Advertisement
ಖಾಸಗಿ ಕಂಪೆನಿಯ ಉದ್ಯೋಗಿ ಪ್ರೇಮ್ ಅವರು ಜೀವನ್ ಸಾಥಿ ಡಾಟ್ ಕಾಂನಲ್ಲಿ ತನ್ನ ವೈಯಕ್ತಿಕ ವಿವರವನ್ನು ಹಾಕಿದ್ದರು. ಅದಕ್ಕೆ ಸ್ಪಂದಿಸಿದ್ದ ಕವಿತಾ ಮದುವೆ ಪ್ರಸ್ತಾವ ಮಾಡಿದ್ದಳು. ಡಿ.21ರಂದು ಪರಿಚಯವಾದ ಆಕೆ ಡಿ.26ರಂದು ಕರೆ ಮಾಡಿ, ರಾತ್ರಿ 9.30ರ ಸುಮಾರಿಗೆ ಮನೆಗೆ ಬರುವುದಾಗಿ ಪ್ರೇಮ್‌ಗೆ ತಿಳಿಸಿದ್ದಾಳೆ. ಹಾಗೆ ಬಂದವಳು ಪ್ರೇಮ್ ಜತೆ ಸಲುಗೆಯಿಂದಿದ್ದಳು. ಆ ದೃಶ್ಯವನ್ನು ಇಬ್ಬರೂ ಲ್ಯಾಪ್‌ಟಾಪ್ ಮೂಲಕ ಚಿತ್ರೀಕರಿಸಿಕೊಂಡಿದ್ದರು. ತಡರಾತ್ರಿ ಆಕೆ ಪ್ರೇಮ್‌ನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಹಾಗೂ ಮನೆಯಲ್ಲಿದ್ದ ಹಣ ಕೊಡುವಂತೆ ಆಗ್ರಹಿಸಿದಳು. ಪ್ರೇಮ್ ನಿರಾಕರಿಸಿದಾಗ ಪರಸ್ಪರ ವಾಗ್ವಾದ ನಡೆದಿದೆ. ಬಳಿಕ ಆಕೆ ಪ್ರೇಮ್ ವಿರುದ್ಧ ದೂರು ನೀಡಿದ್ದಳು.
ದೂರಿನ ಹಿನ್ನೆಲೆಯಲ್ಲಿ ಪ್ರೇಮ್‌ನನ್ನು ವಿಚಾರಣೆ ನಡೆಸಿದಾಗ ಆಕೆಯ ವಂಚನೆ ಬಯಲಾಯಿತು. ಆಕೆ ಈ ಹಿಂದೆಯೂ ಹಲವರಿಗೆ ವಂಚಿಸಿದ್ದ ವಿಷಯ ತಿಳಿಯಿತು. ಸರಕಾರಿ ಕೆಲಸದಿಂದ ವಜಾ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕವಿತಾ ವಿರುದ್ಧ ಅಲ್ಲಿನ ಮುಖ್ಯಶಿಕ್ಷಕರ ಮೇಲೆ ಹಲ್ಲೆ ನಡೆಸಿದ ಆರೋಪದಡಿಯಲ್ಲಿ ಲಿಂಗದಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿವಿಧ ರೀತಿಯ ಕರ್ತವ್ಯ ಲೋಪದ ಕಾರಣದಿಂದ ಈಕೆಯನ್ನು 2009ರಲ್ಲಿ ಸೇವೆಯಿಂದ ಅಮಾನತು ಮಾಡಲಾಗಿತ್ತು.