Advertisement
ಕಾಡಂಚಿನಲ್ಲಿ ವ್ಯವಸಾಯ ಮಾಡುತ್ತಿರುವವರು ಬೆಳೆಗಳನ್ನು ಸದಾ ಎಚ್ಚರಿಕೆಯಿಂದ ಕಾವಲು ಕಾಯಬೇಕಾಗುತ್ತದೆ. ಅದರಲ್ಲಿಯೂ ಕಬ್ಬು, ಭತ್ತ, ಬಾಳೆ ಬೆಳೆಗಳಿರುವ ಕೃಷಿಭೂಮಿಗೆ ಕಾಡುಹಂದಿಗಳು, ಕಾಡಾನೆಗಳ ಕಾಟ ವಿಪರೀತ. ಇಂಥ ಜಾಗಗಳಲ್ಲಿ ಬೆಳೆಯನ್ನು ಬೆಳೆಯುವ ಶ್ರಮಕ್ಕಿಂತ ಅವುಗಳ ರಕ್ಷಣೆಯೇ ದೊಡ್ಡ ಸವಾಲು. ಬೆಳೆಯನ್ನು ಹಗಲಿರುಳೆನ್ನದೇ ಕಾಯಬೇಕು. ಕೆಲ ಸಲ ಹೀಗೆ ಕಾಯ್ದರೂ ಪ್ರಯೋಜನವಾಗುವುದಿಲ್ಲ.
Related Articles
Advertisement
ಜೇನಿನಿಂದ ಫಸಲಿಗೂ ಲಾಭಹೆಜ್ಜೆàನುಗಳು ತಾವಾಗಿಯೇ ಯಾರ ತಂಟೆಗೂ ಹೋಗುವುದಿಲ್ಲ; ಆದರೆ ಕೆಣಕಿದವರನ್ನು ಸುಮ್ಮನೆ ಬಿಡುವುದಿಲ್ಲ. ಶತ್ರುಗಳು ಸುಲಭವಾಗಿ ದಾಳಿ ಮಾಡಲಾಗದಷ್ಟು ಎತ್ತರದಲ್ಲಿ ಇವು ಗೂಡುಗಳನ್ನು ಕಟ್ಟುತ್ತವೆ. ಮಕರಂದ ಸಂಗ್ರಹಿಸಲು ಗೂಡಿರುವ ತಾಣದಿಂದ ಐದಾರು ಕಿಲೋಮೀಟರ್ ಸುತ್ತಳತೆಯವರೆಗೂ ಇವು ಹೋಗುತ್ತವೆ. ಬೆಳದಿಂಗಳ ರಾತ್ರಿಗಳಲ್ಲಿಯೂ ಇವುಗಳು ಮಕರಂದ ಸಂಗ್ರಹಿಸುವುದನ್ನು ಕಾಣಬಹುದು. ಇವುಗಳ ಪರಾಗಸ್ಪರ್ಶ ಕ್ರಿಯೆಯಿಂದ ಕೃಷಿಬೆಳೆಗಳು, ಅರಣ್ಯದ ಬೆಳೆಗಳು ಸಮೃದ್ಧ ಫಸಲು ನೀಡುತ್ತವೆ.ಹೆಜ್ಜೆàನುಗಳ ಉಗ್ರ ಸ್ವಭಾವ ಶತ್ರುಗಳು ಯಾರಾದರೂ ತಮ್ಮ ಗೂಡಿಗೆ ತೊಂದರೆ ಕೊಟ್ಟ ಪಕ್ಷದಲ್ಲಿ ಮೊದಲು ಕಾವಲುಗಾರ ಜೇನುನೊಣಗಳು ಇತರ ಜೇನುನೊಣಗಳಿಗೆ ಎಚ್ಚರಿಕೆ ನೀಡುತ್ತವೆ. ಗೂಡಿನ ಮೇಲ್ಭಾಗದಲ್ಲಿ ಸುತ್ತಲೂ ಹಾರಾಡುತ್ತಾ ಎಚ್ಚರಿಕೆ ಸಂದೇಶ ರವಾನಿಸುತ್ತವೆ. ಆಗ ಉಳಿದ ನೊಣಗಳು ಗೂಡಿನ ತಳಭಾಗದಲ್ಲಿ ಸೇರುತ್ತವೆ. ನಂತರ ಇವೆಲ್ಲವೂ ಒಟ್ಟಿಗೆ ಶತ್ರುವಿನ ಮೇಲೆ ದಾಳಿ ಮಾಡುತ್ತವೆ. ತಮ್ಮ ಶತ್ರುಗಳನ್ನು ಇವು ಸುಮಾರು ಮೂರು ನಾಲ್ಕು ಕಿಲೋಮೀಟರ್ ದೂರದವರೆಗೂ ಅಟ್ಟಿಸಿಕೊಂಡು ಹೋಗಿ ಚುಚ್ಚುತ್ತವೆ. ಇದರಿಂದ ಚರ್ಮ ಊದಿಕೊಂಡು ಭಾರಿ ಯಾತನೆ ಉಂಟಾಗುತ್ತದೆ. ಮತ್ತೆ ಅವು ಈ ಕಡೆ ತಲೆ ಹಾಕಬಾರದು ಆ ಮಟ್ಟಿಗಿನ ದಾಳಿಯನ್ನು ಜೇನುನೊಣಗಳು ಮಾಡುತ್ತವೆ. ಮೊದಲು ಗುರುತು, ನಂತರ ಕಚ್ಚುವಿಕೆ
ಕಾವಲುಗಾರ/ ಸೈನಿಕ ನೊಣಗಳು ಮೊದಲು ದಾಳಿ ಮಾಡುತ್ತವೆ. ಹೀಗೆ ದಾಳಿಗೊಳಗಾದ ಜೀವಿಯಿಂದ ವಿಶಿಷ್ಟ ರಾಸಾಯನಿಕ ಬಿಡುಗಡೆಯಾಗುತ್ತದೆ. ಇದು ಜೇನುಹುಳುಗಳಿಗಷ್ಟೆ ಅರಿವಾಗುತ್ತದೆ. ಅದೊಂದು ರೀತಿಯಲ್ಲಿ ಗುರುತು ಮಾಡಿದಂತೆ. ನಂತರ ಆ ವಾಸನೆಯ ಜಾಡು ಹಿಡಿದ ಇತರೆ ಜೇನುನೊಣಗಳು ಹಿಂಡಾಗಿ ಶತ್ರುವಿನ ಮೇಲೆ ದಾಳಿ ಮಾಡುತ್ತವೆ. ತೋಟಗಳು, ಕ್ಷೇತ್ರಬೆಳೆಗಳು ಇರುವ ಸ್ಥಳಗಳಲ್ಲಿ ಇವು ಇದ್ದರೆ ಕೃಷಿಕರಿಗೆ ತೊಂದರೆಯಾಗುವುದಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಆದರೆ ಜೇನುನೊಣಗಳು ತಮ್ಮ ಗೂಡಿನ ಬಳಿ ನಡೆಯುವ ಚಟುವಟಿಕೆಗಳಿಗೆ ಹೊಂದಿಕೊಂಡಿರುತ್ತವೆ. ಆದರೆ ವನ್ಯಮೃಗಗಳು ದಾಂಧಲೆ ಎಬ್ಬಿಸಿ ಗೂಡುಗಳ ಪ್ರಕ್ರಿಯೆಗೆ ಭಂಗ ತಂದಾಗ ಮಾತ್ರ ದಾಳಿ ಮಾಡುತ್ತವೆ. – ಕುಮಾರ ರೈತ