಕುರಿತು ಅಕ್ಷತಾ ಕೃಷ್ಣಮೂರ್ತಿ, ಫಾಲ್ಗುಣ ಗೌಡ, ಡಾ| ಶೋಭಾ ನಾಯಕ ಮಾತನಾಡುವರು. ನಂತರ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ| ಬಿಳಿಮಲೆ ಅವರಿಗೆ ಕುವೆಂಪು ದೀಪ ಪ್ರಶಸ್ತಿ, ಯಕ್ಷಗಾನ ಕಲಾವಿದ ಜನಾರ್ದನ ಮರಾಠೆ ಅವರಿಗೆ ಡಾ| ಶಿವರಾಮ ಕಾರಂತ ದೀಪ ಪ್ರಶಸ್ತಿ, ಜಾನಪದ ಕತೆಗಾರ್ತಿ ಗೋಪಿ ಸಿದ್ಧಿ ಅವರಿಗೆ ದೇವಮ್ಮ ರಾಮ ನಾಯಕ ದೀಪ ಪ್ರಶಸ್ತಿ, ದಿವ್ಯಶ್ರೀ ಆಲು ಗೌಡರಿಗೆ ಪ್ರತಿಭಾ ವಿದ್ಯಾರ್ಥಿ ದೀಪ ಪ್ರಶಸ್ತಿ ಪ್ರಶಸ್ತಿ ಪ್ರದಾನ ಮತ್ತು ಜನಪದ ಕಲಾವಿದೆ ಹನಮಿ ಕ್ಷೇತ್ರ ಗೌಡರಿಗೆ ಆರ್ಥಿಕ ಸಹಾಯ ಮಾಡಲಾಗುವುದು.

ಡಾ| ಎನ್‌.ಆರ್‌. ನಾಯಕ, ಶಾಂತಿ ನಾಯಕ 50ವರ್ಷಗಳಿಗೂ ಹೆಚ್ಚುಕಾಲ ಜಾನಪದ ಸಾಹಿತ್ಯ ಸಂಗ್ರಹ, ಮುದ್ರಣ, ಪ್ರಕಟಣೆ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು 10ಸಾವಿರ ಪುಟಗಳಿಗೂ ಹೆಚ್ಚು ಜಾನಪದ ಸಾಹಿತ್ಯ ಪುಸ್ತಕ ರೂಪದಲ್ಲಿ ಬಂದಿದೆ. ರಾಜ್ಯದ ನಾನಾಭಾಗಗಳಲ್ಲಿ ಮತ್ತು ದೆಹಲಿಯಲ್ಲಿ ಒಟ್ಟೂ 36 ಜಾನಪದ ದೀಪಾರಾಧನೆ ನಡೆದಿದ್ದು 37ನೇ ದೀಪಾರಾಧನೆ ಅಂಕೋಲಾ ತಾಲೂಕಿನ ಕುಗ್ರಾಮದಲ್ಲಿ ನಡೆಯಲಿದೆ. ಡಾ| ನಾಯಕ ದಂಪತಿ ಜಾನಪದ ಸಂಗ್ರಹವನ್ನು ಉಳಿಸಿ, ಬೆಳೆಸಿ ವಿವಿಧ ಚಟುವಟಿಕೆಗಳನ್ನು ನಡೆಸಲು ಅವರ ಮಕ್ಕಳಾದ ಸವಿತಾ, ರವಿ ಮತ್ತು ವಿವೇಕ ಜಾನಪದ ಪ್ರತಿಷ್ಠಾನ ಸ್ಥಾಪಿಸಿಕೊಂಡಿದ್ದಾರೆ. ಜಿಲ್ಲೆಯ ಎಲ್ಲ ಜಾತಿ, ಧರ್ಮಗಳ ಜಾನಪದ ಸಾಹಿತ್ಯದ ಶೆ. 90ರಷ್ಟನ್ನು ಸಂಗ್ರಹಿಸಿ ರಕ್ಷಿಸಿದ ಕೀರ್ತಿ ಡಾ| ದಂಪತಿಗೆ ಸಲ್ಲುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next