Advertisement

ಹನಿವೆಲ್ ಬಿಡುಗಡೆ ಮಾಡಿದೆ ಎಸಿ ಕಂಟ್ರೋಲರ್, ವಿಡಿಯೋ ಕಣ್ಗಾವಲು ಹಾಗೂ ಹೊಗೆ ಪತ್ತೆ ಸಾಧನ

02:24 PM Sep 30, 2021 | Team Udayavani |

ಪುಣೆ: ಭಾರತದಲ್ಲಿ ಬೆಳೆಯುತ್ತಿರುವ ಮಧ್ಯಮ ಮಾರುಕಟ್ಟೆ ವಿಭಾಗದ ಅಗತ್ಯತೆ ಪೂರೈಸಲು ಹನಿವೆಲ್ ಬ್ರಾಂಡ್, ದೇಶೀಯವಾಗಿ ಅಭಿವೃದ್ಧಿಪಡಿಸಿದ ಮೂರು ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.

Advertisement

ವಿದ್ಯುತ್ ವೆಚ್ಚದಲ್ಲಿ ಶೇ. 30ವರೆಗೆ ಉಳಿಸಬಲ್ಲ ಎಸಿ ಕಂಟ್ರೋಲರ್, ಎಐ ಆಧಾರಿತ ವೀಡಿಯೊ ಕಣ್ಗಾವಲು ಮತ್ತು ಹೊಗೆ ಪತ್ತೆ ಸಾಧನಗಳನ್ನು ಹೊರತರಲಾಗಿದೆ. ಈ ಎಲ್ಲ ಸಾಧನಗಳನ್ನು ಗ್ರಾಹಕರು ಸುಲಭವಾಗಿ ತಾವೇ ಅಳವಡಿಸಿ ಕೊಳ್ಳಬಹುದಾಗಿದೆ.

ಇಂಪ್ಯಾಕ್ಟ್ ಎಸಿ ಕಂಟ್ರೋಲರ್: ಈ ಎಸಿ ನಿಯಂತ್ರಕವು ಬ್ಯಾಟರಿ ಚಾಲಿತವಾಗಿದ್ದು, ಸಣ್ಣ ಮತ್ತು ಮಧ್ಯಮ ಗಾತ್ರದ ವಾಣಿಜ್ಯ ಕಟ್ಟಡಗಳಿಗಾಗಿ ಇದನ್ನು ನಿರ್ಮಿಸಲಾಗಿದೆ. ಎಸಿ ಕಂಟ್ರೋಲರ್‍ ಗಳು, ಖಾಲಿ ಇರುವ ಕ್ಯಾಬಿನ್‌ಗಳು, ಮೀಟಿಂಗ್ ರೂಂಗಳು, ಕಾನ್ಫರೆನ್ಸ್ ರೂಮ್‌ಗಳಲ್ಲಿ ಅನಗತ್ಯವಾಗಿ ಚಾಲನೆಯಲ್ಲಿರದಂತೆ ನೋಡಿಕೊಳ್ಳುತ್ತವೆ. ಸಣ್ಣ ಮತ್ತು ಮಧ್ಯಮ ಗಾತ್ರದ ಕಟ್ಟಡಗಳಲ್ಲಿ ಎಸಿ ಮುಖ್ಯ ವಿದ್ಯುತ್ ಬಳಕೆಯ ಸಾಧನವಾಗಿದೆ. ಹನಿವೆಲ್ ಕೊಡುಗೆಯು ಈ ವ್ಯವಹಾರ ಸಂಸ್ಥೆಗಳಿಗೆ ವಿದ್ಯುತ್ ವೆಚ್ಚದಲ್ಲಿ ಶೇ. 30ರಷ್ಟು ಉಳಿತಾಯ ಮಾಡಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ:ಭವಾನಿಪುರ್ ಅಖಾಡದಲ್ಲಿ ಮಮತಾ, ಪ್ರಿಯಾಂಕಾ; ನೀರಸ ಮತದಾನ, ಈ ಬಾರಿ ಗೆಲುವು ಯಾರಿಗೆ?

ಇಂಪ್ಯಾಕ್ಟ್ ಎಐ ವೀಡಿಯೋ ಸರ್ವಲೆನ್ಸ್: ಈ ಎಐ ಆಧಾರಿತ ವೀಡಿಯೊ ಕಣ್ಗಾವಲು ಕೊಡುಗೆಯು ಒಂದು ಸಂಯೋಜಿತ ಕ್ಯಾಮೆರಾ-ಪ್ರೊಸೆಸರ್ ಸೆಟಪ್ ಅನ್ನು ಒಳಗೊಂಡಿದೆ. ಇದು ಮೊಬೈಲ್ ಅಪ್ಲಿಕೇಶನ್ ಮೂಲಕ ಬಳಕೆದಾರರಿಗೆ ತಕ್ಷಣ ಮತ್ತು ಬುದ್ಧಿವಂತಿಕೆಯಿಂದ ಅಲರ್ಟ್‌ಗಳನ್ನು ನೀಡುತ್ತದೆ. ಇದು ದುಬಾರಿ ಸರ್ವರ್‌ಗಳಲ್ಲಿ ಹೂಡಿಕೆ ಮಾಡುವ ಅಥವಾ ನೆಟ್‌ವರ್ಕ್ ಬ್ಯಾಂಡ್‍ ಹೆಚ್ಚಿಸುವ ಅಗತ್ಯವನ್ನು ನಿವಾರಿಸುತ್ತದೆ. ಉತ್ಪನ್ನವು ಹನಿವೆಲ್‍ ಸ್ವಾಮ್ಯದ ಅಲ್ಗಾರಿದಮ್‌ಗಳನ್ನು ಬಳಸುತ್ತದೆ ಮತ್ತು ಅದರ ಕ್ಲೌಡ್ ಮೂಲಸೌಕರ್ಯದ ಮೂಲಕ ಡೇಟಾ ವಿಶ್ಲೇಷಣೆಯನ್ನು ನೀಡುತ್ತದೆ.

Advertisement

ಇಂಪ್ಯಾಕ್ಟ್ ವೈರ್‌ಲೆಸ್ ಸ್ಮೋಕ್ ಡಿಟೆಕ್ಟರ್: ವಿಸ್ತೃತ ಅಗ್ನಿ ಪತ್ತೆ ವ್ಯವಸ್ಥೆ ಸಾಧ್ಯವಿಲ್ಲದ ಕಟ್ಟಡಗಳಿಗೆ ಅಭಿವೃದ್ಧಿಪಡಿಸಿದ ಉತ್ಪನ್ನ ಇದಾಗಿದೆ. ಈ ಉತ್ಪನ್ನವು ಜನಸಾಮಾನ್ಯರಿಗೆ ಮೂಲಭೂತ ಅಗ್ನಿ ಸುರಕ್ಷತೆಯನ್ನು ಒದಗಿಸುತ್ತದೆ. ಈ ಎಲ್ಲ ಉತ್ಪನ್ನಗಳು  ಭಾರತದ ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next