Advertisement
ಹಾಂಗ್‌ಕಾಂಗ್ ಮತ್ತು ದಕ್ಷಿಣ ಕೊರಿಯಾ ದೇಶಗಳು ಯಥಾಸ್ಥಿತಿಗೆ ಮರಳಿವೆ. ಜಗತ್ತಿನ ಇತರ ರಾಷ್ಟ್ರಗಳಲ್ಲಿ ಕೋವಿಡ್-19 ಸೋಂಕು ಪತ್ತೆ ಯಾಗುವ ಸಂದರ್ಭದಲ್ಲಿಯೇ ಈ ರಾಷ್ಟ್ರಗಳಲ್ಲಿಯೂ ಸೋಂಕು ಪ್ರಕರಣ ಪತ್ತೆಯಾಗಿತ್ತು. ಇಷ್ಟು ಬೇಗ ಲಾಕ್‌ಡೌನ್ ತೆರವಾಗಲು ಸರಕಾರ ಕೈಗೊಂಡ ಹಲವು ಕಾರ್ಯಕ್ರಮಗಳು ಕಾರಣವಾಗಿದೆ.
ಹಾಂಗ್‌ಕಾಂಗ್ ಮತ್ತು ದಕ್ಷಿಣ ಕೊರಿಯಾ ಎರಡನೇ ಹಂತಕ್ಕೆ ಕೋವಿಡ್-19 ವೈರಸ್ ಸೋಂಕದಂತೆ ಅತಿ ಎಚ್ಚರ ವಹಿಸಿತ್ತು. ಇದಕ್ಕಾಗಿ ಪ್ರಾಥಮಿಕ ಹಂತದಲ್ಲಿರಬೇಕಾದರೆ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸಿತು. ಮಾತ್ರವಲ್ಲದೇ ಸೋಂಕಿತರನ್ನು ಟ್ರ್ಯಾಕ್ ಮಾಡಿದ ಈ ರಾಷ್ಟ್ರಗಳು, ಅವರ ಟ್ರಾವೆಲ್ ಇತಿಹಾಸ ಮತ್ತು ವಾಸವಿರುವ ಸ್ಥಳದ ಕುರಿತಾದ ಮಾಹಿತಿಯನ್ನು ಕಲೆ ಹಾಕಿದವು. ತನ್ನ ಜನರ ಜತೆ ತಾಂತ್ರಿಕ ವಾಗಿ ನಿರಂತರ ಸಂಪರ್ಕವನ್ನು ಇಟ್ಟುಕೊಂಡು ಜಾಗೃತಿ ಮೂಡಿಸಿದವು. ಎಸ್‌ಎಂಎಸ್ ನೆರವು
ಕೋವಿಡ್-19 ಸೋಂಕಿತರು/ಶಂಕಿತರು ತಮ್ಮ ಮನೆಯ ಸನಿಹ ಅಥವಾ ತಮ್ಮ ನಗರಗಳಿಗೆ ಬಂದರೆ ಅದರ ಸುಳಿವು ಸ್ಥಳೀಯರಿಗೆ ದೊರೆಯುತ್ತಿದ್ದವು. ಉದಾಹರಣೆಗೆ ವಿದೇಶದಿಂದ ಬಂದ ವ್ಯಕ್ತಿಯಾಗಿದ್ದರೆ ಅಥವಾ ಕೋವಿಡ್-19ವೈರಸ್ ಸಂಪರ್ಕ ವಿರುವ ವ್ಯಕಿಯ ಜತೆ ಪ್ರಯಾಣಿಸಿದ್ದರೆ ಅಂತಹ ಮಾಹಿತಿ ಗಳು ಸರಕಾರಕ್ಕೆ ಲಭ್ಯವಾಗುತ್ತಿತ್ತು. ಸರಕಾರ ಅವುಗಳನ್ನು ಎಸ್‌ಎಂಎಸ್‌ಗಳ ಮೂಲಕ ಮತ್ತು ವಿಶಿಷ್ಟ ಆ್ಯಪ್‌ಗ್ಳ ಮೂಲಕ ಜನರಿಗೆ ರವಾನಿಸಿ ಎಚ್ಚರ ವಹಿಸುತ್ತಿತ್ತು.
Related Articles
ತನ್ನ ಆರಂಭಿಕ ನಿರ್ಣಾಯಕ ಕ್ರಮಗಳಲ್ಲಿ ಚೀನದೊಂದಿಗಿನ ಎಲ್ಲಾ ಸಂಪರ್ಕ, ವಹಿವಾಟು ಬಂದ್ ಮಾಡಿದವು. ದ್ವೀಪದ ಬಂದರುಗಳಲ್ಲಿ ಕ್ರೂಸ್ ಹಡಗುಗಳು ನಿಲ್ಲಿಸುವುದನ್ನು ತಡೆದವು. ಸಾಮಾಜಿಕ ಅಂತರವನ್ನು ಪರಿಣಾಮಕಾರಿಯಾಗಿ ಅನುಕರಣೆ ಮಾಡಿದ್ದರ ಫಲವಾಗಿ ಸಹಜ ಸ್ಥಿತಿಯತ್ತ ನಿಧಾನವಾಗಿ ಮರಳುತ್ತಿವೆ. ಜತೆಗೆ ಎಷ್ಟೋ ಸಂಶೋಧನ ವರದಿಗಳು ಮತ್ತು ತಜ್ಞರೂ ಸಾಮಾಜಿಕ ಅಂತರ ಸೋಂಕಿನ ಪ್ರಸರಣ ಕಡಿಮೆ ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. ಈ ಮಾತಿಗೆ ಹಾಂಗ್‌ಕಾಂಗ್ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳು ನಿದರ್ಶನವಾಗಿವೆ.
