Advertisement

ನಾಲೆ ದುರಸ್ತಿಯಿಂದ ನಳನಳಿಸುತ್ತಿವೆ ಬೆಳೆಗಳು

11:29 AM Nov 29, 2019 | Naveen |

ಹೊನ್ನಾಳಿ: ತಾಲೂಕಿನ ಅರ್ಧ ಭಾಗದಲ್ಲಿ ಹಾದು ಹೋಗಿರುವ ತುಂಗಾ ಎಡದಂಡೆ ನಾಲೆ ಕಳೆದ ಎರಡು-ಮೂರು ದಶಕಗಳಿಂದ ಹೂಳು ತುಂಬಿದ ಕಾರಣಕ್ಕೆ ರೈತರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೀಗ, ಜನಪ್ರತಿನಿಧಿ ಗಳು, ಸರಕಾರಗಳ ಇಚ್ಛಾಶಕ್ತಿಯಿಂದಾಗಿ ನಾಲೆಯ ಆಧುನೀಕರಣ ಕಾಮಗಾರಿ ಶೇ.70ರಷ್ಟು ಪೂರ್ಣಗೊಂಡಿದ್ದು, ತುಂಗಾ ಎಡದಂಡೆ ನಾಲೆಯನ್ನು ಅವಲಂಬಿಸಿರುವ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕುಗಳ ಹೊಲಗಳಲ್ಲಿ ಈ ಬಾರಿ ಭತ್ತದ ಗದ್ದೆಗಳು ನಳನಳಿಸುತ್ತಿದ್ದು, ರೈತರು ಹರ್ಷಚಿತ್ತರಾಗಿದ್ದಾರೆ.

Advertisement

ಶಿವಮೊಗ್ಗ ಜಿಲ್ಲೆಯ ಗಾಜನೂರು ಅಣೆಕಟ್ಟೆಯಿಂದ ತುಂಗಾ ಎಡದಂಡೆ ನಾಲೆ ಕಳೆದ ನಾಲ್ಕೈದು ದಶಕಗಳಿಂದ ನೀರು ಪೂರೈಸುತ್ತಿದ್ದು, ಮೂರು ದಶಕಗಳಿಂದ ಹೂಳಿನ ಸಮಸ್ಯೆ ರೈತರನ್ನು ಬಾಧಿ ಸುತ್ತಿತ್ತು. ಕಳೆದ 2 ವರ್ಷಗಳಿಂದ ನಾಲೆ ಆಧುನೀಕರಣ ಭರದಿಂದ ನಡೆದ ಪರಿಣಾಮ ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆಗಳಿಗೆ ಯಥೇತ್ಛವಾಗಿ ನೀರು ಲಭಿಸಿದೆ. ನ್ಯಾಮತಿ ತಾಲೂಕಿನ ಗೋವಿನಕೋವಿ, ಹೊನ್ನಾಳಿ ತಾಲೂಕಿನ ಹರಳಹಳ್ಳಿ, ಸುಂಕದಕಟ್ಟೆ, ಹೊನ್ನಾಳಿ ಪಟ್ಟಣ, ಬಲಮುರಿ, ಕೋನಾಯಕನಹಳ್ಳಿ  ಮಗಳ ಮೂಲಕ ಹಾದುಹೋಗಿರುವ ನಾಲೆಗಳಲ್ಲಿ ಹೂಳು ತುಂಬಿ ನೀರಿನ ಸಮಸ್ಯೆ ಅಧಿಕವಾಗಿತ್ತು. ಇದೀಗ, ಸುಂಕದಕಟ್ಟೆ ಗ್ರಾಮದವರೆಗೆ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ಗ್ರಾಮಗಳಲ್ಲಿ ಶೀಘ್ರವೇ ಕಾಮಗಾರಿ ಆರಂಭ ಆಗಲಿದೆ. ನಾಲೆಯಿಂದ ಅವಳಿ ತಾಲೂಕಿನ ಸುಮಾರು 100 ಹೆಕ್ಟೇರ್‌ ಜಮೀನಿಗೆ ನೀರಾವರಿ ಸೌಲಭ್ಯದೊರಕುತ್ತದೆ.

