Advertisement

ಕೋವಿಡ್‌ ಭೀತಿ: ಎರಡು ಬ್ಯಾಡ್ಮಿಂಟನ್‌ ಕೂಟ ರದ್ದು

09:36 PM Sep 01, 2022 | Team Udayavani |

ಕೌಲಾಲಂಪುರ: ಹೆಚ್ಚುತ್ತಿರುವ ಕೋವಿಡ್‌ ಕೇಸ್‌ಗಳಿಂದಾಗಿ ಹಾಂಕಾಂಗ್‌ ಓಪನ್‌ ಸೂಪರ್‌-500 ಹಾಗೂ ಮಕಾವ್‌ ಓಪನ್‌ ಸೂಪರ್‌-300 ಬ್ಯಾಡ್ಮಿಂಟನ್‌ ಪಂದ್ಯಾವಳಿಯನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ.

Advertisement

ಮಕಾವ್‌ ಓಪನ್‌ ನ. 1ರಿಂದ 6ರ ತನಕ, ಹಾಂಕಾಂಗ್‌ ಓಪನ್‌ ನ. 8ರಿಂದ 13ರ ತನಕ ನಡೆಯಬೇಕಿತ್ತು. ಎರಡೂ ದೇಶಗಳಿಗೆ ಬ್ಯಾಡ್ಮಿಂಟನ್‌ ವರ್ಲ್ಡ್ ಫೆಡರೇಶನ್‌ ಈ ಕುರಿತು ಮಾಹಿತಿ ನೀಡಿದೆ.

ವಿದೇಶದಿಂದ ಆಗಮಿಸುವವರಗೆ ಕ್ವಾರಂಟೈನ್‌ ಕಡ್ಡಾಯ ಮಾಡಿರುವುದು ಹಾಂಕಾಂಗ್‌ ಕೂಟಕ್ಕೆ ಅಡ್ಡಿಯಾಗಲಿದೆ. ಹಾಗೆಯೇ ಮಕಾವ್‌ನಲ್ಲಿ ಕಠಿನ ಪ್ರಯಾಣ ನಿರ್ಬಂಧವೂ ಇದೆ. ಪ್ರಸ್ತುತ ಸಾಗುತ್ತಿರುವ ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಬಳಿಕ ಪಂದ್ಯಾವಳಿ ಯೂರೋಪ್‌ನತ್ತ ಮುಖ ಮಾಡಲಿದೆ. ಡೆನ್ಮಾರ್ಕ್‌, ಫ್ರಾನ್ಸ್‌ ಮತ್ತು ಜರ್ಮನಿ ಓಪನ್‌ ಕೂಟಗಳು ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next