Advertisement

ದೇವಾಲಯಕ್ಕಿಂತ ಶಾಲೆ ನಿರ್ಮಾಣ ಶ್ರೇಷ್ಠ

05:17 PM Jan 27, 2020 | Naveen |

ಹೊನ್ನಾಳಿ: ಹತ್ತು ದೇವಸ್ಥಾನಗಳನ್ನು ಕಟ್ಟುವುದರ ಬದಲು ಒಂದು ಶಾಲೆ ನಿರ್ಮಿಸುವುದು ಶ್ರೇಷ್ಠ ಎಂದು ಸಂಸದ ಜಿ.ಎಂ. ಸಿದ್ಧೇಶ್ವರ್‌ ಹೇಳಿದರು. ಭಾನುವಾರ ತಾಲೂಕಿನ ಗೊಲ್ಲರಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ನೂತನ ವಿಮಾನ ಗೋಪುರದ ಕಳಸಾರೋಹಣ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Advertisement

ದುಡ್ಡೇ ದೊಡ್ಡಪ್ಪ. ಆದರೆ ವಿದ್ಯೆ ಅದರಪ್ಪ ಎಂದು ನುಡಿವಂತೆ ಶಾಲೆಗಳಿಂದ ನಮ್ಮ ಮಕ್ಕಳು ಸುಶಿಕ್ಷಿತರಾಗುವುದು ಸಾಧ್ಯ. ಆದ್ದರಿಂದ, ಶಾಲೆಗಳ ನಿರ್ಮಾಣ ಶ್ರೇಷ್ಠ ಕೆಲಸ ಎಂದು ತಿಳಿಸಿದರು.

ದೇವಸ್ಥಾನ ಕಟ್ಟುವುದು ಸುಲಭ, ನಿರ್ವಹಣೆ ಕಷ್ಟ. ದೇವಸ್ಥಾನದ ಆದಾಯದ ಮೇಲೆ ಪೂಜಾರಿಯ ಭಕ್ತಿ, ನಿಷ್ಠೆ ಅವಲಂಬನೆಯಾಗಿರುತ್ತದೆ. ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ
ಭಕ್ತರು ಬಂದು ಪೂಜಾರಿಯ ಆದಾಯ ಹೆಚ್ಚಾದರೆ ದೇವರಿಗೆ ವಿವಿಧ ಹಣ್ಣುಗಳು, ಹೂವುಗಳು, ಕುಂಕುಮಾರ್ಚನೆ, ಬೆಣ್ಣೆ ಅಲಂಕಾರ ಇತ್ಯಾದಿ ಮಾಡಲಾಗುತ್ತದೆ. ಇಲ್ಲದಿದ್ದರೆ, ದೇವರಿಗೆ ಪೂಜೆ ಸಲ್ಲಿಸುವುದೇ ದುರ್ಲಭವಾಗುತ್ತದೆ ಎಂದರು. ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಸುಪ್ತ ಚೆ„ತನ್ಯ ಜಗತ್ತನ್ನು ಕಾಪಾಡುತ್ತಿದೆ. ಅದನ್ನು ನಾವು ದೇವರು ಎಂದು ಕರೆಯುತ್ತೇವೆ. ದೇವರ ಸುತ್ತ ಇರುವ ಜನರು ರಕ್ಷಣೆ ಪಡೆಯುತ್ತಾರೆ. ಆದ್ದರಿಂದ, ಎಲ್ಲರೂ ಭಕ್ತಿ ಮಾರ್ಗದಲ್ಲಿ ನಡೆದು ಮೋಕ್ಷ ಪಡೆಯಬೇಕು ಎಂದು ಹೇಳಿದರು. ನಮ್ಮ ಮಕ್ಕಳು ಸಂಸ್ಕಾರವಂತರಾಗಬೇಕು. ಆಗ ಮಾತ್ರ ಉತ್ತಮ ಜೀವನ ನಡೆಸಬಹುದು. ಧಾರ್ಮಿಕ ಆಚರಣೆ, ಧರ್ಮವನ್ನು ಮೈಗೂಡಿಸಿಕೊಳ್ಳುವುದರಿಂದ ಜೀವನ ಪಾವನವಾಗುತ್ತದೆ. ದೇವಸ್ಥಾನ, ಮಠ-ಮಂದಿರಗಳಲ್ಲಿ ಧರ್ಮ ಸಿಗುತ್ತದೆ. ಆದ್ದರಿಂದ, ನಿಯಮಿತವಾಗಿ ದೇವಸ್ಥಾನಗಳಿಗೆ ತೆರಳುವುದರಿಂದ ಸದ್ಗತಿ ಪ್ರಾಪ್ತಿಯಾಗುತ್ತದೆ. ಎಲ್ಲರೂ ಭಕ್ತಿ ಯಿಂದ ನಡೆದುಕೊಂಡು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದರು.

ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಪವಿತ್ರ ದಿನವಾದ ಗಣರಾಜ್ಯೋತ್ಸವ ಹಾಗೂ ಸಂವಿಧಾನ ದಿನದಂದೇ ಗೊಲ್ಲರಹಳ್ಳಿ ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮ
ನಡೆಯುತ್ತಿರುವುದು ವಿಶಿಷ್ಠವಾಗಿದೆ. ದೇವರ ಮೇಲೆ ನಂಬಿಕೆ ಇದ್ದರೆ ಏನೆಲ್ಲ ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ಗೊಲ್ಲರಹಳ್ಳಿ ಗ್ರಾಮಸ್ಥರು ಸಾಕ್ಷಿಯಾಗಿದ್ದಾರೆ ಎಂದರು.

ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಜಿ.ಪಿ. ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು. ಹಿರೇಕಲ್ಮಠದ ಒಡೆಯರ್‌ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮಕ್ಕಳ ಪ್ರಗತಿಗೆ ಶಾಲೆ ಎಷ್ಟು ಮುಖ್ಯವೋ ಗ್ರಾಮದ ಪ್ರಗತಿಗೆ ದೇವಸ್ಥಾನಗಳು ಅಷ್ಟೇ ಮುಖ್ಯವಾಗಿವೆ. ದೇವರ ಸ್ಮರಣೆಯಿಂದ ಮಾತ್ರ ನೆಮ್ಮದಿ ಸಾಧ್ಯ. ದೇವಸ್ಥಾನಗಳು ನೆಮ್ಮದಿಯ ತಾಣಗಳಾಗಿವೆ
ಎಂದು ಹೇಳಿದರು. ಜಿಪಂ ಅಧ್ಯಕ್ಷೆ ಯಶೋದಮ್ಮ ಮರುಳಸಿದ್ಧಪ್ಪ, ಉಪಾಧ್ಯಕ್ಷ ಸಿ. ಸುರೇಂದ್ರನಾಯ್ಕ, ಜಿ.ಪಿ. ವರದರಾಜಪ್ಪಗೌಡ, ದೇವಸ್ಥಾನ ಸಮಿತಿಯ ಸದಸ್ಯ ಈ. ರುದ್ರಪ್ಪ ಮತ್ತಿತರರು ಮಾತನಾಡಿದರು.

Advertisement

ತಾಪಂ ಸದಸ್ಯೆ ದಾಕ್ಷಾಯಣಮ್ಮ ನಾಗರಾಜ್‌, ಮಾಸಡಿ ಗ್ರಾಪಂ ಅಧ್ಯಕ್ಷೆ ಗುತ್ಯಮ್ಮ, ಸದಸ್ಯೆಯರಾದ ರಾಧಮ್ಮ ಮುಕುಂದಪ್ಪ, ಸಾವಿತ್ರಮ್ಮ ಮಂಜಪ್ಪ, ಸಾಕಮ್ಮ ಬಸವರಾಜಪ್ಪ, ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next