ಮೇಳ ಯಶಸ್ವಿಯಾಗಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಹಿರೇಕಲ್ಮಠದ ಸ್ಥಿರ ಪಟ್ಟಾಧ್ಯಕ್ಷರು ಚನ್ನಪ್ಪಸ್ವಾಮಿ ವಿದ್ಯಾಪೀಠದ ಅಧ್ಯಕ್ಷ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.
Advertisement
ರಾಜ್ಯಮಟ್ಟದ ಕೃಷಿ ಮೇಳ ಹಮ್ಮಿಕೊಂಡಿರುವ ಪ್ರಯುಕ್ತ ಹಿರೇಕಲ್ಮಠದಲ್ಲಿ ಹಮ್ಮಿಕೊಂಡಿದ್ದ ತಾಲೂಕು, ವಿವಿಧ ಜಿಲ್ಲೆಗಳ ಅಧಿಕಾರಿಗಳ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ರಾಜ್ಯಮಟ್ಟದ ಕೃಷಿ ಮೇಳ ಇದಾಗಿರುವುದರಿಂದ ರಾಜ್ಯ 30 ಜಿಲ್ಲೆಗಳ ಕೃಷಿ ಅಧಿ ಕಾರಿಗಳು ಸೇರಿದಂತೆ ಇತರ ಅಧಿಕಾರಿಗಳು ಸಲಹೆ ಸಹಕಾರ ನೀಡಿದರೆ ಕೃಷಿ ಮೇಳ ಯಶಸ್ವಿ ಕಾಣುತ್ತದೆ ಎಂದು ಹೇಳಿದರು.
ಸದುಪಯೋಗವನ್ನು ರಾಜ್ಯ ವಿವಿಧ ಜಿಲ್ಲೆಗಳ ಪ್ರದರ್ಶನಕಾರರು ಆಗಮಿಸಿ ಸದುಪಯೋಗ ಮಾಡಿಕೊಳ್ಳಬೇಕು. ಒಂದು ಮಳಿಗೆಗೆ ಕೇವಲ ರೂ.3 ಸಾವಿರ ಮೂರು ದಿನಕ್ಕೂ ನಿಗದಿ ಮಾಡಲಾಗಿದೆ. ಕೃಷಿಗೆ ಸಂಬಂಧಪಟ್ಟ ಉಪಕರಣಗಳಿಗೆ ಮಳಿಗೆಗಳಲ್ಲಿ ಪ್ರದರ್ಶನಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಇಲಾಖಾಧಿಕಾರಿಗಳು ಸ್ಟಾಲ್ ಗಳ ಸ್ಥಾಪನೆಗೆ ತಮ್ಮ ಜಿಲ್ಲೆಗೆ ಆಸಕ್ತ ರೈತರಿಗೆ ಹಾಗೂ ಇತರರಿಗೆ ತಿಳಿಸಬೇಕು ಎಂದು ಹೇಳಿದರು. ಕೃಷಿ ಮೇಳದ ಅಂಗವಾಗಿ ವಿವಿಧ ಸ ³ರ್ಧೆ, ಪ್ರಾತ್ಯಕ್ಷಿಕೆ, ಕೃಷಿ ಗೋಷ್ಠಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಎಲ್ಲಾ ಕಾರ್ಯಕ್ರಮಗಳ ಯಶಸ್ವಿಗೆ ಕಾರಣೀಕರ್ತರಗಾಬೇಕು ಎಂದು ಹೇಳಿದರು.
Related Articles
Advertisement