Advertisement
ವ್ಯಾಪಕ ಪರೀಕ್ಷೆಕೋವಿಡ್ -19 ಸೋಂಕು ತನ್ನ ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡದಂತೆ ತಡೆದ ಕೆಲವೇ ದೇಶಗಳ ಪೈಕಿ ದಕ್ಷಿಣ ಕೊರಿಯಾ ಕೂಡ ಒಂದು. ಚೀನಾದಂತೆ ಸಂಪೂರ್ಣ ನಗರಗಳನ್ನು ನಿರ್ಬಂಧಿಸುವ ಬದಲು ಪ್ರಕರಣಗಳು ಹೆಚ್ಚಿರುವ ಪ್ರದೇಶಗಳನ್ನು ಮಾತ್ರ ಲಾಕ್‌ಡೌನ್ ಮಾಡಿತು. ಸೋಂಕಿತ, ಶಂಕಿತ ಎನ್ನದೇ ವ್ಯಾಪಕವಾಗಿ ಪರೀಕ್ಷೆ ನಡೆಸಿತು. ಕೊರಿಯಾದ ಆರೋಗ್ಯ ಅಧಿಕಾರಿಗಳು ಫೆಬ್ರವರಿ ಅಂತ್ಯದಲ್ಲಿ 2,59,000ಕ್ಕೂ ಹೆಚ್ಚು ಜನರಿಗೆ ಪರೀಕ್ಷೆಗಳನ್ನು ನಡೆಸಿ 8,000 ಕ್ಕೂ ಹೆಚ್ಚು ಸೋಂಕುಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾದರು.ಇದರಿಂದ ಅಷ್ಟೂ ಮಂದಿ ಮತ್ತಷ್ಟು ಜನರಿಗೆ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಯಿತು. ಇದರಿಂದ ಕೋವಿಡ್-19 ಎರಡನೇ ಹಂತದಲ್ಲಿ ಹೆಚ್ಚು ಸಮಸ್ಯೆಯಿಲ್ಲದೇ ದಾಟಲು ಸಾಧ್ಯವಾಯಿತು. ನೂರಾರು ವಾಕ್-ಇನ್ ಮತ್ತು ಡ್ರೈವ್-ಥ್ರೂ ಪರೀûಾ ಕೇಂದ್ರಗಳನ್ನು ದಕ್ಷಿಣ ಕೊರಿಯಾ ಸ್ಥಾಪಿಸಿತ್ತು. ವೈರಸ್ ಸಂಪರ್ಕಕ್ಕೆ ಬಂದಿ ರುವ ಜನರ ಮೂಲವನ್ನು ಪತ್ತೆಹಚ್ಚಿ ಅವರನ್ನು ಕ್ವಾರಂಟೇನ್‌ಗೆ ಒಳಪಡಿಸಿತ್ತು. ದಕ್ಷಿಣ ಕೊರಿಯಾದ ಸರಕಾರ ಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಿಲ್ಲ. ಪರಿಣಾಮವಾಗಿ ವ್ಯಾವಹಾರಿಕ ಕ್ಷೇತ್ರಗಳು ಕಾರ್ಯನಿರ್ವಹಿಸುತ್ತಿದ್ದವು. ಮನೆಯಿಂದ ಕೆಲಸ ಮಾಡಲು ಸರಕಾರ ಉತ್ತೇಜನ ನೀಡಿತ್ತು. ಪ್ರತಿ ಮನೆಗಳಿಗೂ ಮಾಸ್ಕ್ಗಳು ಸೇರಿದಂತೆ ಇತರ ವೈದ್ಯಕೀಯ ಸಾಧನಗಳನ್ನು ಉಚಿತವಾಗಿ ಪೂರೈಸಿತು. ಇದು ಸಾರ್ವಜನಿಕರನ್ನು ಹೆಚ್ಚು ಜಾಗೃತರನ್ನಾಗಿಸಿತಲ್ಲದೇ, ಸರಕಾರದ ನಿಯಮಗಳನ್ನು ಪಾಲಿಸಲು ಸಹಾಯ ಮಾಡಿತು. ಲಾಕ್‌ಡೌನ್ ಜಾರಿಯಲ್ಲಿದ್ದರೂ ಜನರೇ ಸ್ವಯಂ ಪ್ರೇರಿತರಾಗಿ ಅದನ್ನು ಪಾಲಿಸುತ್ತಿದ್ದರು. ಈ ಸರಕಾರದ ಪೂರ್ವಸಿದ್ಧತೆ ಹಾಗೂ ಜನರ ಸ್ವಯಂ ಪ್ರೇರಿತ ಪಾಲಿಸುವಿಕೆ ಎರಡೂ ದೇಶವನ್ನು ದೊಡ್ಡ ಸಂಕಟದಿಂದ ಪಾರು ಮಾಡಿದವು.