Advertisement

Honeytrap Case: ಹನಿಟ್ರ್ಯಾಪ್‌ ಮಾಸ್ಟರ್‌ ಮೈಂಡ್‌ ಕಳವು ಕೇಸಲ್ಲಿ ಬಂಧನ

12:50 PM Sep 14, 2023 | Team Udayavani |

ಬೆಂಗಳೂರು: ಇಡೀ ದೇಶದಲ್ಲೇ ಚರ್ಚೆಗೆ ಗ್ರಾಸವಾಗಿದ್ದ ಮಧ್ಯಪ್ರದೇಶದ ಹೈಪ್ರೊಫೈಲ್‌ ಹನಿಟ್ರ್ಯಾಪ್‌ ಕೇಸ್‌ನ ಮಾಸ್ಟರ್‌ ಮೈಂಡ್‌ ಆರತಿ ದಯಾಳ್‌ ಕಳ್ಳತನ ಪ್ರಕರಣದಲ್ಲಿ ಬೆಂಗಳೂರಿನ ಮಹ ದೇವಪುರ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

Advertisement

ಕಳೆದ ತಿಂಗಳಷ್ಟೇ ಬೆಂಗಳೂರಿಗೆ ಬಂದಿದ್ದ ಆರತಿ, ಪಿಜಿಯೊಂದರಲ್ಲಿ ವಾಸವಾಗಿದ್ದಳು. ಪಿಜಿಯಲ್ಲಿ ವಾಸವಾಗಿದ್ದ ವೇಳೆ ರೂಮ್‌ ಮೇಟ್‌ ಗಳ ಚಿನ್ನದ ಆಭರಣ ಕದ್ದು ಎಸ್ಕೇಪ್‌ ಆಗಿದ್ದಳು. ಈ ಸಂಬಂಧ ಮಹದೇವ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ಬಂಧಿಸಿದ್ದಾರೆ. ಬಳಿಕ ಈಕೆಯನ್ನು ವಿಚಾರಣೆ ನಡೆಸಿದಾಗ, ಮಧ್ಯಪ್ರದೇಶದಲ್ಲಿ ನಡೆದ ಹೈಪ್ರೊಫೈಲ್‌ ಹನಿಟ್ರ್ಯಾಪ್‌ ಪ್ರಕರಣದ ಮಾಸ್ಟರ್‌ ಮೈಂಡ್‌ ಎಂಬುದು ಗೊತ್ತಾಗಿದೆ.

2020ರಲ್ಲಿ ಜಾಮೀನು ಪಡೆದು ಹೊರಬಂದಿದ್ದ ಆರತಿ ಕೆಲ ತಿಂಗಳುಗಳಿಂದ ನಾಪತ್ತೆಯಾಗಿದ್ದಳು. ಈ ಹಿನ್ನೆಲೆಯಲ್ಲಿ ಆರತಿ ಪತ್ತೆಗೆ ಅಲ್ಲಿನ ಹೈಕೋರ್ಟ್‌ ಸೂಚಿಸಿತ್ತು. ಮಧ್ಯಪ್ರದೇಶದಿಂದ ಬಂದ ಬಳಿಕ ಬೆಂಗಳೂರು, ಚೆನ್ನೈನ ಸ್ಪಾಗಳಲ್ಲಿ ಮಸಾಜ್‌ ಮಾಡುವ ಕೆಲಸಕ್ಕೆ ಸೇರಿಕೊಂಡಿದ್ದಳು. ಸ್ಪಾಗಳಲ್ಲಿ ಕೆಲಸ ಮಾಡುವ ಶ್ರೀಮಂತ ಹುಡುಗಿಯರ ಸ್ನೇಹ ಸಂಪಾದಿಸಿ ಅವರ ವಿಶ್ವಾಸ ಗಳಿಸುತ್ತಿದ್ದಳು. ಬಳಿಕ ಅವರ ಮನೆಗಳಲ್ಲಿ ಉಳಿದು ಚಿನ್ನಾಭರಣ ಕದಿಯುತ್ತಿದ್ದಳು ಎಂಬ ಆರೋಪ ಇದೆ. ಈಕೆ ಸೋನು, ಸಮಂತ, ಆರತಿ ಅಗರವಾಲ್‌ ಸೇರಿ ವಿವಿಧ ಹೆಸರುಗಳಿಂದ ಪರಿಚಯಿಸಿಕೊಳ್ಳುತ್ತಿದ್ದಳು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next