ಹೊನ್ನಾವರ: ಮಾಜಿ ಶಾಸಕಿ ಶಾರದಾ ಶೆಟ್ಟಿ ತಮ್ಮ ಶಾಸಕತ್ವದ ಅವಧಿಯಲ್ಲಿ ಹೊನ್ನಾವರ ಪಟ್ಟಣಕ್ಕೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಮುಂಬರುವ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಈ ಕುರಿತು ಜನತೆಗೆ ತಿಳಿಸಬೇಕು. ಪಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪುನಃ ಅಧಿಕಾರಕ್ಕೆರಲೂ ಸರ್ವ ಪ್ರಯತ್ನ ನಡೆಸೋಣಾ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಮುಂಬರುವ ಪಪಂ ಚುನಾವಣೆ- 2019ರ ಪೂರ್ವಬಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮಾಜಿ ಶಾಸಕಿ ಶಾರದಾ ಶೆಟ್ಟಿ ಮಾತನಾಡಿ, ಹೊನ್ನಾವರಕ್ಕೆ ಬಹುಉಪಯೋಗಿ ಯೋಜನೆಯಾದ ಶರಾವತಿ ಕುಡಿಯುವ ನೀರಿನ 123 ಕೋಟಿ ವೆಚ್ಚದ ಯೋಜನೆ ನನ್ನ ಅಧಿಕಾರಾವಧಿಯಲ್ಲಿ ಮಂಜೂರಾಗಿದ್ದು, ಆ ಕಾಮಗಾರಿ ಪೂರ್ಣಗೊಂಡ ನಂತರ ಹೊನ್ನಾವರ ನಗರ ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತಿ ಹೊದುತ್ತದೆ. ಇಂತಹ ಅನೇಕ ಜನಪರ ಯೋಜನೆಗಳನ್ನು ತನ್ನ ಪ್ರಯತ್ನದಿಂದ ಆರಂಭಗೊಂಡಿದ್ದು, ಈ ಕುರಿತಂತೆ ಜನತೆಗೆ ಮನವರಿಕೆ ಮಾಡಿ ಹೊನ್ನಾವರ ಪಪಂನ್ನು ಪುನಃ ಕಾಂಗ್ರೆಸ್ ಕೈವಶವಾಗುವಂತೆ ಪ್ರಯತ್ನಿಸಿ ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ಪಕ್ಷಕ್ಕೆ ಹಲವಾರು ವರ್ಷಗಳಿಂದ ಪ್ರಾಮಾಣಿಕವಾಗಿ ದುಡಿಯುತ್ತಿರುವ ಕಾರ್ಯಕರ್ತರಿಗೆ ಪ.ಪಂ. ಟಿಕೆಟ ನೀಡುವಲ್ಲಿ ಪ್ರಥಮ ಆದ್ಯತೆ ನೀಡಲಾಗುವುದು ಎಂದರು. ಈ ಹಿಂದೆ ಪಪಂನಲ್ಲಿ ಸತತವಾಗಿ ಟಿಕೆಟ ಪಡೆದು ಆರಿಸಿ ಬಂದವರು ಇನ್ನೊಬ್ಬರಿಗೆ ಅವಕಾಶ ಮಾಡಿಕೊಡುವಂತಹ ಮನಸ್ಥಿತಿ ಬೆಳೆಸಿಕೊಳ್ಳುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು. ಕಾರ್ಯಕರ್ತರು, ಮುಖಂಡರು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಪಕ್ಷದ ಒಳಿತಿಗಾಗಿ ಎಲ್ಲರೂ ಒಗ್ಗೂಡಿ ಹೋರಾಡುವಂತೆ ಕರೆ ನೀಡಿದರು.
ಮುಸಾ ಅಣ್ಣಿಗೇರಿ, ಸುರೇಶ ಮೇಸ್ತ, ತುಳಸಿ ಗೌಡ, ಅಲೆಕ್ಸ್ ಪರ್‍ನಾಂಡಿಸ್ ಇನ್ನೂ ಮುಂತಾದವರು ಅನೇಕ ಸಲಹೆ-ಸೂಚನೆ ನೀಡಿ ಮಾತನಾಡಿದರು.
ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್. ನಾಯ್ಕ, ಕೆಪಿಸಿಸಿ, ಹಿಂದುಳಿದ ವರ್ಗ ವಿಭಾಗದ ಕಾರ್ಯದರ್ಶಿ ರವಿಕುಮಾರ ಶೆಟ್ಟಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಎನ್. ಸುಬ್ರಹ್ಮಣ್ಯ, ನಗರ ಘಟಕದ ಅಧ್ಯಕ್ಷ ಕೇಶವ ಮೇಸ್ತ, ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಆಗ್ನೇಲ್ ಡಯಾಸ್, ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಜಕ್ರಿಯಾ ಸಾಬ್, ಕೂಲಿ ಕಾರ್ಮಿಕ ವಿಭಾಗದ ಅಧ್ಯಕ್ಷ ಶ್ರೀಕಾಂತ ಮೇಸ್ತ, ಮಾಜಿ ಪಪಂ ಅಧ್ಯಕ್ಷ ರವಿಂದ್ರ ನಾಯ್ಕ, ರಾಜಶ್ರೀ ನಾಯ್ಕ, ಜೋನೆನ್ ಡಯಾಸ್, ಜೈನಾಬಿ ಸಾಬ್, ಪ.ಪಂ ಸದಸ್ಯರಾದ ಜಮೀಲಾ ಶೇಖ್, ಪಕ್ಷದ ಮುಖಂಡರಾದ ವಿನಾಯಕ ಶೇಟ್, ದಾಮೋದರ ನಾಯ್ಕ, ಬಾಲಚಂದ್ರ ನಾಯ್ಕ, ಹರೀಶ ನಾಯ್ಕ, ಉಮಾ ಮೇಸ್ತ, ಚಂದ್ರಶೇಖರ ಚಾರೋಡಿ ಇನ್ನು ಮುಂತಾದವರು ಇದ್ದರು.