ಬೆಂಗಳೂರು: ಐಸ್‌ಕ್ರೀಂ ಕ್ಷೇತ್ರದಲ್ಲಿ ಪ್ರಖ್ಯಾತಿ ಪಡೆದ ಹಾಂಗ್ಯೋ ಐಸ್‌ಕ್ರೀಂ ಇದೀಗ, ಐಪಿಎಲ್ ಸೀಸನ್ 2024ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಜತೆ ಅಧಿಕೃತ ಐಸ್‌ಕ್ರೀಂ ಪಾಲುದಾರರಾಗಿ ಹೊಸ ಹೆಜ್ಜೆಯನ್ನು ಇಟ್ಟಿದೆ.
ಖಾಸಗಿ ಹೊಟೇಲ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ 21ನೇ ಸಂಸ್ಥಾಪಕರ ದಿನ ಕಾರ್ಯಕ್ರಮದಲ್ಲಿ ಸಂಸ್ಥೆಯ ರಿಯಲ್ ಸ್ಟ್ರಾಬೆರಿ, ಮಡಗಾಸ್ಕರ್ ವೆನಿಲ್ಲಾ, ಬಟರ್ ಸ್ಕಾಚ್ ರಾಯಲ್, ನಟ್ಟಿ ಕ್ಯಾರಮೆಲ್, ಅಲೊ³ನ್ಸೊ ಮ್ಯಾಂಗೋ, ಬ್ರೌನೀ ಫಡ್ಜ್ ಎಂಬ ನೂತನ ಗೊರ್ಮೆ (ಐಸ್‌ಕ್ರೀಂನ ಪ್ರೀಮಿಯಂ ಸರಣಿ)ಯನ್ನು ಎಫ್ಐಸಿಸಿಐ ಕರ್ನಾಟಕದ ಮುಖ್ಯಸ್ಥ ಕೆ. ಉಲ್ಲಾಸ್ ಕಾಮತ್ ಮಾರು ಕಟ್ಟೆಗೆ ಪರಿಚಯಿಸಿದರು. ಇದೇ ವೇಳೆ, ಹಾಂಗ್ಯೋ ಲೋಗೋ ಹೊಂದಿದ ಆರ್‌ಸಿಬಿ ಜೆರ್ಸಿಯನ್ನು ಅನಾವರಣಗೊಳಿಸಿದರು.
ಅನಂತರ ಮಾತನಾಡಿದ ಅವರು, ಕರ್ನಾಟಕ ಸೇರಿದಂತೆ ದಕ್ಷಿಣ ಭಾರ ತದ 7 ರಾಜ್ಯಗಳಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, ಗ್ರಾಹಕರ ಸ್ನೇಹಿ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಜತೆ ಪಾಲುದಾರಿಕೆ ಹೊಂದುತ್ತಿರುವುದು ಸಂಸ್ಥೆಯ ಸಾಧನೆಯಲ್ಲಿ ಮೈಲಿಗಲ್ಲಾ ಗಲಿದೆ. ಆರ್‌ಸಿಬಿಯ ಎಲ್ಲ ಆಟಗಾ ರರು ಸಂಸ್ಥೆಯ ಐಸ್‌ಕ್ರೀಂನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ಆರ್‌ಸಿಬಿ ತಂಡವು ಪ್ರಥಮ ಬಾರಿಗೆ ಐಸ್‌ಕ್ರೀಂ ಜತೆ ಅಧಿಕೃತ ಪಾಲುದಾರಿಕೆಯನ್ನು ಹೊಂದುತ್ತಿದೆ. 2022-23ರ ಹಣಕಾಸು ವರ್ಷದಲ್ಲಿ ಕರ್ನಾಟಕದಲ್ಲಿ 300 ಕೋಟಿ ರೂ. ವಹಿವಾಟು ನಡೆದಿದ್ದು, ಈ ವರ್ಷ ಆರ್‌ಸಿಬಿ ಪಾಲುದಾರಿಕೆಯಿಂದಾಗಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಹ್ಯಾಂಗ್ಯೋ ದಶಲಕ್ಷ ಗ್ರಾಹಕರನ್ನು ಹೊಂದಿದ್ದು, ದಿನಕ್ಕೆ 1.2 ಲಕ್ಷ ಲೀ.ನಷ್ಟು ಉತ್ಪಾದನ ಸಾಮರ್ಥ್ಯ ಹೊಂದಿದೆ. 30 ಸಾವಿರ ರಿಟೇಲ್ ಮಳಿಗೆಗಳು, 330 ಚಾನೆಲ್ ಪಾಲುದಾರರನ್ನು ಹೊಂದಿದೆ. ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದು, ಸಂಸ್ಥೆಯು ಲಾಭದಲ್ಲಿನ ಶೇ. 2ರಷ್ಟು ಆದಾಯವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸುತ್ತಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಪ್ರದೀಪ್ ಜಿ. ಪೈ ತಿಳಿಸಿದರು. ಸಂಸ್ಥೆಯ ಉದ್ಯಮಶೀಲ ಸಂಸ್ಥಾಪಕ ದಿನೇಶ್ ಆರ್. ಪೈ, ಕಾರ್ಯನಿರ್ವಾಹಕ ನಿರ್ದೇಶಕ ಜಗದೀಶ್ ಆರ್. ಪೈ ಸೇರಿದಂತೆ ಮತ್ತಿತರರು ಇದ್ದರು.