Advertisement

ಮಣಿದ ಹಾಂಕಾಂಗ್‌ ಆಡಳಿತ

12:42 AM Sep 05, 2019 | Team Udayavani |

ಹಾಂಕಾಂಗ್‌: ಇಲ್ಲಿನ ನಿವಾಸಿಗಳ, ಯುವ ಸಮೂಹದ ಭಾರೀ ವಿರೋಧಕ್ಕೆ ಕಾರಣವಾಗಿದ್ದ ಕ್ರಿಮಿನಲ್‌ ಆರೋಪಿಗಳನ್ನು ವಿಚಾರಣೆಗಾಗಿ ಚೀನಕ್ಕೆ ಒಪ್ಪಿಸುವ ಮಸೂದೆ ಹಿಂಪಡೆಯುವುದಾಗಿ ನಗರದ ಮುಖ್ಯ ಆಡಳಿತಾಧಿಕಾರಿ ಕ್ಯಾರಿ ಲಾಮ್‌ ಘೋಷಿಸಿದ್ದಾರೆ.

Advertisement

ಎಪ್ರಿಲ್‌ನಲ್ಲಿ ರೂಪುಗೊಂಡಿದ್ದ ಈ ವಿಧೇಯಕದ ವಿರುದ್ಧ ಸಾವಿರಾರು ಹಾಂಗ್‌ಕಾಂಗ್‌ ನಿವಾಸಿಗಳು ಬೀದಿಗಿಳಿದು ಸತತ ಐದು ತಿಂಗಳ ಕಾಲ ಹೋರಾಟ ಮಾಡಿದ್ದರು. ಈಗ, ಅವರ ಪ್ರತಿಭಟನೆಗೆ ಜಯ ಸಿಕ್ಕಂತಾಗಿದೆ. 1997ರಲ್ಲಿ ಹಾಂಗ್‌ಕಾಂಗ್‌ ನಗರವನ್ನು ಬ್ರಿಟಿಷರು ತೊರೆದ ಅನಂತರ, ಚೀನ ಸರಕಾರವು ಹಾಂಗ್‌ಕಾಂಗ್‌ಗೆ ಅರೆ ಸ್ವಾಯತ್ತ ಸ್ಥಾನಮಾನ ನೀಡಿ ತನ್ನ ಅಧೀನದಲ್ಲಿಟ್ಟುಕೊಂಡು ಆಡಳಿತ ನಡೆಸುತ್ತಿದೆ.

ಐದರಲ್ಲಿ ಒಂದಕ್ಕೆ ಒಪ್ಪಿಗೆ: ಅಂದಹಾಗೆ, ಮಸೂದೆ ವಾಪಸು ನಿರ್ಧಾರವು, ಪ್ರತಿಭಟನಕಾರರ ಐದು ಪ್ರಮುಖ ಬೇಡಿಕೆಗಳನ್ನು ಒಂದು ಈಡೇರಿಸಿದಂತಾಗಿದೆ. ವಿಧೇಯಕ ಹಿಂಪಡೆಯುವುದರ ಜತೆಗೆ, ಕ್ಯಾರಿ ಲ್ಯಾಮ್‌ ತಮ್ಮ ಹುದ್ದೆಗೆ ರಾಜಿನಾಮೆ ಕೊಡಬೇಕು, ಪೊಲೀಸರ ದೌರ್ಜನ್ಯ ಪ್ರಕರಣಗಳ ಸಮಗ್ರ ತನಿಖೆಯಾಗಬೇಕು, ಸುಳ್ಳು ಕೇಸುಗಳಲ್ಲಿ ಬಂಧನಕ್ಕೊಳಗಾದವರ ಬಿಡುಗಡೆಯಾಗಬೇಕು ಹಾಗೂ ಹಾಂಗ್‌ಕಾಂಗ್‌ನಲ್ಲಿ ಪ್ರಜಾಪ್ರಭುತ್ವ ಜಾರಿ ಯಾಗಬೇಕೆಂದು ಅವರು ಆಗ್ರಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next