ಪುತ್ತೂರು : ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಬಂಧಿಸಲ್ಪಟ್ಟ ಮೂವರು ಆರೋಪಿಗಳಿಗೆ ನ್ಯಾಯಾಲಯ ಷರತ್ತು ಬದ್ಧ ಮಧ್ಯಂತರ ಜಾಮೀನು ನೀಡಿದೆ.
ಇದನ್ನೂ ಓದಿ : ಸಂಪುಟ ಲೆಕ್ಕಾಚಾರ : ಒಬಿಸಿ ಸೇರಿದ 24 ಮಂದಿಗೆ ಸಚಿವ ಸ್ಥಾನ ನೀಡುವ ಯೋಜನೆಯಲ್ಲಿ ಮೋದಿ?
ಆರೋಪಿಗಳಾದ ನೆಟ್ಟಣಿಗೆ ಮುಡ್ನೂರು ಗ್ರಾಮದ ಕೊಟ್ಯಾಡಿ ಕಟ್ಟೆಪುಣಿ ನಿವಾಸಿ ಶಾಫಿ, ಸವಣೂರು ಗ್ರಾಮದ ಅತ್ತಿಕೆರೆ ನಿವಾಸಿ ಮಹಮ್ಮದ್ ಅಜರುದ್ದೀನ್ ಯಾನೆ ಅಜರ್, ಸವಣೂರು ಗ್ರಾಮದ ಮಾಂತೂರು ಅಂಬೇಡ್ಕರ್ ಭವನದ ಬಳಿಯ ನಝೀರ್ ಎಂ ಅವರಿಗೆ ಪುತ್ತೂರು ಅಡಿಷನಲ್ ಹಿರಿಯ ಜಡ್ಜ್ ಮತ್ತು ಪ್ರಥಮ ದರ್ಜೆ ನ್ಯಾಯಿಕ ನ್ಯಾಯಾಧಿಕಾರಿ ನ್ಯಾಯಾಲಯ ಮಧ್ಯಂತರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ನಝೀರ್ ಪರ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಮಹಮ್ಮದ್ ಶಾಫಿ ಪರ ದುರ್ಗಾಪ್ರಸಾದ್ ರೈ ಕುಂಬ್ರ, ಅಜರ್ ಪರ ನ್ಯಾಯವಾದಿ ಸಿದ್ದೀಕ್ ಮಂಗಳೂರು ವಾದಿಸಿದರು.
ಇದನ್ನೂ ಓದಿ : ಜಮೀನು ವಿವಾದ : ಜಿ.ಪಂ.ಮಾಜಿ ಉಪಾಧ್ಯಕ್ಷೆಯ ತಂದೆ ಕೊಲೆ; ಪುತ್ರನಿಗೆ ತೀವ್ರ ಗಾಯ