Advertisement
ಇದು ಒಂದು ಅರ್ಥದಲ್ಲಿ ಹೋರಾಡುವ ಮೊದಲೇ ಗೆಲುವನ್ನು ಸಂಭ್ರಮಿಸಿದಂತಾಗಿದೆ. ಇದರ ಬಳಿಕದ ಸ್ಥಿತಿಯ ಬಗೆಗೆ ಬಹಳಷ್ಟು ರಾಷ್ಟ್ರಗಳಿಗೆ ಅರಿವು ಇದ್ದಂತಿಲ್ಲ. ಕಳೆದ ವರ್ಷಾಂತ್ಯದಲ್ಲಿ ಚೀನದಲ್ಲಿ ಕಾಣಿಸಿಕೊಂಡ ವೈರಸ್ ಬಳಿಕ ಹಲವು ದೇಶಗಳಿಗೆ ಹಬ್ಬಿತ್ತು. ತನ್ನ ನೆಲದಲ್ಲಿ ಮೊದಲು ಕೋವಿಡ್ ಪ್ರಕರಣ ಕಾಣಿಸಿಕೊಂಡ ಕಾರಣ ಚೀನ ಲಾಕ್‌ಡೌನ್ ಮೂಲಕ ತನ್ನ ಪ್ರಜೆಗಳನ್ನು ರಕ್ಷಿಸಿತ್ತು. ಬಳಿಕ ಅದೇ ಕ್ರಮವನ್ನು ಜಗತ್ತು ಪಾಲಿಸಿತ್ತು. ತನ್ನ ನೆಲದಲ್ಲಿ ಪ್ರಕರಣ ಕಡಿಮೆಯಾದ ಕಾರಣ ಚೀನ ಲಾಕ್‌ಡೌನ್ ಅನ್ನು ಹಂತ ಹಂತವಾಗಿ ಸಡಿಲಗೊಳಿಸಿ ಬಳಿಕ ಸಂಪೂರ್ಣ ತೆರವು ಮಾಡಿತ್ತು. ಇದೇ ಮಾದರಿಯನ್ನು ಇತರ ರಾಷ್ಟ್ರಗಳು ಇಂದು ಅನುಕರಿಸುತ್ತಿವೆ. ಕೋವಿಡ್ ಜಗತ್ತಿನಿಂದ ಕಣ್ಮರೆಯಾಗಿಲ್ಲ ಎಂಬ ಸತ್ಯದ ಅರಿವಿದ್ದೂ ಜಗತ್ತು ತಪ್ಪು ಮಾಡುತ್ತಿವೆಯೇ ಎಂಬ ಅನುಮಾನ ಬರುವುದು ಸಹಜ.
Related Articles
Advertisement
ವುಹಾನ್‌ನಲ್ಲಿಯೂ ಮತ್ತೆ ಎಚ್ಚರಿಕೆಯ ಕ್ರಮಗಳನ್ನು ಜಾರಿಗೆ ತರಲಾಗಿದೆ. ಮೊದಲ ಬಾರಿ ಲಾಕ್‌ಡೌನ್ ಆದ ವುಹಾನ್ 76 ದಿನಗಳ ಬಳಿಕ ಸಾಮಾನ್ಯ ಸ್ಥಿತಿಗೆ ಮರಳಿದೆ. ಸೋಮವಾರ ನಗರದಲ್ಲಿ 5 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಯಾರೂ ಟ್ರಾವೆಲ್ ಹಿಸ್ಟರಿ ಹೊಂದಿಲ್ಲ. ಎಲ್ಲರೂ ಚೀನಿಗರೇ ಎಂಬುದು ದೃಢಪಟ್ಟಿದೆ.
