Advertisement
ಮಹಿಳಾ ಮೀಸಲಿದ್ದ ಹೊನ್ನಾಪೂರ ಮತ್ತು ಅರವಟಗಿ ಎರಡೂ ಗ್ರಾಪಂಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಪುರುಷ ಸ್ಥಾನಕ್ಕೆ ಮೀಸಲಿದ್ದ ಕಡಬಗಟ್ಟಿ ಮತ್ತು ಬೆಣಚಿ ಪಂಚಾಯಿತಿಗಳಿಗೆ ಚುನಾವಣೆ ನಡೆಯಿತು. ನಾಲ್ಕು ಗ್ರಾಮ ಪಂಚಾಯಿತಿಗಳ ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ವಿಶೇಷ. ಅರವಟಗಿ ಗ್ರಾಮ ಪಂಚಾಯಿತಿ: 14 ಸ್ಥಾನ ಬಲಾಬಲದ ಅ ವರ್ಗ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಅಮಿನಾಭಿ ಲಾಲಸಾಬ ಕಾಶಿನಗುಂಟಿ ಹಾಗೂ ಸಾಮಾನ್ಯ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಅಶೋಕ ಜೊಡಟ್ಟಿಯವರ ಅವಿರೋಧ ಆಯ್ಕೆಯಾದರು. ಅಧ್ಯಕ್ಷೆ ಅಮಿನಾಬಿ ಅವರು ಈಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕೂಡಾಸದಸ್ಯರಾಗಿ ಅವಿರೋಧ ಆಯ್ಕೆಯಾಗಿದ್ದರು.
Related Articles
Advertisement
ಇದನ್ನೂ ಓದಿ : ವರೂರು ಗ್ರಾಪಂನಲ್ಲಿ ದಂಪತಿ ದರ್ಬಾರ್
ಕಡಬಗಟ್ಟಿ: 12 ಸ್ಥಾನ ಬಲಾಬಲದ ಗ್ರಾಮ ಪಂಚಾಯಿತಿಗೆ ಅ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಹುಲಿಕೇರಿ ಗ್ರಾಮದ ರಾಸೂಲಸಾಬ ಪೀರಸಾಬ ಡೆಂಕೆವಾಲೆ, ದಸಗೀರ ಹುನಶಿಕಟ್ಟಿ ಸ್ಪರ್ಧಿಸಿದ್ದರು. ಎರಡು ಮತಗಳ ಅಂತರದಿಂದ ಡಂಕೆವಾಲೆ ವಿಜೇತರಾದರು. ಸಾಮಾನ್ಯ ಮಹಿಳಾ ಸ್ಥಾನಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ರೂಪಾ ಪ್ರವೀಣ ಕೋಟಿ ಅವಿರೋಧವಾಗಿ ಆಯ್ಕೆಯಾದರೆಂದು ಚುನಾವಣಾಧಿಕಾರಿ ಶ್ರೀಪಾಲ ಕುರಕುರಿ ತಿಳಿಸಿದ್ದಾರೆ.
ಫಲಿತಾಂಶ ಘೋಷಣೆ ಆದ ನಂತರ ಅಭಿಮಾನಿಗಳು ಗುಲಾಲ ಹಾಕಿ, ಸಿಹಿ ಹಂಚಿ ಸಂಭ್ರಮಿಸಿದರು. ಅರವಟಗಿ ಗ್ರಾಪಂ ಅಧ್ಯಕ್ಷೆ ಅಮೀನಾಭಿ ಕಾಶಿನಗುಂಟಿ ಮಾತನಾಡಿ, ಸರ್ವ ಸದಸ್ಯರ ಸಹಕಾರದಿಂದ ಗ್ರಾಮಗಳ ಸಮಗ್ರ ಸಅಭ್ಯುದಯಕ್ಕೆ ಶ್ರಮಿಸಿ ಮಾದರಿ ಪಂಚಾಯ್ತಿ ಮಾಡಲು ದುಡಿಯುವೆ ಎಂದರು.
ಬೆಣಚಿ ಗ್ರಾಪಂ ಅಧ್ಯಕ್ಷ ಸಂದೀಪ ಪಾಟೀಲ ಮಾತನಾಡಿ, ಬಡವರಿಗೆ ಸೂರು ಒದಗಿಸಲು, ಕುಡಿಯುವ ನೀರಿನ ಸಮರ್ಪಕ ಪೂರೈಕೆ, ರಸ್ತೆ, ಚರಂಡಿ ನಿರ್ಮಾಣ ಹಾಗೂ ಸ್ವತ್ಛತೆ ಆದ್ಯತೆ ನೀಡುವೆ ಎಂದರು.