Advertisement

ಅಪಾಯದಿಂದ ಹಾಂಗ್‌ಕಾಂಗ್‌ ಪಾರು

02:39 PM May 02, 2020 | sudhir |

ಹಾಂಗ್‌ಕಾಂಗ್‌: ಚೀನದ ಪಕ್ಕದಲ್ಲೇ ಇರುವ ಹಾಂಗ್‌ಕಾಂಗ್‌ ದೇಶ ಕೋವಿಡ್ ಮಹಾ ಮಾರಿಯಿಂದ ಹೆಚ್ಚು ಬಾಧೆ ಅನುಭವಿಸಲೇ ಇಲ್ಲ.

Advertisement

ಅಲ್ಲಿ 75 ಲಕ್ಷ ಜನಸಂಖ್ಯೆಯಿದೆ. ಈ ಪೈಕಿ ಕೇವಲ 1038 ಜನರಿಗೆ ಮಾತ್ರ ಕೋವಿಡ್ ಸೋಂಕು ತಗಲಿದ್ದು, ಕೇವಲ ನಾಲ್ವರು ಪ್ರಾಣ ತೆತ್ತಿದ್ದಾರೆ. ಕಳೆದ ಐದು ದಿನಗಳಿಂದ ಇಲ್ಲಿ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ ಎನ್ನುವುದು ಗಮನಾರ್ಹ.
ಸಾಮಾಜಿಕ ಅಂತರದ ಪರಿಪಾಲನೆ ಹಾಗೂ ಸ್ವಯಂಪ್ರೇರಿತ ಲಾಕ್‌ಡೌನ್‌ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಅಮೆರಿಕ ಕೋವಿಡ್ ದಿಂದ ಜಾಗತಿಕವಾಗಿ ಗರಿಷ್ಠ ಪ್ರಮಾಣದಲ್ಲಿ ಪೆಟ್ಟು ತಿಂದಿದೆ. ಅಲ್ಲಿನ ನ್ಯೂಯಾರ್ಕ್‌ ನಗರದಲ್ಲಿ 85 ಲಕ್ಷ ಜನಸಂಖ್ಯೆಯಿದ್ದು, ಈ ಪೈಕಿ 1,62,212 ಜನರು ಸೋಂಕುಪೀಡಿತರಾಗಿದ್ದಾರೆ. 17,866 ಜನ ಅಸುನೀಗಿದ್ದಾರೆ. ಹಾಂಗ್‌ಕಾಂಗ್‌ಗೆ ಹೋಲಿಸಿದರೆ ನ್ಯೂಯಾರ್ಕ್‌ನಲ್ಲಿ ಸೋಂಕುಪೀಡಿತರ ಪ್ರಮಾಣ 156 ಪಟ್ಟು ಹಾಗೂ ಸಾವಿನ ಪ್ರಮಾಣ 4486 ಪಟ್ಟು ಹೆಚ್ಚು.
ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಹಾಂಗ್‌ಕಾಂಗ್‌ ಮಾದರಿ ನಿಯಮ ಪಾಲಿಸಲೂ ಯೋಚಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next