Advertisement

ಹೊನ್ನಾಳಿ ತಾಲೂಕಲ್ಲಿ ಭಾರೀ ಮಳೆ

06:16 PM Nov 16, 2021 | Team Udayavani |

ಹೊನ್ನಾಳಿ: ಪಟ್ಟಣ ಹಾಗೂ ತಾಲೂಕಿನಾದ್ಯಂತಭಾನುವಾರ ರಾತ್ರಿ ಮತ್ತು ಸೋಮವಾರ ಬೆಳಗಿನ ಜಾವಗುಡುಗು ಸಹಿತ ಭಾರೀ ಮಳೆಯಾಗಿದೆ.ಭಾನುವಾರ ರಾತ್ರಿ ಜಟಿ ಮಳೆ ಪ್ರಾರಂಭವಾಗಿ ತಡರಾತ್ರಿವರೆಗೆ ಸುರಿಯಿತು.
ಮತ್ತೆ ಮಧ್ಯರಾತ್ರಿ 2ರಿಂದಪ್ರಾರಂಭವಾದ ಮಳೆ ಬೆಳಗಿನ ಜಾವದವರೆಗೂ ಸುರಿಯುತ್ತಲೇ ಇತ್ತು. ನಂತರ ಗುಡುಗು-ಸಿಡಿಲುಪ್ರಾರಂಭವಾಗಿ ಸುಮಾರು 30 ನಿಮಿಷಗಳ ಕಾಲಗುಡುಗು ಸಿಡಿಲು ಸಹಿತ ರಭಸದಿಂದ ಮಳೆ ಸುರಿಯಿತು.ಸಿಡಿಲಿನ ಅಬ್ಬರಕ್ಕೆ ಪಟ್ಟಣದ ಅನೇಕ ಮನೆಗಳಲ್ಲಿ ಶಾರ್ಟ್‌ಸರ್ಕ್ನೂಟ್‌ ಉಂಟಾಗಿ ಬಲ್ಬಗಳು, ಟಿವಿ, ರೆಫ್ರಿಜರೇಟರ್‌ಗಳಿಗೆಹಾನಿಯಾಗಿದೆ.

Advertisement

ತಾಲೂಕಿನಕುಂದೂರುಗ್ರಾಮದಲ್ಲಿ2, ಲಿಂಗಾಪುರ ಮತ್ತು ವಿಜಯಪುರ ಗ್ರಾಮಗಳಲ್ಲಿ ತಲಾಒಂದು ಸೇರಿದಂತೆ ಒಟ್ಟು 4 ಮನೆಗಳಿಗೆ ಹಾನಿಯಾಗಿದೆ.ಕುಂದೂರು ಗ್ರಾಮದ ಅಬ್ದುಲ್‌ ಸಾಬ್‌ ಅವರ ಪಕ್ಕಾಮನೆ ಅಂದಾಜು ಹಾನಿ 3.5 ಲಕ್ಷ ರೂ., ಸುವರ್ಣಮ್ಮಎಂಬುವರ ಪಕ್ಕಾ ಮನೆ ಅಂದಾಜು ಹಾನಿ 50 ಸಾವಿರರೂ., ಲಿಂಗಾಪುರ ಗ್ರಾಮದ ವೀರಪ್ಪ ಎಂಬುವರಕಚ್ಚಾ ಮನೆ ಅಂದಾಜು ಹಾನಿ 30 ಸಾವಿರ ರೂ. ಮತ್ತುವಿಜಯಪುರ ಗ್ರಾಮದ ರೂಪಾ ಎಂಬುವರ ಪಕ್ಕಾ ಮನೆಅಂದಾಜು ಹಾನಿ 1.5 ಲಕ್ಷ ರೂ. ಹಾನಿಯಾಗಿದ್ದು ಒಟ್ಟು5.8 ಲಕ್ಷ ಹಾನಿಯಾಗಿದೆ ಎಂದು ತಾಲೂಕು ಆಡಳಿತದಮೂಲಗಳು ತಿಳಿಸಿವೆ.

ಭಾರೀ ಮಳೆಯಿಂದ ತಾಲೂಕಿನಾದ್ಯಂತ ಭತ್ತ, ಬಾಳೆಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿಯಾಗಿದೆ. ಬೆÙ ೆಹಾನಿಬಗ್ಗೆ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಗಳುಸಮೀಕ್ಷೆ ಮಾಡಿದ ನಂತರ ಅಂದಾಜಿಸಲಾಗುವುದುಎಂದು ತಾಲೂಕು ಆಡಳಿತ ತಿಳಿಸಿದೆ. ಮಲೆನಾಡುಮತ್ತು ಅಚ್ಚುಕಟ್ಟು ಪ್ರದೇಶಗಳಲ್ಲಿ ವ್ಯಾಪಕವಾಗಿಮಳೆಯಾಗಿದ್ದರಿಂದ ಪಟ್ಟಣಕ್ಕೆ ಸಮೀಪ ಹರಿಯುತ್ತಿರುವತುಂಗಭದ್ರಾ ನದಿಗೆ ಹೊಸ ನೀರು ಬಂದಿದೆ. ಇದುವರೆಗೆತಿಳಿಯಾದ ನೀರು ನದಿಯಲ್ಲಿ ಹರಿಯುತ್ತಿತ್ತು. ಈಗ ಮಳೆಸುರಿದ ಕಾರಣ ಮಣ್ಣು ಮಿಶ್ರಿತ ನೀರು ಹರಿಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next