Advertisement

ವಿಜಯಕುಮಾರ್‌ ನ್ಯಾಮತಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ

02:31 PM Feb 18, 2022 | Team Udayavani |

ಹೊನ್ನಾಳಿ: ನ್ಯಾಮತಿ ತಾಲೂಕು ಸರ್ಕಾರಿನೌಕರರ ಸಂಘದ ಅಧ್ಯಕ್ಷರಾಗಿ ಪಂಚಾಯತ್‌ರಾಜ್‌ ಇಲಾಖೆಯ ವಿಜಯಕುಮಾರ್‌ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ನ್ಯಾಮತಿ ಪಟ್ಟಣದ ಸರ್ಕಾರಿ ನೌಕರರಸಂಘದ ಶಾಖೆಯಲ್ಲಿ ಗುರುವಾರ ನಡೆದಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಎಚ್‌.ಪಿ.ಚಂದ್ರಶೇಖರ್‌ ಅವಿರೋಧ ಆಯ್ಕೆಯನ್ನುಘೋಷಿಸಿದರು.

Advertisement

ಸಂಘದ ಕಾರ್ಯದರ್ಶಿಯಾಗಿಕೆಪಿಎಸ್‌ ಪ್ರೌಢಶಾಲಾ ವಿಭಾಗದ ಸಿದ್ದೇಶಪ್ಪ,ಖಜಾಂಚಿಯಾಗಿ ಪ್ರಾಥಮಿಕ ಶಾಲಾ ಶಿಕ್ಷಕಎಚ್‌.ಕೆ.ಪರಮೇಶ್ವರಪ್ಪ, ರಾಜ್ಯ ಪರಿಷತ್‌ಸದಸ್ಯರಾಗಿ ಕಂದಾಯ ಇಲಾಖೆಯ ಸುಧೀರ್‌ಕೂಡ ಅವಿರೋಧವಾಗಿ ಆಯ್ಕೆಯಾದರು.

ಸಂಘದ ನೂತನ ಪದಾ ಧಿಕಾರಿಗಳನ್ನುಕೆಪಿಎಸ್‌ ಕಾಲೇಜಿನ ಪ್ರಾಂಶುಪಾಲ ವಿ.ಪಿ.ಪೂರ್ಣಾನಂದ, ಸರ್ಕಾರಿ ಪದವಿಪೂರ್ವಕಾಲೇಜುಗಳ ಉಪನ್ಯಾಸಕರ ಸಂಘದತಾಲೂಕು ಅಧ್ಯಕ್ಷ ಎಚ್‌.ಆರ್‌. ಗಂಗಾಧರ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷಸಿದ್ದಪ್ಪ, ನಿವೃತ್ತ ಉಪನ್ಯಾಸಕ ಪಿ. ವಿರೂಪಾಕ್ಷಪ್ಪಮತ್ತಿತರರು ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next