Advertisement
ವಿಜಯಪುರ ಜಿಲ್ಲೆಯವರಾದ ಜವಳಿ ಖಾತೆ ಸಚಿವ ಶಿವಾನಂದ ಪಾಟೀಲ ಅವರು ತಮ್ಮ ತವರು ಕ್ಷೇತ್ರವಾಗಿರುವ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದಲ್ಲಿ ಕೈಗಾರಿಕೆ ಸ್ಥಾಪಿಸುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಇದರ ಪರಿಣಾಮವಾಗಿ ಈಗಾಗಲೇ ಮುಳವಾಡ ಬಳಿ ಕೈಗಾರಿಕೆ ಸ್ಥಾಪನೆಗೆ ಮೀಸಲಿರುವ ಸ್ಥಳಕ್ಕೆ ಭೇಟಿ ನೀಡಿರುವ ಹಾಂಗ್‍ಕಾಂಗ್ ಕಂಪನಿ ಪ್ರತಿನಿಧಿಗಳು, ಜಿಲ್ಲೆಯಲ್ಲಿ ಜವಳಿ ಕೈಗಾರಿಕೆ ಸ್ಥಾಪನೆಗೆ ಆಸಕ್ತಿ ತೋರಿದ್ದಾರೆ.
Related Articles
Advertisement
ಬೆಂಗಳೂರಿನ ಭೇಟಿ ಸಂದರ್ಭದಲ್ಲಿ ಸಚಿವರೊಂದಿಗೆ ಸಭೆಯಲ್ಲಿ ಪಾಲ್ಗೊಂಡಿದ್ದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಜವಳಿ ಆಯುಕ್ತ ಟಿಎಚ್.ಎಂ. ಕುಮಾರ, ಕೆಐಎಡಿಬಿ ಸಿಇಒ ಡಾ.ಮಹೇಶ ಇವರೆಲ್ಲ ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಲಭ್ಯವಿರುವ ಸಂಪನ್ಮೂಲ, ಪೆÇ್ರೀತ್ಸಾಹ ಧನ, ರಿಯಾಯಿತಿ ಸೇರಿದಂತೆ ಪ್ರಾತ್ಯಕ್ಷಿಕೆ ಮೂಲಕ ಸಮಗ್ರ ಮಾಹಿತಿ ನೀಡಿದ್ದಾರೆ.
ಒಂದೊಮ್ಮೆ ಹಾಂಗ್‍ಕಾಂಗ್ ಮೂಲದ ಟಾಲ್ ಅಪಾರೆಲ್ಸ್ ಕಂಪನಿ ಮುಳವಾಡ ಕೈಗಾರಿಕೆ ಪ್ರದೇಶದಲ್ಲಿ ತನ್ನ ಉತ್ಪಾದನಾ ಶಾಖೆ ತೆರೆದರೆ ಬಸವನಬಾಗೇವಾಡಿ ತಲೂಕು ಸೇರಿದಂತೆ ಜಿಲ್ಲೆಯಲ್ಲಿ ಸುಮಾರು 6 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ.
ಸ್ವಯಂ ಜವಳಿ ಖಾತೆ ಹೊಂದಿರುವ ಸಚಿವ ಶಿವಾನಂದ ಪಾಟೀಲ ಅವರು ಮುಳವಾಡ ಕೈಗಾರಿಕೆ ಪ್ರದೇಶದಲ್ಲಿ ತವರು ಜಿಲ್ಲೆಗೆ ತಮ್ಮ ಮಹತ್ವಾಕಾಂಕ್ಷೆಯ ಕೈಗಾರಿಕೆ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ ಹೆಚ್ಚಿನ ಆಸಕ್ತಿ ತೋರಿದ್ದು, ಕನಸಿನ ಯೋಜನೆ ಸಾಕಾರಕ್ಕೆ ಮುಂದಡಿ ಇರಿಸಿದ್ದಾರೆ.
ಇದನ್ನೂ ಓದಿ: Karwar; ಸುಳ್ಳು ಹೇಳಿ ಟೋಲ್ ವಸೂಲಿ: ಸಭೆಯಲ್ಲಿ ಗುಡುಗಿದ ಸಚಿವ ವೈದ್ಯ