2017ರಲ್ಲಿ ತುಂಗಾ ಎಡದಂಡೆ ನಾಲೆಯ ಆಧುನೀಕರಣ ಕಾಮಗಾರಿ ಆರಂಭಿಸಲಾಗಿದ್ದು, ಒಟ್ಟು 343 ಕೋಟಿ ರೂ.ವೆಚ್ಚದಲ್ಲಿ ನಡೆಯುತ್ತಿದೆ. ಶಿವಮೊಗ್ಗ ತಾಲೂಕಿನ ಗಾಜನೂರಿನಿಂದ ಅಚ್ಚುಕಟ್ಟು ಪ್ರದೇಶದ ಕೊನೆಯವರೆಗೆ ಅಂದರೆ ಹೊನ್ನಾಳಿ ತಾಲೂಕಿನ ಕೋನಾಯಕನಹಳ್ಳಿ, ಬಳ್ಳೇಶ್ವರ ಗ್ರಾಮಗಳವರೆಗೆ ನಾಲೆಯ ಉದ್ದ ಒಟ್ಟು 101 ಕಿಮೀ ಇದ್ದು, ಚೀಲೂರು ಭಾಗದಿಂದ ಮೊದಲುಗೊಂಡ ಹೊನ್ನಾಳಿ ತಾಲೂಕಿನ ವ್ಯಾಪ್ತಿಯಲ್ಲಿ ನಾಲೆಯ ಉದ್ದ ಒಟ್ಟು 19 ಕಿಮೀ ಇದೆ.

2018ರ ಸೆಪ್ಟಂಬರ್‌-ಅಕ್ಟೋಬರ್‌ ತಿಂಗಳ ಹೊತ್ತಿಗೆ ಅಕಾಲಿಕ ಮಳೆಯಿಂದ ಕಾಮಗಾರಿಗೆ ಅಡ್ಡಿಯುಂಟಾಯಿತು. ಈಗ ಮುಂಗಾರು ಬೆಳೆಗೆ ನೀರು ಹರಿಸಲಾಗುತ್ತಿದ್ದು, ನೀರು ಹರಿಸುವುದು ನಿಲ್ಲಿಸಿದ ನಂತರ ಮತ್ತೆ ಕಮಗಾರಿ ಆರಂಭಿಸಲಾಗುವುದು.
.ರಘುರೆಡ್ಡಿ,ಯೋಜನಾ ವ್ಯವಸ್ಥಾಪಕ.

ತುಂಗಾ ಎಡದಂಡೆ ನಾಲೆಯ ಆಧುನೀಕರಣ ಕಾಮಗಾರಿಯನ್ನು ಕಳೆದ ಎರಡು ವರ್ಷಗಳಿಂದ ಅಚ್ಚುಕಟ್ಟಾಗಿ ನಿರ್ವಹಿಸಿರುವ ಪರಿಣಾಮ ನಾಲೆಗಳಲ್ಲಿ ಸರಾಗವಾಗಿ ನೀರು ಹರಿಯುತ್ತಿದ್ದು, ಕಾಮಗಾರಿಯ ಕೊನೆಯ ಹಂತ ಬಾಕಿ ಇದ್ದು, ಅದೂ ಶೀಘ್ರದಲ್ಲಿಯೇ ಪೂರ್ಣಗೊಳ್ಳುತ್ತದೆ.
.ಜಯಮಣಿಕಂಠನ್‌,
ಚೀಲೂರು ಭಾಗದ ಯೋಜನಾ ವ್ಯವಸ್ಥಾಪಕ.

Advertisement
Advertisement

Udayavani is now on Telegram. Click here to join our channel and stay updated with the latest news.

Next