Advertisement

ಆಡಳಿತ ಸೌಧದಲ್ಲಿ 2ನೇ ಬಾರಿ ಹೆಜ್ಜೇನು ದಾಳಿ

05:53 PM Dec 17, 2022 | Team Udayavani |

ಎಚ್‌.ಡಿ.ಕೋಟೆ: ತಾಲೂಕು ಕೇಂದ್ರ ಸ್ಥಾನದ ಆಡಳಿತ ಸೌಧಕ್ಕೆ ವಿವಿಧ ಸರ್ಕಾರಿ ಕೆಲಸಗಳ ನಿಮಿತ್ತಆಗಮಿಸಿದ್ದ ಸಾರ್ವಜನಿಕರಿಗೆ ಆಡಳಿತ ಸೌಧದಲ್ಲಿದ್ದ ಹೆಜ್ಜೇನು ಹುಳುಗಳು ಹಠಾತ್‌ ದಾಳಿ ನಡೆಸಿದ ಪರಿಣಾಮ ಹಲವು ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ತಾಲೂಕಿನ ಶ್ರೀನಿವಾಸ್‌ ಕ್ಯಾತನಹಳ್ಳಿ, ಪದ್ಮಾ ದಡದಹಳ್ಳಿ, ಬಸವಣ್ಣ ಎಚ್‌.ಡಿ.ಕೋಟೆ, ದೇವರಾಜುಹೈರಿಗೆ, ಕಾಳಸ್ವಾಮಿ ತುಂಬಸೋಗೆ, ಪ್ರಕಾಶ ಜಕ್ಕಳ್ಳಿ,ಶಿವಕುಮಾರ್‌ ಹುಣಸೆಕುಪ್ಪೆ ಸೇರಿದಂತೆ ಒಟ್ಟು 8ಮಂದಿ ಹೆಜ್ಜೆàನು ಹುಳುಗಳ ದಾಳಿಗೆ ಸಿಲುಕಿ ಆಸ್ಪತ್ರೆಸೇರಿದ್ದು ಇವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ.

ಕಳೆದ 1 ವಾರದ ಹಿಂದೆಯೂ ಆಡಳಿತ ಸೌಧದ ಆವರಣದಲ್ಲಿ ಹೆಜ್ಜೇನುಹುಳುಗಳ ದಾಳಿಗೆ ಸಿಲುಕಿ ಹಲವು ಮಂದಿ ಗಾಯಗೊಂಡು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದುಕೊಂಡರೂ ತಾಲೂಕು ಆಡಳಿತ ಎಚ್ಚೆತ್ತು ಕಚೇರಿಯ ಗೋಡೆಗಳು ಕಿಟಕಿಗಳ ಮೇಲಿರುವ ಹೆಜ್ಜೇನು ತೆರುವುಗೊಳಿಸದೇ ಇರುವುದರಿಂದ ಮತ್ತೆ ಹೆಜ್ಜೇನು ದಾಳಿಗೆ ಸಲುಕಿ 8 ಮಂದಿ ಆಸ್ಪತ್ರೆ ಸೇರಬೇಕಾ ಸ್ಥಿತಿ ತಲೆದೂರಿದೆ.

ಶುಕ್ರವಾರ ಮಧ್ಯಾಹ್ನ ಆಡಳಿತ ಸೌಧದ ಆವರಣದಲ್ಲಿ ಹೆಜ್ಜೇನು ಹುಳುಗಳು ಹಠಾತ್‌ ದಾಳಿಗೆ ಮುಂದಾಗಿವೆ. ತಾಲೂಕಿನ ವಿವಿಧ ಕಡೆಗಳಿಂದ ಆಡಳಿತ ಸೌಧದ ಸರ್ಕಾರಿ ಕಚೇರಿಗಳ ವಿವಿಧ ಕೆಲಸಗಳ ನಿಮಿತ್ತ ಆಗಮಿಸಿದ್ದ ಹಲವರ ಮೇಲೆ ಹೆಜ್ಜೇನು ಹುಳುಗಳು ದಾಳಿ ನಡೆಸುತ್ತಿದ್ದಂತೆಯೇ ಬಹುಸಂಖ್ಯೆ ಮಂದಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಹುಳುಗಳ ದಾಳಿಗೆ ಸಿಲುಕಿನ ಮಂದಿ ಸಾರ್ವಜನಿಕ ರಸ್ತೆ ಮಾರ್ಗವಾಗಿ ರಕ್ಷಣೆಗಾಗಿ ಹಾತೊರೆಯುತ್ತಾ ಓಡಾಡಿದರೂ ಜೇನುಹುಳುಗಳು ಅವರನ್ನು ಕಾಡಿವೆ.

