Advertisement

ಅವಧಿ ಮೀರಿದ ತಂಪು ಪಾನೀಯ ಬಾಟಲ್‌ ವಶ

05:53 PM Apr 22, 2020 | Naveen |

ಹೊನ್ನಾಳಿ: ಪಟ್ಟಣದ ಖಾಸಗಿ ಬಸ್‌ ನಿಲ್ದಾಣದ ಎದುರಿನ ಬೇಕರಿಯೊಂದರಲ್ಲಿ ಅವಧಿ ಮೀರಿದ ತಂಪು ಪಾನೀಯಗಳನ್ನು ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕಚೇರಿಯ ಜಿಲ್ಲಾ ಅಂಕಿತ ಅಧಿಕಾರಿ ಹಾಗೂ ಜಿಲ್ಲಾ ನೋಡಲ್‌ ಆಫೀಸರ್‌ ಡಾ| ರುದ್ರಸ್ವಾಮಿ ದಾಳಿ ನಡೆಸಿ ಬೇಕರಿಯಲ್ಲಿದ್ದ ಎಲ್ಲಾ ತಂಪು ಪಾನೀಯಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಬೇಕರಿಯಲ್ಲಿನ ತಂಪುಪಾನೀಯ ಬಾಟಲ್‌ ಗಳನ್ನು ಪರಿಶೀಲಿಸಿದಾಗ ಅವಧಿ ಮೀರಿದ್ದು ಎಂದು ತಿಳಿದು ಬಂತು. ಕೂಡಲೇ ಅವುಗಳನ್ನು ತಮ್ಮ ವಶಕ್ಕೆ
ಪಡೆದುಕೊಂಡರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್‌ಎಲ್‌ವಿ ಅಯ್ಯಂಗಾರ್‌ ಬೇಕರಿಯಲ್ಲಿ ಅವ ಧಿ ಮೀರಿದ ತಂಪುಪಾನೀಯ ಮಾರಾಟ ಮಾಡುತ್ತಿದ್ದ ಕಾರಣ ಅಪರ ಜಿಲ್ಲಾ ಧಿಕಾರಿಗಳ ನ್ಯಾಯಾಲಯದಲ್ಲಿ ಶೀಘ್ರದಲ್ಲಿಯೇ ಮೊಕದ್ದಮೆ ದಾಖಲಿಸಲಾಗುವುದು. ಸಾರ್ವಜನಿಕರು ತಾವು ಕುಡಿಯುವ ತಂಪು ಪಾನೀಯಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದರು.

ಅದೇ ರೀತಿ ಪಟ್ಟಣ ಪಂಚಾಯತ್‌ ಮುಂಭಾಗದ ರಸ್ತೆಯಲ್ಲಿರುವ ಜಿ.ಬಿ. ಅಯ್ಯಂಗಾರ ಬೇಕರಿಗೂ ಭೇಟಿ ನೀಡಿ ಸcತ್ಛತೆ ಕಾಪಾಡಿಕೊಂಡು ಗ್ರಾಹಕರಿಗೆ ಮಾರಾಟ
ಮಾಡಬೇಕು. ಇಲ್ಲದಿದ್ದರೆ ದಂಡ ವಿ ಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಡಾ| ಪ್ರದೀಪ್‌, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಗದೀಶ್‌ ಕೋಡಿಹಳ್ಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next