ಹೊನ್ನಾಳಿ: ತಾಲೂಕಿನ ಬಲಮುರಿ ಗ್ರಾಮದಲ್ಲಿಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿಯುವಕರ ಆಪೇಕ್ಷೆ ಮೇರೆಗೆ ಪಾಲ್ಗೊಂಡಿದ್ದೆ. ಅಲ್ಲಿಕೋವಿಡ್ ನಿಯಮ ಉಲ್ಲಂಘನೆಯಾಗಿರುವುದಕ್ಕೆನಾನು ರಾಜ್ಯದ ಜನರ, ಮುಖ್ಯಮಂತ್ರಿಗಳ ಕ್ಷಮೆಯಾಚಿಸುತ್ತೇನೆ ಎಂದು ಸಿಎಂ ರಾಜಕೀಯಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಬಲಮುರಿ ಗ್ರಾಮದಲ್ಲಿಸೋಮವಾರ ಹೋರಿ ಬೆದರಿಸುವ ಸ್ಪರ್ಧೆಗೆಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಯುವಕರ ಅಪೇಕ್ಷೆಮೇರೆಗೆ ಒಲ್ಲದ ಮನಸ್ಸಿನಿಂದಲೇ ಹೋಗಿಸ್ಪರ್ಧೆಗೆ ಚಾಲನೆ ನೀಡಬೇಕಾಯಿತು. ಕಳೆದ 15ದಿನಗಳ ಹಿಂದೆಯೇ ಬಲಮುರಿ ಗ್ರಾಮದಲ್ಲಿಹೋರಿ ಬೆದರಿಸುವ ಸ್ಪರ್ಧೆಯನ್ನು ಆಯೋಜನೆಮಾಡಲಾಗಿತ್ತು.
ಆದರೆ ಕೋವಿಡ್‌ನಿಂದಾಗಿಕಾರ್ಯಕ್ರಮವನ್ನು ರದ್ದು ಮಾಡುವಂತೆಯುವಕರಲ್ಲಿ ನಾನು ಮನವಿ ಮಾಡಿದ್ದೆ.ಯುವಕರು ನನ್ನ ಮೇಲೆ ಒತ್ತಡ ಹೇರಿದ್ದರಿಂದಅವರ ಒತ್ತಡಕ್ಕೆ ಮಣಿಯಬೇಕಾಯಿತು ಎಂದುಸ್ಪಷ್ಟಪಡಿಸಿದರು.ಕೋವಿಡ್ ಮೊದಲನೇ ಹಾಗೂ ಎರಡನೇಅಲೆಯಲ್ಲಿ ಮಾಧ್ಯಮದವರು, ಸಾರ್ವಜನಿಕರು,ಬಿಜೆಪಿ ಮೆಚ್ಚುವಂತೆ ನಾನು ಕೆಲಸ ಮಾಡಿದ್ದೆ.ಆದರೆ ಇದೀಗ ಬಲಮುರಿ ಗ್ರಾಮದಲ್ಲಿ ನಡೆದಹೋರಿ ಹಬ್ಬದಲ್ಲಿ ಪಾಲ್ಗೊಂಡಿದ್ದು ನನಗೆಮುಜುಗರ ಉಂಟು ಮಾಡಿದೆ ಎಂದು ತಪ್ಪನ್ನುಒಪ್ಪಿಕೊಂಡಿದ್ದೇನೆ.
ನಾನು ಕೂಡ ಸರ್ಕಾರದಭಾಗವಾಗಿದ್ದು, ಕೋವಿಡ್ ನಿಯಮಗಳನ್ನುಪಾಲಿಸಿ ಎಂದು ಹೇಳುವ ಸ್ಥಾನದಲ್ಲಿದ್ದೇನೆ. ಇದೀಗಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದುನನ್ನಿಂದ ತಪ್ಪಾಗಿದೆ. ಕಾಂಗ್ರೆಸ್ ಪಾದಯಾತ್ರೆ ಬಗ್ಗೆನಾನೇ ಟೀಕೆ ಮಾಡಿ ಇದೀಗ ಕೋವಿಡ್ ನಿಯಮಉಲ್ಲಂಘನೆ ಮಾಡಿದ್ದೇನೆ. ಹಾಗಾಗಿ ನನಗೆ ನೈತಿಕತೆಇಲ್ಲದಂತಾಗಿದೆ.
ಕೋವಿಡ್ ಮೊದಲನೇ ಹಾಗೂಎರಡನೇ ಅಲೆಯಲ್ಲಿ ನಾನು ಮಾಡಿದ ಕೆಲಸವನ್ನುಎಲ್ಲರೂ ಕೊಂಡಾಡಿದ್ದರು. ಆದರೆ ಇದೀಗ ಹೋರಿಬೆದರಿಸುವ ಹಬ್ಬದಲ್ಲಿ ಭಾಗವಹಿಸಿರುವುದುಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ.ಹೊನ್ನಾಳಿ ತಾಲೂಕಿನ ವಿವಿಧ ಕಡೆ ಕುರಿ ಕಾಳಗವನ್ನುಏರ್ಪಡಿಸಲಾಗಿದೆ. ಕಮಿಟಿಯವರೊಂದಿಗೆಮಾತನಾಡಿ ಕುರಿ ಕಾಳಗವನ್ನು ಮುಂದೂಡುವಂತೆಮನವಿ ಮಾಡಿದ್ದೇನೆ ಎಂದರು