Advertisement

ಜೇನುಹುಳುಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ ಅವರನ್ನೇ ಜೇನುಹುಳುಗಳು ಹಿಂಬಾಲಿಸುತ್ತಿದ್ದನ್ನು ಕಂಡ ಸಾರ್ವಜನಿಕರೂ ಭಯಭೀತರಾಗಿ ಭಯದಿಂದಲೇ ಜಾಗ ಖಾಲಿಮಾಡಿದ್ದೂ ಉಂಟು. ಇನ್ನು ಜೇನುಹುಳಿಂದ ರಕ್ಷಿಸಿಕೊಳ್ಳಲು ಧರಿಸಿದ್ದ ಬಟ್ಟೆಯನ್ನೇ ಆಶ್ರಯ ಮಾಡಿಕೊಳ್ಳಲು ಯತ್ನಿಸಿದರೂ ಹುಳುಗಳ ಕಾಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಬಹುತೇಕ ಬೆಳಗಿನ ವೇಳೆ ಬಹುಸಂಖ್ಯೆ ಜನರು ಆಡಳಿತ ಸೌಧದಲ್ಲಿ ಕೆಲಸಕಾರ್ಯಗಳಿಗೆ ಆಗಮಿಸುವುದು ಸರ್ವೆ ಸಾಮಾನ್ಯವಾಗಿದ್ದು,ಮಧ್ಯಾಹ್ನದ ನಂತರ ಘಟನೆ ಸಂಭವಿಸಿರುವುದರಿಂದಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ವಾರದಲ್ಲೇ 2ನೇ ಬಾರಿ ಹೆಜ್ಜೇನು ಹುಳುಗಳ ದಾಳಿ ನಡೆದಿದೆಯಾದರೂ ತಾಲೂಕು ಆಡಳಿತ ತೆರವಿಗೆ ಕ್ರಮವಹಿಸದೇ ಇರುವುದಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಮುಂದೆ ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಇನ್ನಾದರೂ ಹೆಜ್ಜೆàನು ತೆರವಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಹೆಜ್ಜೇನು ದಾಳಿ 2ನೇ ಭಾರಿ ನಡೆದಿರುವುದು ಬೇಸರ ತಂದಿದೆ. ಭೀಮನಹಳ್ಳಿಯ ಜೇನು ತೆರವುಗೊಳಿಸುವವರಿಗೆ ಈಗಾಗಲೇ ವಿಚಾರಮುಟ್ಟಿಸಿ ಶತಾಯಗತಾಯ ಹೆಜ್ಜೆàನು ತೆರವು ಮಾಡಿಯೇ ತೀರುತ್ತೇವೆ. -ಕೆ.ಆರ್‌.ರತ್ನಾಂಬಿಕಾ, ತಹಶೀಲ್ದಾರ್‌

ತಾಲೂಕು ಕೇಂದ್ರ ಸ್ಥಾನದ ಆಡಳಿತ ಸೌಧದ ಗೋಡೆಗಳು ಕಿಟಕಿಗಳ ಮೇಲೆ ಭಾರೀ ಗಾತ್ರದ ಹೆಜ್ಜೇನುಗಳು ಇವೆಯಾದರೂ ಮುನ್ನೆಚ್ಚರಿಕೆಯಾಗಿ ತಾಲೂಕು ಆಡಳಿತ ಗಮನ

ಹರಿಸಿ ತೆರವುಗೊಳಿಸಬೇಕಿತ್ತು. 2 ಬಾರಿ ಹೆಜ್ಜೇನು ದಾಳಿಯಾದಾಗ ತೆರವಿಗೆ ಚಿಂತಿಸುವುದು ಎಷ್ಟು ಸರಿ. ಮುಂದೆ ಇಂತಹ ಘಟನೆ ಮತ್ತೆ ಮರುಕಳಿಸುವ ಮುನ್ನ ಎಚ್ಚರವಹಿಸಲಿ.-ಎಚ್‌.ಬಿ.ಪ್ರದೀಪ್‌, ಎಚ್‌.ಡಿ.ಕೋಟೆ

Advertisement

Udayavani is now on Telegram. Click here to join our channel and stay updated with the latest news.

Next