Advertisement
ಗ್ರಾಮದಲ್ಲಿನ ಎರಡು ಕೊಳವೆ ಬಾವಿಗಳ ನೀರು ಬತ್ತಿ ಹೋದ ಕಾರಣ ಗ್ರಾಪಂ ವತಿಯಿಂದ ಇತರೆಡೆಯ ಕೊಳವೆ ಬಾವಿಗಳಿಂದ ಟ್ಯಾಂಕರ್ ಮೂಲಕ ನೀರು ತಂದು ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕರ್ ಮೂಲಕ ಸರಬರಾಜು ಮಾಡುವ ನೀರು ಸಾಕಾಗುವುದಿಲ್ಲ, ಸರಿಯಾದ ಸಮಯಕ್ಕೆ ನೀರು ಸರಬರಾಜು ಮಾಡುತ್ತಿಲ್ಲ. ಹಾಗೂ ಅಶುದ್ಧ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಒಂದು ದಿನಕ್ಕೆ ಇಡೀ ಗ್ರಾಮಕ್ಕೆ ಕೇವಲ 3 ಟ್ಯಾಂಕರ್ ನೀರು ಕೊಡುತ್ತಿದ್ದಾರೆ. ಒಂದು ಮನೆಗೆ ಒಂದು ಡ್ರಮ್ ನೀರು ಮಾತ್ರ ದೊರೆಯುತ್ತದೆ. ಅದರಲ್ಲೇ ಅಡುಗೆ, ಪಾತ್ರೆ ಹಾಗೂ ಬಟ್ಟೆ ತೊಳೆಯಲು ಸಾಧ್ಯವೇ ಎಂದು ಬಸಮ್ಮ, ಶಾಂತಮ್ಮ, ಆಂಜನೇಯ, ಲೋಕೇಶ್ ಪ್ರಶ್ನಿಸಿದರು.
ಗ್ರಾಮದವರೆಲ್ಲಾ ಕೂಲಿ ಮಾಡಲು ಹೋದಾಗ ಮಧ್ಯಾಹ್ನ ನೀರಿನ ಟ್ಯಾಂಕರ್ ಬರುತ್ತದೆ. ಆ ಸಮಯದಲ್ಲಿ ನೀರನ್ನು ಹೇಗೆ ಸಂಗ್ರಹಿಸಿಟ್ಟುಕೊಳ್ಳಬೇಕು. ಟ್ಯಾಂಕರ್ ನೀರು ಕುಡಿದು ಹಲವು ಜನರು ಅನಾರೋಗ್ಯ ಪೀಡಿತರಾಗಿದ್ದಾರೆ ಎಂದು ರೇಣುಕಪ್ಪ ನೊಂದು ನುಡಿದರು.
ಸಂಜೆ 4.30ರ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ತಾ.ಪಂ ಇಒ ರಾಘವೇಂದ್ರ ಸಮಸ್ಯೆ ಆಲಿಸಿ, ಸದ್ಯಕ್ಕೆ ಬೇಡಿಕೆಗನುಗುಣವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಟ್ಯಾಂಕರ್ ನೀರು ಪೂರೈಸಲಾಗುವುದು. ಮುಂದಿನ ನಾಲ್ಕು ದಿನಗಳಲ್ಲಿ ಹೊಸದಾಗಿ ಕೊಳವೆ ಬಾವಿ ತೋಡಿಸಿ ನೀರು ಸರಬರಾಜು ಮಾಡಲಾಗುವುದು. ಗ್ರಾಮದ ಸುತ್ತಮುತ್ತ ಇರುವ ತೋಟ ಹಾಗೂ ಇತರ ಕೊಳವೆ ಬಾವಿಗಳ ಮಾಲೀಕರು ನೀರು ಕೊಟ್ಟರೆ ತಿಂಗಳಿಗೆ ರೂ.10 ಸಾವಿರ ಪಾವತಿಸಿ ಜನರಿಗೆ ನೀರು ಸರಬರಾಜು ಮಾಡಲಾಗುವುದು ಎಂದು ಹೇಳಿದರು. ನಂತರ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆದರು. ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಮ್ಮ, ಸದಸ್ಯ ಮಾದಪ್ಪ ಇದ್ದರು.