Advertisement

ಧೂಳುಮುಕ್ತ ಗ್ರಾಮಗಳ ನಿರ್ಮಾಣ ಗುರಿ: ಸಿದ್ದೇಶ್ವರ

12:26 PM Feb 24, 2020 | Naveen |

ಹೊನ್ನಾಳಿ: ಗ್ರಾಮಾಂತರ ಪ್ರದೇಶಗಳಲ್ಲಿ ಸಿಮೆಂಟ್‌ ಕಾಂಕ್ರೀಟ್‌ ರಸ್ತೆ ಕಾಮಗಾರಿಗಳನ್ನು ಭರದಿಂದ ಹಮ್ಮಿಕೊಂಡು ಧೂಳುಮುಕ್ತ ಗ್ರಾಮಗಳನ್ನಾಗಿ ಮಾಡಲಾಗುವುದು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

Advertisement

ಭಾನುವಾರ ತಾಲೂಕಿನ ಉಜ್ಜನೀಪುರ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿ ಉದ್ಘಾಟನೆ ಹಾಗೂ ಗ್ರಾಮಕ್ಕೆ ಕುಡಿಯುವ ನೀರು ಪೈಪ್‌ ಲೈನ್‌ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಕಾಮಗಾರಿ ಕಳಪೆಯಾಗದಂತೆ ಗುತ್ತಿಗೆದಾರರು ನೋಡಿಕೊಳ್ಳಬೇಕು. ಇಂಜಿನಿಯರ್‌ಗಳು ಮೇಲುಸ್ತುವಾರಿ ವಹಿಸಿಕೊಂಡು ಕಳಪೆ ಕಾಮಗಾರಿ ಕಂಡು ಬಂದರೆ ತಕ್ಷಣ ಕಾಮಗಾರಿ ನಿಲ್ಲಿಸಿ ಮಾಹಿತಿಯನ್ನು ನಮಗೆ ಕೊಡಬೇಕು ಎಂದು ತಾಕೀತು ಮಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಬರುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಗ್ರಾಮಗಳು ಹೆಚ್ಚಿನ ಸೌಲತ್ತುಗಳನ್ನು ಪಡೆದುಕೊಂಡು ಎಲ್ಲಾ ವಿಷಯದಲ್ಲಿ ಪ್ರಗತಿ ಸಾಧಿಸಬೇಕು ಎಂದು ಹೇಳಿದರು. ಜಿಲ್ಲಾ ಕೇಂದ್ರದಲ್ಲಿದ್ದಾಗ ಎಲ್ಲಾ ಗ್ರಾಮಗಳಿಗೆ ಸಮಯ ನಿಗದಿ ಮಾಡಿ, ಭೇಟಿ ನೀಡಿ, ಜನರ ಸಂಕಷ್ಟಗಳನ್ನು ಕೇಳಿ ತಿಳಿದು ಬಗೆಹರಿಸಲು ಸತತ ಪ್ರಯತ್ನ ಮಾಡುತ್ತಿದ್ದೇನೆ. ನನ್ನನ್ನು ಸತತ ನಾಲ್ಕು ಬಾರಿ ಹಾಗೂ ನನ್ನ ತಂದೆಯವರನ್ನು ಎರಡು ಬಾರಿ ಗೆಲ್ಲಿಸಿ ಲೋಕಸಭೆಗೆ ಕಳಿಸಿರುವ ನಿಮ್ಮ ಋಣ ನನ್ನ ಮೇಲೆ ಇದೆ ಎಂದು ಹೇಳಿದರು.

ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಸಿಸಿ ರಸ್ತೆ ನಿರ್ಮಾಣ, ಗ್ರಾಮಗಳ ಸಂಪರ್ಕ ರಸ್ತೆ ದುರಸ್ತಿ ಹಾಗೂ ಡಾಂಬರ್‌ ರಸ್ತೆಗಳ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

Advertisement

ಉಜ್ಜನೀಪುರ ಗ್ರಾಮದಲ್ಲಿ 24 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿ ಉದ್ಘಾಟನೆ ಹಾಗೂ ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಬೋರ್‌ ವೆಲ್‌ ಕೊರೆಯಿಸಿ ಪೈಪ್‌ಲೈನ್‌ ಹಾಕಿಸಲು ಶಂಕುಸ್ಥಾಪನೆ ಮಾಡಲಾಗಿದೆ. ಈ ಕಾರ್ಯ ಶೀಘ್ರ ಮುಗಿಯಲಿದೆ ಎಂದು ಹೇಳಿದರು.

ಸದಾಶಿವಪುರ ಗ್ರಾಮದಲ್ಲಿ 30 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಪೂರ್ಣಗೊಳಿಸಿದ್ದು, ರೂ.25ಲಕ್ಷ ವೆಚ್ಚದ ಮೆಟ್ಲಿಂಗ್‌ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಹೇಳಿದರು. ಹಿರೇಬಾಸೂರು ಗ್ರಾಮದಲ್ಲಿ 20ಲಕ್ಷ ರೂ. ವೆಚ್ಚದ ಸಿಸಿ ರಸ್ತೆಗೆ ಹಾಗೂ 14 ಲಕ್ಷದಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಶಂಕುಸ್ಥಾಪನೆ ಮಾಡಲಾಗಿದೆ ಎಂದು ಹೇಳಿದರು.

ಜಿ.ಪಂ ಉಪಾಧ್ಯಕ್ಷ ಸುರೇಂದ್ರನಾಯ್ಕ, ಜಿ.ಪಂ ಸದಸ್ಯ ವೀರಶೇಖರಪ್ಪ, ತಾ.ಪಂ ಸದಸ್ಯೆ ರೇಖಾ ಉಮೇಶನಾಯ್ಕ, ಬಿಜೆಪಿ ತಾಲೂಕು ಅಧ್ಯಕ್ಷ ಕೆ.ಜೆ.ಸುರೇಶ್‌, ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಮಾರುತಿನಾಯ್ಕ, ಮುಖಂಡರಾದ ಡಿ.ಜಿ.ರಾಜಪ್ಪ, ಜುಂಜಾನಾಯ್ಕ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next