ಕಾಸರಗೋಡು: ಅರವತ್ತರ ಹರೆಯದ ವೃದ್ಧರೋರ್ವರನ್ನು ಬಲವಂತವಾಗಿ ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಿ ಬೆದರಿಕೆಯೊಡ್ಡಿ 5.45 ಲಕ್ಷ ರೂ. ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪಳ್ಳಿಕೆರೆ ಬಿಲಾಲ್ ನಗರ ಮಾಸ್ತಿಗುಡ್ಡೆಯ ಅಹಮ್ಮದ್ ಕಬೀರ್ ಯಾನೆ ಲಾಲಾ ಕಬೀರ್ (36) ನನ್ನು ಡಿವೈಎಸ್‌ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಕಬೀರ್ ಸಹಿತ ಇತರ ಆರೊಪಿಗಳು ಬೇಡಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲನಡ್ಕ ನಿವಾಸಿ ವೃದ್ಧರೋರ್ವರನ್ನು ದರೋಡೆ ಮಾಡಿದ್ದರು.
ಅ. 23ರ ಬೆಳಗ್ಗೆ ಈ ವೃದ್ಧನ ಮನೆಗೆ ಬಂದ ತಂಡ ಅವರನ್ನು ಕಾರಿನಲ್ಲಿ ಅಪಹರಿಸಿ ಮನೆಯಲ್ಲಿ ಕೂಡಿ ಹಾಕಿ ಮಹಿಳೆಯರೊಂದಿಗೆ ನಿಲ್ಲಿಸಿ ಫೋಟೋ ತೆಗೆದು, ಈ ಫೋಟೋವನ್ನು ತೋರಿಸಿ ಹಣ ನೀಡಬೇಕೆಂದೂ, ಇಲ್ಲದಿದ್ದಲ್ಲಿ ಫೋಟೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆಯೊಡ್ಡಿ 5.45 ಲಕ್ಷ ರೂ. ದರೋಡೆ ಮಾಡಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು.
ಈ ಪ್ರಕರಣದಲ್ಲಿ ಇಬ್ಬರು ಮಹಿಳೆಯರ ಸಹಿತ ಆರು ಮಂದಿಯ ವಿರುದ್ಧ ಬೇಡಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಆರೋಪಿ 13 ವರ್ಷದಿಂದ ತಲೆಮರೆಸಿಕೊಂಡಿದ್ದ
ಕೇರಳ, ಕರ್ನಾಟಕ, ತಮಿಳುನಾಡು, ರಾಜಸ್ತಾನ ಮೊದಲಾದ ರಾಜ್ಯಗಳಲ್ಲಿ ನಡೆದ ಹಲವು ಕಳವು ಪ್ರಕರಣದಲ್ಲಿ ಆರೋಪಿಯಾಗಿರುವ ಅಹಮ್ಮದ್ ಕಬೀರ್ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ನ್ಯಾಯಾಲಯ ಈತನನ್ನು ತಲೆಮರೆಸಿಕೊಂಡ ಆರೋಪಿಯಾಗಿ ಘೋಷಿಸಿತ್ತು. ಈತನ ವಿರುದ್ಧ ಕಾಸರಗೋಡು ಸಹಿತ ಹಲವು ಪೊಲೀಸ್ ಠಾಣೆಗಳಲ್ಲಿ ವಾರಂಟ್ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತನನ್ನು ಬಂಧಿಸಿದ ತಂಡದಲ್ಲಿ ಎಸ್‌ಐ ಲಕ್ಷಿ$¾à ನಾರಾಯಣನ್, ತೋಮಸ್, ಜಾಸ್ಮಿನ್, ಶಜೀಶ್, ಬೇಡಡ್ಕ ಎಸ್‌ಐ ಮುರಳೀಧರನ್ ಮೊದಲಾದವರಿದ್ದರು.