Advertisement

ಜೇನು ಹಬ್ಬ: ಮಕ್ಕಳಿಗೆ ಜೇನು ಕೃಷಿ ಮಾಹಿತಿ

05:18 PM May 23, 2019 | Team Udayavani |

ಜೋಯಿಡಾ: ತಾಲೂಕಿನ ಡೇರಿ ಗ್ರಾಮದಲ್ಲಿ ಪ್ರಕೃತಿ ಸಂಸ್ಥೆ ಶಿರಸಿ ಮತ್ತು ಜೇನು ಸಾಕಣಿಕೆದಾರರ ಸಂಘ ಡೇರಿ ಸಂಯುಕ್ತ ಆಶ್ರಯದಲ್ಲಿ ಜೋಯಿಡಾ ತಾಲೂಕಿನ ಪ್ರಥಮ ಜೇನು ಹಬ್ಬ ಆಚರಿಸಲಾಯಿತು.

Advertisement

ಡೇರಿಯಾ, ಕಾಟೇಲ, ವಾಗಬಂಧ, ಮುಡಿಯಾ, ಗೋಡಶೇತ ಮೈನೋಳ ಮತ್ತು ಲಾಂಡೆ ಗ್ರಾಮದ ಜೇನು ಕೃಷಿಕರು ಹಬ್ಬದಲ್ಲಿ ಭಾಗವಹಿಸಿದ್ದರು. ಪ್ರಕೃತಿ ಸಂಸ್ಥೆ§ಯ ಪಾಂಡುರಂಗ ಹೆಗಡೆ ಜೇನು ಸಾಕಣಿಕೆ ವೈಜ್ಞಾನಿಕವಾಗಿ ಮತ್ತು ಲಾಭದಾಯಕವಾಗಿ ಮಾಡುವುದರ‌ ಕುರಿತಿ ಮಾಹಿತಿ ನೀಡಿದರು. ಜೇನು ಕೃಷಿಕ ಯಲ್ಲಾಪುರದ ಧರ್ಮೇಂದ್ರ ಹೆಗಡೆ ಜೇನು ಪೆಟ್ಟಿಗೆಯಿಂದ ಜೇನು ಸಾಕಣಿ ಮತ್ತು ಅದರ ವೃದ್ಧಿ ಹಾಗೂ ರಕ್ಷಣೆ ಕುರಿತು ಮಾಹಿತಿ ನೀಡಿದರು.

ಜೋಯಿಡಾ ತಾಲೂಕು ಕುಣಬಿ ಸಮಾಜ ಅಧ್ಯಕ್ಷ ಜಯಾನಂದ ಡೇರೇಕರ ಜೋಯಿಡಾ ತಾಲೂಕಿನ ದಟ್ಟ ಅರಣ್ಯ ಪ್ರದೇಶದಲ್ಲಿರುವ ಕುಣಬಿ ಸಮುದಾಯದವರು ತಮ್ಮ ಕೃಷಿಯೊಂದಿಗೆ ಜೇನು ಸಾಕಣಿಕೆ ಮೂಲಕ ಕುಟುಂಬದ ಆದಾಯ ಹೆಚ್ಚಿಸಲು ಇರುವ ಅವಕಾಶಗಳ ಕುರಿತು ವಿವರಿಸಿದರು. ಜಿಪಂ ಸದಸ್ಯ ರಮೇಶ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ಯಲ್ಲಾಪುರದ ಜೇನು ಕೃಷಿಕ ಆರ್‌. ಜಿ. ಹೆಗಡೆ, ಕರ್ನಾಟಕ ಮುಕ್ತ ವಿವಿಯ ನಿವೃತ್ತ ಇಂಗ್ಲಿಷ್‌ ಪ್ರಾಧ್ಯಾಪಕ ಆರ್‌. ಪೂರ್ಣಿಮಾ, ಡೇರಿಯಾ ಗ್ರಾಮದ ಹಿರಿಯರಾದ ನಾನಾ ಡೇರೇಕರ, ಡೇರಿಯಾ ಗ್ರಾಮದ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಕೃತಿ ಸಂಸ್ಥೆಯ ಆರ್‌.ಪಿ. ಹೆಗಡೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next