ನರಸಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
Advertisement
ನರಸಗೊಂಡನಹಳ್ಳಿ ಗ್ರಾಮದ ಅಶೋಕ್ ಎಂಬುವವರ ಒಂದು ಎಕರೆಯಲ್ಲಿ 750 ಬಾಳೆಗಿಡಗಳನ್ನು ಬೆಳೆಯಲಾಗಿತ್ತು. ಆ. 12ರಂದು ರಾತ್ರಿ 200 ಬಾಳೆಗೊನೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಒಂದು ಬಾಳೆಗೊನೆಯಲ್ಲಿ 15 ಕೆಜಿ ಬಾಳೆಹಣ್ಣು ಸಿಗಲಿದ್ದು, ಮಾರುಕಟ್ಟೆಯಲ್ಲಿ ಕೆಜಿಗೆ 80ರಿಂದ 90 ರೂ. ದರ ಇದೆ. 200 ಬಾಳೆಗೊನೆಗೆ 3000 ಕೆಜಿ ಅಂದರೆ 2.40 ಲಕ್ಷ ರೂ. ಮಾರುಕಟ್ಟೆಯಲ್ಲಿ ದೊರೆಯುತ್ತಿತ್ತು.
ಪೊಲೀಸ್ ಠಾಣೆಗೆ ಆ. 13ರಂದೇ ದೂರು ನೀಡಿದ್ದರೂ ಇನ್ನೂ ಎಫ್‌ಐಆರ್ ದಾಖಲಾಗಿಲ್ಲ. ತಕ್ಷಣ ಎಫ್‌ಐಆರ್ ಆದರೆ ಉಳಿದಿರುವ ಬಾಳೆಗೊನೆಯನ್ನಾದರೂ ಮಾರುಕಟ್ಟೆಯಲ್ಲಿ ಮಾರಿಬಿಡೋಣ ಎಂದರೆ ಪೊಲೀಸರು
ಪ್ರಕರಣ ದಾಖಲು ಮಾಡಿಕೊಳ್ಳುತ್ತಿಲ್ಲ ಎಂದು ಅಶೋಕ್ ಅಸಮಾಧಾನ ವ್ಯಕ್ತಪಡಿಸಿದರು. ಬಾಳೆ ತೋಟದಲ್ಲಿ 200 ಬಾಳೆಗೊನೆಗಳನ್ನು ಕಳ್ಳತನ ಮಾಡಲಾಗಿದ್ದರೆ, ಭಾರೀ ಮಳೆಯಿಂದ ನಮ್ಮ ಮನೆಯ ಹಿಂಭಾಗ ಸಂಪೂರ್ಣವಾಗಿಕುಸಿದು ಬಿದ್ದಿದೆ. ಒಮ್ಮೆಲೆ ನನಗೆ ಎರಡು ಸಮಸ್ಯೆ ಎದುರಾಗಿದೆ ಎಂದು ನೋವು ತೋಡಿಕೊಂಡರು.