Advertisement
ಕರ್ನಾಟಕ ಪತ್ರಕರ್ತರ ಸಂಘದ ನ್ಯಾಮತಿ-ಹೊನ್ನಾಳಿ ತಾಲೂಕು ಘಟಕದ ವತಿಯಿಂದ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಗ್ರಾಮದ ಎಡಿವಿಎಸ್ ಕಾಲೇಜು ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರ ಮುಖ್ಯ ಉದ್ದೇಶ ಸುದ್ದಿ ಕೊಡುವುದು. ಸುದ್ದಿಯನ್ನು ಶುದ್ಧ ಹಸ್ತದಿಂದ ಕೊಟ್ಟರೆ ಸಾಮಾನ್ಯ ಜನರ ಮೆಚ್ಚುಗೆ ಗಳಿಸಲು ಸಾಧ್ಯ. ಸುದ್ದಿಗಾಗಿ ಕಾಟಾಚಾರದ ಸುದ್ದಿ ಮಾಡಬಾರದು ಎಂದು ಹೇಳಿದರು.
Related Articles
Advertisement
ಪತ್ರಕರ್ತರು ಸದಾ ಎಚ್ಚರಿಕೆಯಿಂದ ಇರಬೇಕು. ಎಲ್ಲರ ಕಣ್ಣುಗಳ ಪತ್ರಕರ್ತರ ಮೇಲೆ ಇರುವುದು ಸಹಜ. ಆದ್ದರಿಂದ ದೂರು ದುಮ್ಮಾನಗಳಿಂದ ಪತ್ರಕರ್ತರು ದೂರ ಇರಬೇಕು ಎಂದು ಹೇಳಿದರು.
ಎಡಿವಿಎಸ್ ಸಂಸ್ಥೆ ಕಾರ್ಯದರ್ಶಿ ಡಾ.ಎಸ್.ಎಚ್.ಕೃಷ್ಣಮೂರ್ತಿ ಮಾತನಾಡಿ, ಪತ್ರಕರ್ತರಿಗೆ ಸಂಸ್ಕಾರ ಇದ್ದರೆ ಮಾತ್ರ ಪತ್ರಕರ್ತ ಮತ್ತು ಪತ್ರಿಕೋದ್ಯಮಿ ಬೆಳೆಯಲು ಸಾಧ್ಯ. ಪತ್ರಕರ್ತರ ವೃತ್ತಿ ಜಾತಿಗೆ ಸೀಮಿತವಾಗಿರದೆ ಜಾತ್ಯತೀತವಾಗಿರಬೇಕು ಎಂದು ಹೇಳಿದರು.
ಪತ್ರಕರ್ತ ಶಕೀಲ್ಅಹಮ್ಮದ್, ಜ್ಞಾನೋದಯ ಸಂಸ್ಥೆ ಕಾರ್ಯದರ್ಶಿ ಹರೀಶ್ ಆರ್.ಸಾಗೋನಿ ಮಾತನಾಡಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎಸ್.ಶಾಸ್ತ್ರಿ ಹೊಳೆಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾಂಶುಪಾಲ ಎಚ್.ಬಿ.ಗಣಪತಿ ಸ್ವಾಗತಿಸಿದರು. ಉಪನ್ಯಾಸಕ ಹನುಮಂತಪ್ಪ ನಿರೂಪಿಸಿದರು. ಪತ್ರಕರ್ತ ಗಿರೀಶ್ ನಾಡಿಗ್ ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ಎ.ಕೆ.ಹಾಲೇಶ್ ವಂದಿಸಿದರು.
ಪತ್ರಕರ್ತ ಸಂಘದ ಪದಾಧಿಕಾರಿಗಳಾದ ರಮೇಶ್ ಮಡಿವಾಳ, ಡಿ.ಎಂ.ಹಾಲಾರಾಧ್ಯ, ಎಸ್.ಎನ್.ನಾಗರಾಜ್, ಜಿ.ಎಚ್.ರಾಜು, ಶಿವಾನಂದಪ್ಪ, ಸಿ.ಬಸವರಾಜ್, ಹಾಲೇಶ್ವರಪ್ಪ, ರಾಘವೇಂದ್ರ ಮೂಳೇಕರ, ಜಿ.ಎಚ್. ಪಟೇಲ್ ಇದ್ದರು. ಇದೇ ಸಂದರ್ಭದಲ್ಲಿ ಎಡಿವಿಎಸ್ ಕಾರ್ಯದರ್ಶಿ ಡಾ.ಎಸ್.ಎಚ್.ಕೃಷ್ಣಮೂರ್ತಿ ಕಳೆದ ಸಾಲಿನಲ್ಲಿ ಗೌರವ ಡಾಕ್ಟರೇಟ್ ಪಡೆದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು.