Advertisement

ಮಸೂದೆ ಹಿಂಪಡೆದ ಹಾಂಕಾಂಗ್‌ ; ತೀವ್ರ ಪ್ರತಿಭಟನೆಗೆ ಕಾರಣವಾಗಿದ್ದ ಮಸೂದೆ

09:46 AM Oct 25, 2019 | Hari Prasad |

ಹಾಂಕಾಂಗ್‌: ಹಾಂಕಾಂಗ್‌ನಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿದ್ದ, ಅಪರಾಧಿಗಳನ್ನು ಹಾಂಕಾಂಗ್‌ನಿಂದ ಚೀನಗೆ ಗಡಿಪಾರು ಮಾಡುವ ಮಸೂದೆಯನ್ನು ಹಿಂಪಡೆದಿರುವುದಾಗಿ ಹಾಂಕಾಂಗ್‌ ಶಾಸನ ಸಭೆ ಘೋಷಿಸಿದೆ. ಸಾವಿರಾರು ಜನರು ಬೀದಿಗಿಳಿದು ಈ ಮಸೂದೆ ವಿರುದ್ಧ ಪ್ರತಿಭಟಿಸಿದ್ದರು. ಕೊನೆಗೂ ಈ ಮಸೂದೆಯನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ.

Advertisement

ಆದರೆ ಪ್ರತಿಭಟನಕಾರರಿಗೆ ಈ ಘೋಷಣೆ ಸಮಾಧಾನ ತಂದಿಲ್ಲ. ಹೀಗಾಗಿ ಇನ್ನೂ ಪ್ರತಿಭಟನೆಯನ್ನು ಅವರು ಮುಂದುವರಿಸಿದ್ದಾರೆ. ಪ್ರತಿಭಟನಕಾರರು ಇಟ್ಟ ಐದು ಬೇಡಿಕೆಗಳ ಪೈಕಿ ಕೇವಲ ಒಂದು ಬೇಡಿಕೆಗೆ ಮಾತ್ರ ಸರಕಾರ ಸಮ್ಮತಿ ನೀಡಿದ್ದು, ಇತರ ನಾಲ್ಕು ಬೇಡಿಕೆಗಳು ಇನ್ನೂ ಪೂರೈಸಿಲ್ಲ ಎಂದು ಪ್ರತಿಭಟನಕಾರರು ಹೇಳಿದ್ದಾರೆ.

ಈ ಮಸೂದೆಯ ಪ್ರಕಾರ ಅಪರಾಧಿಗಳನ್ನು ಚೀನ, ತೈವಾನ್‌ ಮತ್ತು ಮಕಾವುಗೆ ಹಸ್ತಾಂತರ ಮಾಡಬಹುದಾಗಿತ್ತು. ಈ ಅಪರಾಧಿಗಳನ್ನು ಸರಿಯಾದ ರೀತಿಯಲ್ಲಿ ಚೀನದಲ್ಲಿ ನಡೆಸಿಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಹಾಂಕಾಂಗ್‌ ಜನರು ಪ್ರತಿಭಟನೆ ನಡೆಸುತ್ತಿದ್ದರು.

ಕ್ಯಾರಿ ಲ್ಯಾಮ್‌ ಎತ್ತಂಗಡಿ?: ಈ ಮಧ್ಯೆ ಪ್ರತಿಭಟನೆಗಳನ್ನು ಹತ್ತಿಕ್ಕಲು ವಿಫ‌ಲವಾಗಿದ್ದಕ್ಕೆ ಹಾಂಕಾಂಗ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕ್ಯಾರಿ ಲ್ಯಾಮ್‌ರನ್ನು ಬದಲಿಸಲು ಚೀನ ಆಡಳಿತ ನಿರ್ಧರಿಸಿದೆ ಎನ್ನಲಾಗಿದೆ. ಆದರೆ ಈ ವರದಿಗಳನ್ನು ಚೀನ ತಳ್ಳಿಹಾಕಿದೆ. ಕ್ಯಾರಿ ಲ್ಯಾಮ್‌ರನ್ನು ಬದಲಿಸುವ ಯಾವುದೇ ಪ್ರಸ್ತಾವವಿಲ್ಲ. ಹಾಂಕಾಂಗ್‌ನಲ್ಲಿ ಹಿಂಸೆಯನ್ನು ತಡೆದು, ಶಾಂತಿ ಸ್ಥಾಪನೆಗೆ ಚೀನ ಎಲ್ಲ ಬೆಂಬಲವನ್ನೂ ಕ್ಯಾರಿಗೆ ಒದಗಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್ಯಿಂಗ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next