Advertisement

ತಾಯಿ-ಶಿಶು ಮರಣ ಪ್ರಮಾಣ ಇಳಿಮುಖ

04:32 PM Mar 10, 2022 | Team Udayavani |

ಹೊನ್ನಾಳಿ: ಪ್ರಸ್ತುತ ದಿನಗಳಲ್ಲಿ ಬಹುಪಾಲು ಹೆರಿಗೆಗಳು ಆಸ್ಪತ್ರೆಮತ್ತು ಆರೋಗ್ಯ ಕೇಂದ್ರಗಳಲ್ಲಿಯೇ ನಡೆಯುತ್ತಿರುವುದರಿಂದಇಂದು ತಾಯಿ ಮತ್ತು ನವಜಾತ ಶಿಶುಗಳ ಮರಣ ಪ್ರಮಾಣಸಾಕಷ್ಟು ಕಡಿಮೆಯಾಗಿದೆ ಎಂದು ಪ್ರಸೂತಿ ಹಾಗೂ ಸ್ತ್ರೀರೋಗತಜ್ಞ ಡಾ| ಹನುಮಂತಪ್ಪ ಹೇಳಿದರು.

Advertisement

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್‌ ನಿಯಂತ್ರಣಘಟಕ ದಾವಣಗೆರೆ ಹಾಗೂ ತಾಲೂಕು ಆಸ್ಪತ್ರೆ ಸಹಯೋಗದಲ್ಲಿಹಮ್ಮಿಕೊಂಡಿದ್ದ ತಾಯಿ ಮತ್ತು ಮಗುವಿನ ಆರೋಗ್ಯಸಂರಕ್ಷಣೆ, ತಾಯಿಯಿಂದ ಮಗುವಿಗೆ ಎಚ್‌ಐವಿ ಸೋಂಕುಹರಡುವಿಕೆ ನಿರ್ಮೂಲನಾ ಆಂದೋಲನ ಕಾರ್ಯಕ್ರಮಹಾಗೂ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮದಲ್ಲಿ ಅವರುಮಾತನಾಡಿದರು.ಗರ್ಭಿಣಿಯರು ಆರೋಗ್ಯ ಇಲಾಖೆಯಲ್ಲಿ ಕಡ್ಡಾಯವಾಗಿತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಪ್ರತಿ ತಿಂಗಳುನಿಗದಿಪಡಿಸಿದ ದಿನಾಂಕಗಳಂದು ನಿಯಮಿತವಾಗಿ ಆರೋಗ್ಯತಪಾಸಣೆ ಮಾಡಿಸಿಕೊಳ್ಳಬೇಕು.

ಗರ್ಭಿಣಿ ಎಚ್‌ಐವಿಸೋಂಕಿತಳಾಗಿದ್ದಲ್ಲಿ ಹುಟ್ಟುವ ಮಗುವಿಗೆ ಇದು ಬಾರದಂತೆಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ವೈದ್ಯರು ತೆಗೆದುಕೊಳ್ಳಲುಸಹಕಾರಿಯಾಗುತ್ತದೆ. ಗರ್ಭಿಣಿಯರಿಗೆ ಮೂರು ಹಂತಗಳಲ್ಲಿಆರೋಗ್ಯ ತಪಾಸಣೆ ಮಾಡುವ ಮೂಲಕ ತಾಯಿ ಮತ್ತುಮಗುವಿನ ಮರಣ ಪ್ರಮಾಣವನ್ನು ಕಡಿಮೆಗೊಳಿಸುವುದು ಹಾಗೂಮಗುವಿಗೆ ಎಚ್‌ಐವಿ ಸೋಂಕು ಬಾರದಂತೆ ತಡೆಗಟ್ಟುವುದು ಈಕಾರ್ಯಕ್ರಮಗಳ ಪ್ರಮುಖ ಉದ್ದೇಶ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ವೈದ್ಯ ಡಾ| ರಾಜ್‌ಕುಮಾರ್‌ಮಾತನಾಡಿ, ರಕ್ತಹಿನತೆ, ತೂಕ ಕಡಿಮೆ ಇರುವ ಶಿಶು ಜನನಮುಂತಾದ ಆರೋಗ್ಯ ಸಮಸ್ಯೆಗಳನ್ನು ಗರ್ಭಿಣಿಯರಲ್ಲಿ ಮತ್ತುನವಜಾತ ಶಿಶುಗಳಲ್ಲಿ ಆರಂಭದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆನೀಡಬೇಕು. ಆಗ ಬಾಣಂತಿಯರು ಹಾಗೂ ಶಿಶು ಮರಣಪ್ರಮಾಣ ಕಡಿಮೆಯಾಗುತ್ತದೆ. ಇತ್ತೀಚಿಗೆ ಸರ್ಕಾರ ಹೆಣ್ಣುಮಕ್ಕಳಮದುವೆ ವಯಸ್ಸನ್ನು 18ರಿಂದ 21 ವರ್ಷ ಮಾಡಿದೆ.

ಇದರಿಂದದೇಹದ ಬೆಳವಣಿಗೆಯಾಗಿ ಆರೋಗ್ಯ ವೃದ್ಧಿಸುತ್ತದೆ. ಒಂದುಮಗುವಿನಿಂದಇನ್ನೊಂದು ಮಗುವಿನ ಅಂತರ ಕನಿಷ್ಠ 2 ವರ್ಷಇರಬೇಕು. ಇದರಿಂದ ಮಹಿಳೆಯರ ಆರೋಗ್ಯದ ಮೇಲೆದುಷ್ಪರಿಣಾಮಗಳಾಗುವುದಿಲ್ಲ. ಗರ್ಭಿಣಿಯರಿಗೆ ಸರ್ಕಾರದಿಂದವಿವಿಧ ಹಂತಗಳಲ್ಲಿ 6 ಸಾವಿರ ರೂ. ಧನಸಹಾಯದ ಸೌಲಭ್ಯವಿದೆಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next