ಯುರೋಪಿನಲ್ಲಿ ಕೋವಿಡ್ ನ್ನು ಹೇಗೆ ನಿಯಂತ್ರಿಸಬೇಕು ಎಂಬ ಪ್ರಶ್ನೆಗೆ ಜರ್ಮನಿಯು ಉದಾಹರಣೆಯಾಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಪ್ರಕರಣ ಕಡಿಮೆಯಾದ ಕಾರಣ ಲಾಕ್‌ಡೌನ್ ಅನ್ನು ಸಡಿಲಗೊಳಿಸಿ ಸಂಚಾರಕ್ಕೆ ಅನುವುಮಾಡಿಕೊಡಲಾಗುತ್ತಿತ್ತು. ಆದರೆ ಈಗ ಕೋವಿಡ್ ಮತ್ತೆ ತಲೆ ಎತ್ತಿದೆ. ಸರಕಾರದ ಮಾಹಿತಿಯ ಪ್ರಕಾರ 1 ಲಕ್ಷ ಜನಸಂಖ್ಯೆಯಲ್ಲಿ 50 ಹೊಸ ಕೋವಿಡ್ ವೈರಸ್ ಪ್ರಕರಣ ಪತ್ತೆಯಾದರೆ ಆಂತಹ ಕೌಂಟಿಯಲ್ಲಿ ಮತ್ತೆ ಲಾಕ್ ಡೌನ್ ಕ್ರಮಗಳನ್ನು ಪರಿಚಯಿಸಲಾಗುತ್ತದೆ. ವಾರಾಂತ್ಯದಲ್ಲಿ ದೇಶಾದ್ಯಂತ ಹಲವಾರು ಕೌಂಟಿಗಳು ಆ ಮಿತಿಯನ್ನು ಮೀರಿವೆ ಎನ್ನಲಾಗುತ್ತಿದೆ. ಒಟ್ಟಾರೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದರೂ ಈ ಮೇಲಿನ ಮೂರು ದೇಶಗಳಲ್ಲಿ ಮತ್ತೆ ಕೋವಿಡ್ ವೈರಸ್ ಪ್ರಸರಣ ವರದಿಯಾಗುತ್ತಿವೆ.
ಸಿಂಗಾಪುರದಲ್ಲಿ ಎಪ್ರಿಲ್ ಆರಂಭದಲ್ಲಿ 2 ಸಾವಿರಕ್ಕಿಂತಲೂ ಕಡಿಮೆ ಪ್ರಕರಣಗಳಿದ್ದವು. ಈಗ ಅವುಗಳ ಸಂಖ್ಯೆ 24 ಸಾವಿರ ದಾಟಿದೆ. ಈ ಕಾರಣಕ್ಕೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ. ಸಾಮಾಜಿಕ ದೂರವನ್ನು ಪಾಲಿಸಲು ಪೊಲೀಸ್ ಸಿಬಂದಿ ಬದಲು ರೋಬೋಟ್ ನಾಯಿಗಳನ್ನು ನಿಯೋಜಿಸುತ್ತಿವೆ. ಸಿಬಂದಿಗಳಿಗೆ ಸೋಂಕು ಹರಡಬಾರದು ಎಂಬ ಕಾರಣಕ್ಕೆ. ಈ ನಿಟ್ಟಿನಲ್ಲಿ ಯೋಚಿಸುವುದಾದರೆ ಹಾಂಗ್ ಕಾಂಗ್‌ನಲ್ಲಿ ಎರಡನೇ ಹಂತದ ಯಾವುದೇ ಸೋಂಕುಗಳು ಪತ್ತೆಯಾಗಿಲ್ಲ. 21 ದಿನಗಳು ಕಳೆದರೂ ಯಾವುದೇ ಹೊಸ ಸ್ಥಳೀಯ ಪ್ರಕರಣಗಳು ಪತ್ತೆಯಾಗಿಲ್ಲ. ಇದಕ್ಕೆ ಅಲ್ಲಿನ ಸರಕಾರ ಮುಂದುವರಿಸಿದ ಲಾಕ್‌ಡೌನ್.