ಹೊನ್ನಾಳಿ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯಲ್ಲಿನಕೆಲವಾರು ಅಂಶಗಳು ಪರಿಶಿಷ್ಟ ಜಾತಿಗಳಮಧ್ಯೆ ಅನೇಕ ಗೊಂದಲ, ಗುಮಾನಿ,ಆತಂಕ ಸೃಷ್ಟಿಸಿದ್ದು, ಈ ವರದಿಯನ್ನುರಾಜ್ಯ ಸರ್ಕಾರ ಏಕಪಕ್ಷೀಯವಾಗಿ ಕೇಂದ್ರಸರ್ಕಾರಕ್ಕೆ ಶಿಪಾರಸ್ಸು ಮಾಡಬಾರದು ಎಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ರಾಜ್ಯಾಧ್ಯಕ್ಷ ರಾಘವೇಂದ್ರ ಹೇಳಿದರು.
ಆಯೋಗದ ವರದಿಯನ್ನು ವಿರೋಧಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾಒಕ್ಕೂಟ ಹಾಗೂ ತಾಲೂಕು ಬಂಜಾರಾಸಂಘದ ವತಿಯಿಂದ ಬುಧವಾರಹಮ್ಮಿಕೊಂಡಿದ್ದ ಪ್ರತಿಭಟನೆ ಸಭೆಯಲ್ಲಿಅವರು ಮಾತನಾಡಿದರು.
ಕರ್ನಾಟಕ ಮೀಸಲಾತಿ ಸಂರಕ್ಷಣಾಒಕ್ಕೂಟದ ವಕ್ತಾರ ರುದ್ರಪುನೀತ್‌ಮಾತನಾಡಿ, ಭಾರತ ಸಂವಿಧಾನದಮೂಲ ಆಶಯವಾಗಿರುವ ಸಾಮಾಜಿಕನ್ಯಾಯ ಮತ್ತು ಮೀಸಲಾತಿಯ ಸಂರಕ್ಷಣೆಗಾಗಿ ಮೀಸಲಾತಿ ಸಂರಕ್ಷಣಾಒಕ್ಕೂಟ ಪರಿಶಿಷ್ಟ ಜಾತಿ, ಪಂಗಡಹಾಗೂ ಹಿಂದುಳಿದ ವರ್ಗಗಳಸಮಸ್ತ ಜನಸಮುದಾಯ ಐಕ್ಯತೆಗಾಗಿನಿರಂತರವಾಗಿ ಹೋರಾಟ ನಡೆಸಿಕೊಂಡುಬರುತ್ತಿದೆ ಎಂದು ಹೇಳಿದರು.
ಒಕ್ಕೂಟದ ರಾಜ್ಯ ಪ್ರಧಾನಕಾರ್ಯದರ್ಶಿ ಅನಂತನಾಯ್ಕ,ಬಂಜಾರಾ ಸಮುದಾಯ ಮುಖಂಡಡಾ| ಈಶ್ವರನಾಯ್ಕ, ಬಂಜಾರಾಮುಖಂಡರಾದ ಜಯದೇವನಾಯ್ಕಹಾಗೂ ತಾಲೂಕು ಬಂಜಾರಾಸಮುದಾಯ ಅಧ್ಯಕ್ಷ ಜುಂಜಾನಾಯ್ಕಸದಾಶಿವ ಆಯೋಗ ಕುರಿತು ಮಾತನಾಡಿದರು.
ಬಂಜಾರಾ ಅಭಿವೃದ್ಧಿನಿಗಮದ ಸದಸ್ಯ ಮಾರುತಿ ನಾಯ್ಕ, ಜಿಪಂಮಾಜಿ ಉಪಾಧ್ಯಕ್ಷ ಸುರೇಂದ್ರನಾಯ್ಕ,ಕುಬೇರ್‌ನಾಯ್ಕ, ಭೂಪಾಲ್‌ನಾಯ್ಕಇತರರು ಇದ್ದರು.